
ಬೆಂಗಳೂರು.ಸೆ,೦೧- ರಂಗಭೂಮಿ ಸಾಹಿತ್ಯ, ಸಾಂಸ್ಕೃತಿಕವಾಗಿ, ಶ್ರೀಮಂತವಾಗಿ ಉಳಿದಿದ್ದರೆ ಮೂಲ ಗ್ರಾಮಗಳಿಂದ ಸುತ್ತಮುತ್ತ ಮಾತ್ರ ಕಾಣಬಹುದಾಗಿದೆ. ರಂಗಭೂಮಿ ಜೀವನದ ಮುಖ್ಯ ಭಾಗವಾಗಿದ್ದು, ಪೌರಾಣಿಕ ನಾಟಕಗಳಿಂದ ಮಾತ್ರ ಮಾನವೀಯತೆ, ಸಂಸ್ಕಾರ, ಧರ್ಮದ ಹಾದಿಯಲ್ಲಿ ಸಾಗಲು ಮಾರ್ಗದರ್ಶಕ ಎಂದು ಶಾಸಕ ಮುನಿರತ್ನ ಅವರು ಹೇಳಿದರು.
ಕೆಂಗುಂಟೆಯಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ದಿವಂಗತ ಮುನಿವೆಂಕಟಪ್ಪ (ತಮ್ಮಯ್ಯಣ್ಣ) ಇವರ ಸವಿ ನೆನಪಿನಾರ್ತವಾಗಿ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ರಂಗಭೂಮಿ ಸತ್ಯ, ನ್ಯಾಯ, ಸಂಸ್ಕೃತಿ, ಎಲ್ಲರಲ್ಲಿಯೂ ಭಕ್ತಿ, ಒಳಿತನ್ನು ಕಲಿಸುವ ಪರಂಪರೆ ನಾಟಕಗಳಿವೆ ಎಂದರು.
ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಮಾಜಿಉಪಾಧ್ಯಕ್ಷರು ಆಗಿರುವ ರಂಗಭೂಮಿ ಕಲಾವಿದ ಎಂ.ಮಂಜುನಾಥ್ ಮಾತನಾಡಿ ರಂಗಭೂಮಿ ಎಲ್ಲಾ ಕಲಾ ಪ್ರಕಾರಗಳಿಗೆ ತಾಯಿ ಇದ್ದಂತೆ. ಇಲ್ಲಿನ ನಟನೆ, ನೃತ್ಯ, ಹಡುಗಾರಿಕೆ, ಹಾಸ್ಯ ಎಲ್ಲದರ ಹಂದರವೇ ರಂಗಭೂಮಿ, ನಟಸಾರ್ವಭೌಮ ಡಾ.ರಾಜ್‌ಕುಮಾರ್ ಸೇರಿದಂತೆ ದೇಶದ ಮೇರು ನಟರು ರಂಗಭೂಮಿ ಹಿನ್ನಲೆಯಿಂದಲೇ ಬಂದು ಬಹುದೊಡ್ಡ ನಟರಾಗುವ ಮೂಲಕ ವಿಶ್ವಖ್ಯಾತಿ ಪಡೆದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈಗಿನ ಆಧುನಿಕ ಮನರಂಜನಾ ಮಾಧ್ಯಮಗಳಿಗೂ ಮುಂಚೆ ಜನರ ಮನರಂಜನೆಗಾಗಿ ಇದ್ದದ್ದು. ರಂಗಭೂಮಿ ಮಾತ್ರ ಈಗ ಸಿನಿಮಾ, ಕಿರುತರೆ ಸೇರಿದಂತೆ ಹಲವು ರೀತಿಯ ಮಾದ್ಯಮಗಳೂ ಇದ್ದರೂ ರಂಗಭೂಮಿ ತನ್ನದೆ ಆದ ಮಹತ್ವ ಉಳಿಸಿಕೊಂಡಿ ಬಂದಿದೆ ಎಂದು ಹೇಳಿದರು,
ಈಗಿನ ಕಾಮಾಕ್ಷಿಪಾಳ್ಯ, ಮಲ್ಲತ್ತಹಳ್ಳಿ, ನಾಗರಭಾವಿ, ಕೊಟ್ಟಿಗೆಪಾಳ್ಯದಿಂದ ಹಿಡಿದು ತಾವರೆಕೆರೆ, ಯಶವಂತಪುರ ಹೋಬಳಿ ಸೇರಿ ಹಲವು ಪ್ರದೇಶಗಳು ರಂಗಭೂಮಿ ತವರಾಗಿದೆ. ಅತ್ಯುತ್ತಮ ಕಲಾವಿದರು ಇಲ್ಲಿದ್ದಾರೆ. ಆದರೂ ಇಲ್ಲಿ ರಂಗಭೂಮಿ ಚಟುವಟಿಕೆಗೆ ಪ್ರೇಕ್ಷಕರ ಕೊರತೆ ಜೊತೆಗೆ ಪ್ರೋತ್ಸಾಹವೂ ಕಡಿಮೆ, ಯುವಜನರು ಸಿನಿಮಾ, ಸಾಮಾಜಿಕ ಜಾಲತಾಣ, ಮೊಬೈಲ್‌ನತ್ತ ಮುಖ ಮಾಡಿದ್ದಾರೆ. ತಮ್ಮ ಮೂಲ ಮನರಂಜನೆಯಾದ ರಂಗಭೂಮಿಯನ್ನು ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜ್ಷಾನಭಾರತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಜಕುಮಾರಿ, ಕೆಂಗುಂಟೆ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ್, ಯೋಗೇಶ್, ಮುರಳಿ ಇದ್ದರು































