
ನವಲಗುಂದ: ಭಾರತೀಯ ಸೈನ್ಯದಲ್ಲಿ ಸುಧೀರ್ಘವಾಗಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಹಮ್ಮದ ರಫಿಕ ಮಟ್ಟಿಗಾರ ಅವರ ಸೇವೆಯು ಸಾರ್ಥಕತೆಯನ್ನು ಹೊಂದಿದೆ ಎಂದು ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ನುಡಿದರು.
ಪಟ್ಟಣದ ಶಿಕ್ಷಕರ ಸಹಕಾರಿ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ನಿವೃತ್ತ ಯೋಧರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ದೇಶದಲ್ಲಿ ನಿಜವಾದ ಹೀರೋ ನಮ್ಮ ಸೈನಿಕರು, ನಾವು ಜೀವನದಲ್ಲಿ ಜನ್ಮ ಕೊಟ್ಟ ತಂದೆ-ತಾಯಿ, ಅನ್ನ ಕೊಟ್ಟ ರೈತ, ವಿದ್ಯೆ ಕೊಟ್ಟ ಗುರು ಹಾಗೂ ದೇಶ ಕಾದಂತಹ ಸೈನಿಕರನ್ನು ಮರೆಯಬಾರದು ಎಂದರು.
ಜನಸ್ನೇಹಿ ಪೊಲೀಸ್ ಠಾಣೆಯ ಪಿ.ಎಸ್.ಐ ಜನಾರ್ಧನ ಭಟ್ರಳ್ಳಿ ಮಾತನಾಡಿ ಭಾರತಿಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ಅವರು ಮಾಡಿರುವಂತಹ ತ್ಯಾಗ ಚಿರಋಣಿ, ಅವರು ಸೇವಾವಧಿಯಲ್ಲಿ ಮಾಡಿರುವಂತಹ ತ್ಯಾಗ ವರ್ಣಿಸಲು ಸಾಧ್ಯವಿಲ್ಲ, ಮೂವತ್ತು ವರ್ಷ ಸೇವೆ ಸಲ್ಲಿಸಿ ಮನೆಗೆ ಮರಳಿ ಬಂದಿದ್ದಾರೆ, ಸೈನಿಕರ ಧೈರ್ಯ, ಶೌರ್ಯಕ್ಕೆ ಸಾಟಿ ಯಾವುದು ಇಲ್ಲಾ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಬಿ ಕೊಪ್ಪದ ಮಾತನಾಡಿ ದೇಶದ ಗಡಿಯೊಳಗೆ ಚಳಿ ಮಳೆಯನ್ನು ಲೆಕ್ಕಿಸದೆ ದೇಶದ ಸೇವೆ ಸಲ್ಲಿಸಿ ಬಂದಿದ್ದು ಖುಷಿ ತಂದಿದೆ, ನಾವು ನೆಮ್ಮದಿಯಿಂದ ಇರಲು ಮೂಲ ಕಾರಣ ನಮ್ಮ ಸೈನಿಕರು, ಅವರು ತಮ್ಮ ಜೀವವನ್ನು ಲೆಕ್ಕಿಸದೆ ಹೊರಾಟ ಮಾಡಿ ಸೇವೆ ಸಲ್ಲಿಸಿ ಮಾತೃ ಭೂಮಿಗೆ ಬರುವುದು ಎಂದರೆ ಅದು ಮರು ಜನ್ಮ ಪಡೆದಂತೆ, ಅವರು ತಮ್ಮ ಕುಟುಂಬವನ್ನು ಬಿಟ್ಟು ಹೋಗುವುದು ಸಾಮಾನ್ಯವಾದ ಕೆಲಸವಲ್ಲ ಅಂತಹ ಸೈನಿಕರ ತ್ಯಾಗವನ್ನು ನಾವು ಸ್ಮರಿಸಬೇಕು ಎಂದರು.
ಈ ಮೊದಲು ನಿವೃತ್ತ ಯೋಧ ಮಹಮ್ಮದರಫಿಕ್ ಇಮಾಮಸಾಬ ಮಟ್ಟಿಗಾರ ಅವರು ತಮ್ಮ ಕುಟುಂಬಸ್ಥರೊAದಿಗೆ ಪಟ್ಟಣದ ರೈತಭವನದ ಪಕ್ಕದಲ್ಲಿನ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ, ರೈತ ಭವನದಲ್ಲಿ ಸನ್ಮಾನ ಸ್ವೀಕರಿಸಿ ನಂತರ , ತ್ಯಾಗವೀರ ಲಿಂಗರಾಜ ದೇಸಾಯಿಯವರ ಮೂರ್ತಿಗೆ ಮಾಲಾರ್ಪಣೆ, ಅಲ್ಲಿಂದ ಪೊಲೀಸ್ ಠಾಣೆಯಲ್ಲಿರುವ ಹುತಾತ್ಮ ಪೊಲೀಸರ ವೀರಗಲ್ಲಿಗೆ ಗೌರವ ಸಮರ್ಪಣೆ ಸಲ್ಲಿಸಿದ ನಂತರ ಶಿಕ್ಷಕರ ಸಹಕಾರಿ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಸೈಯ್ಯದ ಅಮಾನುಲ್ಲಾ ಖಾಜಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾಗನಗೌಡ್ರ ಪಾಟೀಲ್, ರಾಮಚಂದ್ರ ತಹಶೀಲ್ದಾರ, ರಾಯನಗೌಡ ಪಾಟೀಲ, ರಿಯಾಜಅಹ್ಮದ ಪಿರಜಾದೆ, ಸುಭಾಷಚಂದ್ರಗೌಡ್ರ ಪಾಟೀಲ್, ಎಮ್.ಜೆ ನದಾಫ, ಎನ್. ಕೆ ಕರ್ಜಗಿ, ಬಸನಗೌಡ ಪಾಟೀಲ್, ಮಂಜುನಾಥ ಸುಬೇದಾರ, ರವಿ ತೋಟದ, ಮಾಬುಸಾಬ ಯರಗುಪ್ಪಿ, ಬಶೀರಅಹ್ಮದ ಹುನಗುಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




















