
ಮುನವಳ್ಳಿ,ಸ.೧: ಯಕ್ಕುಂಡಿ ಗ್ರಾಮ ಪಂಚಾಯತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ ಮತ್ತು ಆಜೀವಿಕ ಮಿ?Àನ್ (ಗ್ರಾಮೀಣ) ಯೋಜನೆಯಡಿ ಸಿಪಿಟಿ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಹಾಗೂ ಕೂಲಿ ಕಾರ್ಮಿಕರಿಗೆ ವಿಬಿಜಿರಾಮ್ ಜಿ ಯೋಜನೆ ಹಾಗೂ ಜಾಬ್ ಕಾರ್ಡ್ ಮೇಳದ ಕುರಿತು ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಅಭಿಯಾನದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೈ ಪಿ ಬೊಳಶೆಟ್ಟಿ ಮಾತನಾಡಿ ಕೂಲಿಕಾರರಿಗೆ ವಿಬಿಜಿ ರಾಮ್ ಜಿ ಯೋಜನೆ ಉದ್ದೇಶ ಹಾಗೂ ಉಪಯೋಗ ಬಗ್ಗೆ ತಿಳಿಸಿದರು. ಕೂಲಿ ಮೊತ್ತ ೩೭೦ ರಿಂದ ೩೮೨ ರೂ. ಗೆ ಹೆಚ್ಚಿಸಿದ್ದು, ವಾರ್ಷಿಕ ಮಾನವ ದಿನಗಳು ೧೦೦ ರಿಂದ ೧೨೫ಗಳಿಗೆ ಹೆಚ್ಚಳವಾಗಿದ್ದು, ಇದರಿಂದ ವಾರ್ಷಿಕ ೪೭೭೫೦ ರೂಪಾಯಿವರೆಗೆ ಕೂಲಿ ಮೊತ್ತ ಬರುತ್ತದೆ ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು. ಮತ್ತು ಸೆಪ್ಟೆಂಬರ್ ೧೫ರ ವರೆಗೆ ಜಾಬ್ ಕಾರ್ಡ್ ಮೇಳ ಆರಂಭವಾಗಿದ್ದು, ಹೊಸ ಉದ್ಯೋಗ ಚೀಟಿ ಹಾಗೂ ಕುಟುಂಬ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸಲು ತಿಳಿಸಿದರು. ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ ಮಾತನಾಡಿ ನೂತನ ಯೋಜನೆಯಡಿ ೩೧೮ ಕಾಮಗಾರಿಗಳು ಮಾಡಲು ಅವಕಾಶವಿದ್ದು, ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೂಲಿ ಕೆಲಸದ ಜೊತೆಗೆ ಕೃಷಿಹೊಂಡ, ದನದ ಶೆಡ್, ಕುರಿ, ಮೆಕೆ ಸಾಕಾಣಿಕೆಗಾಗಿ ಶೆಡ್ ಗಳ ನಿರ್ಮಾಣ ಸೇರಿದಂತೆ ಹಲವು ವೈಯಕ್ತಿಕ ಕಾಮಗಾರಿಗಳು ಮತ್ತು ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು ಎಲ್ಲರೂ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ದಿನದ ಕೂಲಿ ಮೊತ್ತ, ಹಾಜರಾತಿ ಕ್ರಮ, ಕೆಲಸದ ಅವಧಿ, ರೋಜಗಾರ್ ಗ್ಯಾರಂಟಿ ಕಾರ್ಡ, ಕೂಲಿ ಪಾವತಿ ಕ್ರಮ ಸೇರಿದಂತೆ ವಿವಿಧ ವಿ?Àಯಗಳ ಕುರಿತು ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಯತಿ ಅಧ್ಯಕ್ಷೆ ಶೇಖವ್ವ ರವಿ ತಿಮ್ಮೇಶ,ಕಾರ್ಯದರ್ಶಿ ಸುಶೀಲಾ ವಿರೇಶನವರ, ತಾಂತ್ರಿಕ ಸಹಾಯಕ ಮಹಾಂತೇಶ ರಾಠೋಡ್, ಗ್ರಾಮ ಪಂಚಾಯತಿ ಸದಸ್ಯರಾದ ಹಸನಸಾಬ ಬಾರಿಗಿಡದ,ಕೃಷ್ಣಾ ಕಂಬಾರ,ಮAಜುನಾಥ ಪಮ್ಮಾರ,ಸುರೇಶ ಲಮಾಣಿ,ಈರಪ್ಪ ಮಾದರ,ಜಿಕೆಎಮ್ ಲಕ್ಷಿö್ಮÃ ಲಮಾಣಿ,ಮಲ್ಲಿಕಾರ್ಜುನ ಶಿಂದೋಗಿ ಕೂಲಿ ಕಾರ್ಮಿಕರು ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.































