Home ಜಿಲ್ಲೆ ಕುಂಬಾರಹಳ್ಳ ಪಿ.ಎಂ. ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಸಂಭ್ರಮದ ಆರಂಭೋತ್ಸವ

ಕುಂಬಾರಹಳ್ಳ ಪಿ.ಎಂ. ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಸಂಭ್ರಮದ ಆರಂಭೋತ್ಸವ

ಜಮಖಂಡಿ:ಜೂ.2: ತಾಲೂಕಿನ ಕುಂಬಾರಹಳ್ಳ ಗ್ರಾಮದ ಪಿ.ಎಂ. ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಆವರಣವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಆತ್ಮೀಯ ಸ್ವಾಗತ ನೀಡಲಾಯಿತು. ಮಕ್ಕಳಿಗೆ ಹೂವು ಹಾಗೂ ಪುಸ್ತಕಗಳನ್ನು ನೀಡಿ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ, “ಮಕ್ಕಳು ಮನುಕುಲದ ಬೆಳಕಾಗಿದ್ದು, ಅವರಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶಾಲೆಯ ಮೊದಲ ದಿನದಿಂದಲೇ ಮಕ್ಕಳು ಹಾಜರಾಗುವುದರಿಂದ ಅವರ ಭವಿಷ್ಯದ ನಿರ್ಮಾಣ ಸುಲಭವಾಗುತ್ತದೆ” ಎಂದು ಹೇಳಿದರು.
ಎಸ್‍ಡಿಎಂಸಿ ಅಧ್ಯಕ್ಷ ನಿಂಗಪ್ಪ ತೇರದಾಳ, ಸದಸ್ಯರಾದ ಯಮನಪ್ಪ ಮಾಂಗ, ಸದಾಶಿವ ಮಾಳಿ, ಶ್ರೀಮತಿ ಪದ್ಮವ್ವ ಹುದಲಿ, ಶೈಲಾ ಮಾಳಿ ಹಾಗೂ ಶಿಕ್ಷಕ ವೃಂದದವರು ಮಕ್ಕಳಿಗೆ ಹೂಗುಚ್ಚ ನೀಡಿ ಶಾಲೆಗೆ ಆಮಂತ್ರಿಸಿ ಶುಭ ಕೋರಿದರು.
ಶಿಕ್ಷಕರಾದ ಬಾಹುಬಲಿ ಮುತ್ತೂರ, ಸಂಗನಬಸವ ಉಟಗಿ, ಚಂದ್ರಕಾಂತ ಪೆÇೀಲಿಸ್, ಅಶೋಕ ಬಿರಾದಾರಪಾಟೀಲ, ಶಾರದಾ ಮಠ, ಸವಿತಾ ಬೆನಕಟ್ಟಿ, ಮಂಜುಳಾ ಕಡಕೋಳ, ಆಸೀಫಾಭಾನು ಮೋಮಿನ್ ಹಾಗೂ ಶಕುಂತಲಾ ಬಿರಾದಾರ ಉಪಸ್ಥಿತರಿದ್ದು ಮಕ್ಕಳಿಗೆ ಸ್ವಾಗತ ಕೋರಿದರು.
ಶಿಕ್ಷಕಿ ಶಾರದಾ ಮಠ ಕಾರ್ಯಕ್ರಮವನ್ನು ಸ್ವಾಗತಿಸಿದರೆ, ಶಿಕ್ಷಕ ಸಂಗನಬಸವ ಉಟಗಿ ವಂದಿಸಿದರು.