Home ಜಿಲ್ಲೆ ಬೆಂಗಳೂರು ರವಿಶಂಕರ್ ಆಶ್ರಮಕ್ಕೆ ಶರವಣ ಭೇಟಿ

ರವಿಶಂಕರ್ ಆಶ್ರಮಕ್ಕೆ ಶರವಣ ಭೇಟಿ

ಬೆಂಗಳೂರು, ಸೆ. ೧- ಶ್ರೀ ರವಿಶಂಕರ ಗುರೂಜಿಯವರ ಆಶ್ರಮಕ್ಕೆ ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷ ಉಪನಾಯಕ ಟಿ.ಎ. ಶರವಣ ಅವರು ಭೇಟಿ ನೀಡಿ, ಪೂಜ್ಯ ಗುರೂಜಿಯವರ ದರ್ಶನ ಪಡೆದು, ಅವರ ದಿವ್ಯ ಆಶೀರ್ವಾದವನ್ನು ಪಡೆದರು.


ಈ ಸಂದರ್ಭದಲ್ಲಿ ಗುರೂಜಿಯವ ರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕುರಿತು ಚರ್ಚಿಸಲಾಯಿತು. ಗುರುಜಿಯವರ ಸರಳತೆ, ಆಧ್ಯಾತ್ಮಿಕ ಚಿಂತನೆ ಹಾಗೂ ಸಮಾಜದ ಒಳಿತಿಗಾಗಿ ಅವರ ಸೇವಾ ಮನೋಭಾವ ಸದಾ ನಮಗೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.


ಗುರೂಜಿಯವರ ದಿವ್ಯ ಆಶೀರ್ವಾದವು ಜೀವನದಲ್ಲಿ ಶಾಂತಿ, ಸದ್ಬುದ್ಧಿ, ಸಕಾರಾತ್ಮಕ ಚಿಂತನೆ ಹಾಗೂ ಸಮಾಜಸೇವೆಯ ಹಾದಿಯಲ್ಲಿ ಮತ್ತಷ್ಟು ಶಕ್ತಿ ಮತ್ತು ಪ್ರೇರಣೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಗುರೂಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಸಮಾಜದ ಒಳಿತಿಗಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ಸಂಕಲ್ಪ ಮಾಡಲಾಯಿತು ಎಂದು ಶರವಣ ಹೇಳಿದರು.