
ಬೀದರ್ ಜು 31: ಪೆÇಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್ ಪೆÇಲೀಸ್ ಕಾನಸ್ಟೇಬಲ್ ಹುದ್ದೆಗಳಿಗೆ ಬೀದರ ನಗರದಲ್ಲಿ ಆಗಸ್ಟ್ 2ರಂದು ಭಾನುವಾರ ಜರುಉವ ಲಿಖಿತ ಪರೀಕ್ಷೆಗಾಗಿ ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದಂತೆ ಯಶಸ್ವಿಯಾಗಿ ನಡೆಸಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಿಖಿತ ಪರೀಕ್ಷೆಯು ನಗರದ 17 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಆಗಸ್ಟ 2ರ ಬೆಳಿಗ್ಗೆ 10 ಗಂಟೆಗೆ ಕಲ್ಯಾಣ ಕರ್ನಾಟಕ ಮಿಕ್ಕುಳಿದ ಅಭ್ಯರ್ಥಿಗಳಿಗೆ ಪರೀಕ್ಷೆ ಸಮಯ ನಿಗಧಿಯಾಗಿದ್ದು, ಒಟ್ಟು 4,745 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸಂಜೆ 4 ಗಂಟೆಯಿಂದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಸಮಯ ನಿಗಧಿಯಾಗಿದ್ದು, ಒಟ್ಟು 5,882 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿರುವ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ತಮಗೆ ಸೂಚಿಸಿದ ಸಮಯಕ್ಕೆ ಹಾಜರಾಗಿ ಕಟ್ಟುನಿಟ್ಟಾಗಿ ಸೇವೆ ಸಲ್ಲಿಸಬೇಕು. ಕೇಂದ್ರಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ, ಬೆಳಕು, ಫ್ಯಾನ್ ವ್ಯವಸ್ಥೆ ನೋಡಿಕೊಳ್ಳುವುದು ಆಯಾ ಕೇಂದ್ರ ಮುಖ್ಯ ಅಧೀಕ್ಷಕರ ಜವಾಬ್ದಾರಿಯೆಂದು ತಿಳಿಸಿದರು.
ಪ್ರತಿ ಕೇಂದ್ರಕ್ಕೆ ವಿಕ್ಷಕರನ್ನು ಕಸ್ಟೋಡಿಯನ್ ಹಾಗೂ ಡ್ರೇಸ್ ಕೋಡ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರಶ್ನೆ ಪತ್ರಿಕೆ ಹಾಗು ಓ.ಎಂ.ಆರ್ ಪತ್ರಿಕೆ ತಲುಪಿಸಲು 6 ರೂಟ್ ಅಧಿಕಾರಿಗಳನ್ನು ನೇಮಿಸಲಾಗಿದೆ. ತಹಶೀಲ್ದಾರರ ಜವಬ್ದಾರಿಯಿಂದ ಮೇಲ್ವಿಚಾರಣೆ ಮಾಡಬೇಕೆಂದರು.
ಎಲ್ಲ 17 ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಕೆಯಾಗಿರಬೇಕು. ಪೆÇಲೀಸ್ ಅಧಿಕಾರಿಗಳು ಹಾಗೂ ಆಯಾ ಕಾಲೇಜು ಪ್ರಾಂಶುಪಾಲರು ಅಗತ್ಯ ಸಿದ್ಧತೆ ನಡೆಸಿಕೊಳ್ಳಬೇಕೆಂದರು. ಅಭ್ಯರ್ಥಿಗಳ ವಿವರಗಳನ್ನು ಸ್ಕಾನ್ ಮಾಡಲು ಡಿಪೆÇ್ಲೀಮಾ ಕಾಲೇಜಿನ ಉಪನ್ಯಾಸಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. 17 ಕೇಂದ್ರಗಳ ಸುತ್ತಲೂ 200 ಮೀಟರ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಡ್ರೆಸ್ ಕೋಡ್ ವಿವರ ಇಂತಿದೆ: ಪರೀಕ್ಷಾರ್ಥಿಗಳು ಉದ್ದ ತೋಳುಗಳ ಡ್ರೆಸ್‍ಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗುವಂತಿಲ್ಲ, ಕಿವಿ, ತಲೆ ಮತ್ತು ಮುಖ ಮುಚ್ಚುವಂತಹ ಯಾವುದೇ ಉಡುಪುಗಳನ್ನು ಧರಿಸಿಕೊಂಡು ಬರಬಾರದು. ಯಾವುದೇ ಆಭರಣ ಅಥವಾ ಲೋಹದ ವಸ್ತುಗಳನ್ನು (ಅಂದರೆ ಮೂಗುತಿ ಮತ್ತು ಮಂಗಳಸೂತ್ರವನ್ನು ಹೊರತುಪಡಿಸಿ) ಧರಿಸಬಾರದು. ಚಪ್ಪಲಿಗಳು ಕಡಿಮೆ ಹಿಮ್ಮಡಿ ಇರುವ ಸ್ಯಾಂಡಲ್ಗಳನ್ನು ಧರಿಸುವುದು ಉತ್ತಮ, ಮುಖ್ಯವಾಗಿ ಶೂಗಳನ್ನು ಹಾಕಿಕೊಂಡು ಬರುವಂತಿಲ್ಲ.
ಶ್ರವಣ ಸಾಧನ ಅಥವಾ ಕಿವಿ ಆಂತರಿಕ ಉಪಕರಣ ಬಳಸುವ ವಿಶೇಷ ಚೇತನ ಅಭ್ಯರ್ಥಿಗಳಿಗೆ ಮಾರ್ಗಸೂಚಿಗಳು ಇಂತಿವೆ: ಶ್ರವಣ ಸಾಧನ ಅಥವಾ ಕಿವಿ ಆಂತರಿಕ ಉಪಕರಣ ಬಳಸಿಕೊಂಡು ಪರೀಕ್ಷೆಗೆ ಹಾಜರಾಗುವ ವಿಶೇಷ ಚೇತನ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೆ 2 ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಯುಡಿಐಡಿ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರಗಳೊಂದಿಗೆ ವರದಿ ಮಾಡಿಕೊಳ್ಳಬೇಕು. ಅವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ ಶ್ರಾವಣ ಸಾಧನಗಳೊಂದಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು.
ಯಾವುದಾದರೂ ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಛಿಸುವವರು ಪರೀಕ್ಷೆ ಆರಂಭಕ್ಕೆ 2 ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು. ಅವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಜನಿವಾರ, ಶಿವದಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ ಎಂದವರು ಹೇಳಿದರು.
ಪರೀಕ್ಷಾ ಕೇಂದ್ರಕ್ಕೆ ನಿಷೇಧಿತ ವಸ್ತುಗಳ ಕುರಿತು ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ: ಯಾವುದೇ ಸಂದರ್ಭದಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಈ ಕೆಳಗಿನ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ಇರುವುದಿಲ್ಲ.
ನಿಷೇದಿತ ವಸ್ತುಗಳು: ಪಠ್ಯ ಸಾಮಗ್ರಿಗಳು: ಪುಸ್ತಕಗಳು, ಬರೆದಿಟ್ಟಿರುವ ಅಥವಾ ಮುದ್ರಿತ ಚೀಟಿಗಳು, ಜ್ಯಾಮಿಟ್ರಿ ಬಾಕ್ಸ್, ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ಸ್ಕೇಲ್, ಬರೆಯುವ ಪೇಪರ್, ಪೆನ್ ಡ್ರೈವ್, ಇರೇಸರ್, ಲಾಗ್ ಟೇಬಲ್, ಎಲೆಕ್ಟ್ರಾನಿಕ್ ಪೆನ್, ಸ್ಕಾನರ್ ಸೇರಿದಂತೆ ಯಾವುದೇ ಅಧ್ಯಯನ ಅಥವಾ ಬರವಣಿಗೆ ಸಾಮಗ್ರಿಗಳು. ವೈಯಕ್ತಿಕ ವಸ್ತುಗಳು: ವಾಲೆಟ್, ಗಾಗಲ್ಸ್, ಕೈಚೀಲ, ಬೆಲ್ಟ್, ಕ್ಯಾಪ್ ಸೇರಿದಂತೆ ಇತರೆ ವೈಯಕ್ತಿಕ ವಸ್ತುಗಳು.
ಗುಪ್ತ ಸಂವಹನ ಸಾಧನಗಳು: ಮೈಕ್ರೋಚಿಪ್, ಕ್ಯಾಮೆರಾ, ಬ್ಲೂಟೂತ್ ಸಾಧನಗಳು ಹಾಗೂ ಅನ್ಯಾಯದ ವಿಧಾನಗಳಿಗೆ ಬಳಸಬಹುದಾದ ಯಾವುದೇ ಗುಪ್ತ ಎಲೆಕ್ಟ್ರಾನಿಕ್ ಸಾಧನಗಳು.
ಆಧುನಿಕ ಸಂವಹನ ಸಾಧನಗಳು: ಮೊಬೈಲ್ ಫೆÇೀನ್, ಮೈಕ್ರೋಫೆÇೀನ್, ಪೇಜರ್ ಸೇರಿದಂತೆ ಯಾವುದೇ ಆಧುನಿಕ ಸಂವಹನ ಸಾಧನಗಳು.
ಮಣಿಕಟ್ಟು ವಸ್ತುಗಳು: ಯಾವುದೇ ರೀತಿಯ ಗಡಿಯಾರ, ಕೈಗಡಿಯಾರ, ಸ್ಮಾರ್ಟ್ ವಾಚ್, ಬಳೆ, ಕ್ಯಾಮೆರಾ ಸೇರಿದಂತೆ ಮಣಿಕಟ್ಟಿಗೆ ಧರಿಸುವ ಅಥವಾ ಎಲೆಕ್ಟ್ರಾನಿಕ್ ಸಾಧನಗಳು.
ಆಹಾರ ಮತ್ತು ಪಾನೀಯ: ತೆರೆದಿರುವ ಅಥವಾ ಪ್ಯಾಕ್ ಮಾಡಲಾದ ಯಾವುದೇ ಆಹಾರ ಪದಾರ್ಥಗಳು ಹಾಗೂ ನೀರಿನ ಬಾಟಲಿಯನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯಲು ಅನುಮತಿ ಇರುವುದಿಲ್ಲ. ಅಭ್ಯರ್ಥಿಗಳು ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರದಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವನಾಂದ ಕರಾಳೆ ಹಾಗೂ ಡಿ.ಡಿ.ಪಿ.ಯು. ವೇದಿಕೆಯಲ್ಲಿದ್ದರು. ಆಯಾ ಕಾಲೇಜಿನ ಪ್ರಾಂಶುಪಾಲರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






























