Home ಜಿಲ್ಲೆ ಕರ್ನಾಟಕ ರಕ್ಷಣಾ ವೇದಿಕೆಯ ಬೀದರ ಜಿಲ್ಲಾ ಉಪಾಧ್ಯಕ್ಷರಾಗಿ ಚಂದ್ರಕಾAತ ಹೆಗಡೆ ನೇಮಕ

ಕರ್ನಾಟಕ ರಕ್ಷಣಾ ವೇದಿಕೆಯ ಬೀದರ ಜಿಲ್ಲಾ ಉಪಾಧ್ಯಕ್ಷರಾಗಿ ಚಂದ್ರಕಾAತ ಹೆಗಡೆ ನೇಮಕ

ಬೀದರ, ಜು. ೨೯: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ಬೀದರ ಜಿಲ್ಲಾ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಚಂದ್ರಕಾAತ ಶರಣಪ್ಪ ಹೆಗಡೆ ಅವರನ್ನು ನೇಮಕ ಮಾಡಲಾಗಿದೆ.

ನಗರದ ಹಬ್ಸಿಕೋಟ್ ಅತಿಥಿ ಗೃಹದಲ್ಲಿ ಶನಿವಾರ ನಡೆದ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ಜಿಲ್ಲಾ ಘಟಕದ ಸಭೆಯಲ್ಲಿ ಈ ನೇಮಕಾತಿ ಮಾಡಲಾಗಿದ್ದು, ಜಿಲ್ಲಾ ಅಧ್ಯಕ್ಷ ಚರಣಜೀತ ಆಣದೂರೆ ಅವರು ನೇಮಕಾತಿ ಆದೇಶವನ್ನು ಪ್ರಕಟಿಸಿದ್ದಾರೆ.

ಚಂದ್ರಕಾAತ ಹೆಗಡೆ ಅವರು ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದು, ಜಿಲ್ಲೆಯಾದ್ಯಂತ ಸಂಘಟನೆಯ ಚಟುವಟಿಕೆಗಳನ್ನು ವಿಸ್ತರಿಸಲು ಶ್ರಮಿಸಲಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಸಭೆಯಲ್ಲಿ ಬಾಲಾಜಿ ಪಾಟೀಲ, ಚಂದು ಗುಪ್ತಾ, ಮಹಾದೇವ ಕಾರ್ಲೆಕರ್, ಸುನೀಲ ಕಾಲೇರ್ಕರ್, ಖಮರ್ ಮುಲ್ಲಾ, ಸಚಿನ್ ಹೆಗಡೆ, ದಿನೇಶ್ ಹೆಗಡೆ, ಶಶಿಕಾಂತ ಹೆಗಡೆ, ಧನರಾಜ ಸಾಂಗ್ವಿಕರ್, ರಾಕೇಶ್ ದಂಡಿ, ನಿತೀಶ್ ಸಕ್ಪಾಲ್, ಆನಂದ ಹಾಗೂ ನಿಖಿಲ್ ಕಾರಂಜೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.