
ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೨: ಚಿಕ್ಕ ವಯಸ್ಸಿನಲ್ಲಿದ್ದಾಗ ಚೆನ್ನಬಸವಣ್ಣ ಬಹಳ ತುಂಟನಾಗಿದ್ದರೂ, ಅನುಭಾವದ ನೆಲೆಯಲ್ಲಿ ಜ್ಞಾನದಿಂದ ಹಿರಿಯನಾಗಿದ್ದ. ಅನುಭವ ಮಂಟಪದಲ್ಲಿ ಭಾಗವಹಿಸಿ ವಚನಗಳನ್ನು ಹಾಡಿ, ಹರಿಸಿ ಉನ್ನತವಾದ ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದ. ಶರಣ ಬಳಗವನ್ನು ಮಂತ್ರ ಮುಗ್ಧರನ್ನಾಗಿಸುವಷ್ಟು ಅಪ್ರತಿಮ ಪ್ರತಿಭಾನ್ವಿತನಾಗಿದ್ದ. ಈತನು ವಚನಗಳನ್ನು ಪರಶೀಲಿಸಿ ತೀರ್ಮಾನ ಮಾಡಿ. ಮುದ್ರೆ ಹಾಕಿದ ಮೇಲೆಯೇ ವಚನಗಳು ಅಂಗೀಕಾರವಾಗುತ್ತಿದ್ದವು. ಶರಣ ಸಂಕುಲದಿAದ ‘ಷಟ್‌ಸ್ಥಲ ಜ್ಞಾನಿ’ ಎಂದು ಕರೆಸಿಕೊಂಡ ಶ್ರೇಷ್ಠ ಅನುಭಾವಿ ಶರಣ ಚೆನ್ನಬಸವಣ್ಣ
ಎಂದು ಚಡಚಣ ಶ್ರೀ ಸಂಗಮೇಶ್ವರ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಎಂ.ಎಸ್.ಮಾಗಣಗೇರಿ ಮನೋಜ್ಞವಾಗಿ ನೈಜವಾಗಿ ತಿಳಿಸಿದರು.
ನಗರದ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರವು ಚಿಂತನ-ಸಾAಸ್ಕೃತಿಕ ಬಳಗ ಹಮ್ಮಿಕೊಂಡ ಅನುಭಾವಿಗಳು ಮರುಭೆಟ್ಟಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಅನುಭಾವ ಎಂಬುದು ನೆಲದೊಳಗಿನ ಖನಿಜ, ಅಂತರAಗದ ಶುದ್ಧೀಕರಣ. ನಡೆ-ನುಡಿ, ಗುರುಸೇವೆ, ಲಿಂಗಪೂಜೆ, ಜಂಗಮ ತೃಪ್ತಿ, ಶರಣರ ಅನುಭಾವದ ಕುರಿತು ಮಾರ್ಮಿಕವಾಗಿ
ಹೇಳಿದ ಚೆನ್ನಬಸವಣ್ಣ ಶೂನ್ಯ ಸಿಂಹಾಸನ ಪೀಠದ ಅಧ್ಯಕ್ಷನಾಗಿದ್ದನು” ಎಂದು ಹೇಳಿದರು.ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ವಿ.ಡಿ.ಐಹೊಳ್ಳಿ ಅವರು ಅಲ್ಲಮಪ್ರಭುವಿನಿಂದ ‘ದಾರ್ಶನಿಕ’ ಎಂದು ಕರೆಸಿಕೊಂಡ
ಚನ್ನಬಸವಣ್ಣನ ಅನುಭಾವ ಸಾಗರದಷ್ಟು ವಿಶಾಲ. ಅನುಭವ ಮಂಟಪದಲ್ಲಿ ಎಲ್ಲರೂ ಚರ್ಚಿಸಿದ ಮೇಲೆ ಆ ವಚನಗಳನ್ನು ಚೆನ್ನಬಸವಣ್ಣನ ಅಂತಿಮ ನಿರ್ಣಯದೊಂದಿಗೆ ಗ್ರಂಥಭAಡಾರಕ್ಕೆ ಸೇರುತ್ತಿದ್ದವು ಎಂದು. ಬಿ.ಆರ್.ಬನಸೋಡೆ ಪ್ರಾರ್ಥಿಸಿದರು. ಡಾ. ಸುಭಾಸ ಕನ್ನೂರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಿ.ಎಂ.ಪಾಟೀಲ, ಡಾ. ಎಂ.ಎಸ್.ಮದಭಾವಿ, ಡಾ. ಆರ್.ಕೆ.ಕುಲಕರ್ಣಿ, ಎಂ.ಎಸ್.ಚಾದದಕವಟೆ ಮತ್ತಿತರರು ಇದ್ದರು.






























