Home ಜಿಲ್ಲೆ ಕಲಬುರಗಿ ರೇವೂರ್ ವಿರುದ್ಧ ಪ್ರಕರಣ ದಾಖಲಿಸಲು ದೂರು

ರೇವೂರ್ ವಿರುದ್ಧ ಪ್ರಕರಣ ದಾಖಲಿಸಲು ದೂರು

ಕಲಬುರಗಿ,ಜೂ 4: ಸಾರ್ವಜನಿಕ ಕಾರ್ಯಕ್ರಮದಲ್ಲಿ ದಿವಂಗತ ಕಮರ್‍ಉಲ್‍ಇಸ್ಲಾಂ ಅವರ ವಿರುದ್ಧ ದೋಷಪೂರಿತ ಆರೋಪ ಮಾಡಿದ್ದಕ್ಕಾಗಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್ ಅವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಗುಲ್ಬರ್ಗ ನಾಗರಿಕ ವೇದಿಕೆಯಿಂದ ಸ್ಟೇಷನ್ ಬಜಾರ್ ಠಾಣೆಗೆ ದೂರು ಸಲ್ಲಿಸಲಾಯಿತು.
ಈ ಹೇಳಿಕೆಗಳನ್ನು ಸಾರ್ವಜನಿಕವಾಗಿ ದೊಡ್ಡ ಪ್ರೇಕ್ಷಕರ ಮುಂದೆ ಮಾಡಲಾಗಿದ್ದು ಅವರ ಕುಟುಂಬ ಸದಸ್ಯರು, ಬೆಂಬಲಿಗರು, ಅಭಿಮಾನಿಗಳು ಮತ್ತು ಸಮುದಾಯದ ಸದಸ್ಯರಿಗೆ ತೊಂದರೆ ಉಂಟುಮಾಡಿದೆ. ಇದು ಸಮಾಜದ ವರ್ಗಗಳ ನಡುವೆ ಸಾಮರಸ್ಯವನ್ನು ಕೆಡಿಸಲು ಉದ್ದೇಶಿಸಲಾಗಿದೆ ಎಂದು ತೋರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸವಿತಾ ಹನಮಂತ್ ವಂಟಿ, ಸೈಯದ್ ಅಹ್ಮದ್,ಕಾಪ್ರ್ಯುರೇಟರ್ ಅಬ್ದುಲ್ ಹಮೀದ್, ಗೌಸ್ ಮತ್ತಿಮುಡ್, ಅಸ್ಗರ್ ಹುಸೇನ್,ನಯೀಮ್ ಖಾನ್ ಮತ್ತು ಇತರರು ಇದ್ದರು