
ಮಧುಗಿರಿ, ಜು. ೨೮- ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ರವರ ಹೇಳಿಕೆಯನ್ನು ಖಂಡಿಸುವುದಾಗಿ ಉಪನ್ಯಾಸಕ ಬಂದ್ರೆಹಳ್ಳಿ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ಕನ್ನಡ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪನವರ ಸಾಹಿತ್ಯ ಸಮ್ಮೇಳನದ ಲೆಕ್ಕವನ್ನು ಸಮ್ಮೇಳನಕ್ಕೆ ಹಣ ನೀಡಿದವರು ಮಾತ್ರ ಕೇಳಬೇಕು ಎಂಬ ಅವರ ಮಾತುಗಳು ಪಾಳೆಗಾರಿಕೆ ಸಂಸೃತಿಯನ್ನು ಪ್ರತಿಬಿಂಬಿಸುತ್ತವೆ. ಕಸಾಪ ಯಾವೊಬ್ಬ ವ್ಯಕ್ತಿಯ ಕಂಪನಿಯಲ್ಲ ವೈಯಕ್ತಿಕ ಆಸ್ತಿಯೂ ಅಲ್ಲ ಅದು ನಾಡಿನ ಸಂಸ್ಕೃತಿ, ಸಾಹಿತ್ಯ ಮತ್ತು ನೆಲ, ಜಲ ಇವುಗಳ ರಕ್ಷಣೆಗಾಗಿಯೇ ಹೊರತು ವ್ಯತಿಯೊಬ್ಬನ ಅವಕಾಶಗಳಿಗೆ ಅಲ್ಲ. ಈಗಾಗಲೇ ಇಂತಹ ಮನಸ್ಥಿತಿಯಿಂದಲೇ ರಾಜ್ಯಾಧ್ಯಕ್ಷರಾಗಿದ್ದ ಜೋಶಿ ಯವರನ್ನು ಪದಚ್ಯುತಗೊಳಿಸಲಾಗಿದೆ.
ಅದಾಗ್ಯೂ ಸಿದ್ದಲಿಂಗಪ್ಪ ನವರು ದೇಣಿಗೆ ನೀಡಿದವರು ಮಾತ್ರ ಲೆಕ್ಕ ಕೇಳಬಹುದೇ ಹೊರತು ಉಳಿದವರು ಕೇಳುವಂತಿಲ್ಲ ಎನ್ನುವುದು ದುರಹಂಕಾರದ ಪರಮಾವಧಿ ಇದು ಖಂಡನೀಯ.
ಇವರ ಮಾತಿನಂತೆ ನಡೆಯುವುದಾದರೆ ಕಸಾಪ ಆಡಳಿತ ಮೈಸೂರು ಅರಸರ ವ್ಯಾಪ್ತಿಯಲ್ಲೇ ಇರಬೇಕು. ಸರ್‌ಎಂ ವಿ ಅವರು ಭವಿಷ್ಯದ ದೂರದೃಷ್ಟಿಯ ಫಲ. ಈ ನಾಡಿನ ಹೆಮ್ಮೆಯಾಗಿ ಪರಿಷತ್ ಇದೆ. ಇದೊಂದು ಸಾರ್ವಜನಿಕ ಸಂಸ್ಥೆ ಎನ್ನುವುದನ್ನು ಮಾನ್ಯರು ಮರೆತಿರುವಂತಿದೆ. ದಯವಿಟ್ಟು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಎಲ್ಲ ಕಸಾಪ ಸದಸ್ಯರ ಕ್ಷಮೆ ಕೇಳಬೇಕು ಎಂದು ಉಪನ್ಯಾಸಕ ಬಂದ್ರೆ ಹಳ್ಳಿ ಕುಮಾರ್ ಆಗ್ರಹಿಸಿದ್ದಾರೆ.


































