
ಬೀದರ್: ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿ (ಸಿಡ್ಕೊ) ವತಿಯಿಂದ ಇಲ್ಲಿಯ ರೈಲು ನಿಲ್ದಾಣ ಸಮೀಪ ಈಚೆಗೆ ೧೦೦ ಜನರಿಗೆ ಉಚಿತ ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.
ನಿರ್ಗತಿಕರು, ವೃದ್ಧರು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಮಂಡಳಿ ಪ್ರತಿನಿಧಿಗಳು ಆಹಾರ ಪೊಟ್ಟಣ ವಿತರಿಸಿದರು.
ಮಂಡಳಿಯ ಅಧ್ಯಕ್ಷ ಎಸ್.ಕೆ. ಠಾಕೂರ್, ವ್ಯವಸ್ಥಾಪಕ ನಿರ್ದೇಶಕ ಅಭಿಷೇಕಕುಮಾರ ಹಾಗೂ ಭಾನು ತಿವಾರಿ ಅವರ ಮಾರ್ಗದರ್ಶನದಲ್ಲಿ ದೇಶದಾದ್ಯಂತ ಮಂಡಳಿಯ ಶಾಖೆಗಳಲ್ಲಿ ಪ್ರತಿ ಶನಿವಾರ ನಿರ್ಗತಿಕರು, ಅವಶ್ಯಕತೆ ಇರುವವರು ಹಾಗೂ ಸಾರ್ವಜನಿಕರಿಗೆ ಉಚಿತ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ ಎಂದು ಮಂಡಳಿಯ ದಕ್ಷಿಣ ವಲಯ ಅಭಿವೃದ್ಧಿ ಅಧಿಕಾರಿ ಮಿಲಿಂದ್ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಬರುವ ದಿನಗಳಲ್ಲಿ ಮಂಡಳಿಯಿAದ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶ ಇದೆ ಎಂದು ಹೇಳಿದರು.
ಮಂಡಳಿಯ ಜೈರಾಜ್, ಗೋರಕನಾಥ, ರವಿ, ಆನಂದ, ಮೋನಿಕಾ, ಅನ್ನಪೂರ್ಣ ಮತ್ತಿತರರು ಇದ್ದರು.






























