Home ಜಿಲ್ಲೆ ಕಲಬುರಗಿ ಸಾಹಿತ್ಯ ಸಾಮ್ರಾಟ ಅಣ್ಣಾ ಭಾವು ಸಾಠೆ ಜಯಂತಿ ಆಚರಣೆ

ಸಾಹಿತ್ಯ ಸಾಮ್ರಾಟ ಅಣ್ಣಾ ಭಾವು ಸಾಠೆ ಜಯಂತಿ ಆಚರಣೆ

ಕಲಬುರಗಿ : ಸಾಹಿತ್ಯ ಸಾಮ್ರಾಟ ಅಣ್ಣಾ ಭಾವು ಸಾಠೆ ಅವರ ಜಯಂತ್ಯೋತ್ಸವವನ್ನು ಶನಿವಾರ ನಗರದ ಸುವರ್ಣ ಕನ್ನಡ ಭವನದಲ್ಲಿ ಅಣ್ಣಾ ಭಾವು ಸಾರೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿ ಮಾತನಾಡಿ, ಅಣ್ಣಾ ಭಾವು ಸಾಠೆ ಅವರ ಸಾಹಿತ್ಯ ಮತ್ತು ಸಾಮಾಜಿಕ ಹೋರಾಟಗಳು ಇಂದಿನ ಪೀಳಿಗೆಗೆ ಮಾರ್ಗದರ್ಶನವಾಗಿವೆ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಶೋಷಿತರ ಪರ ಅವರ ಚಿಂತನೆಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕೆಂದು ಹೇಳಿದರು .
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮಹಾವಿದ್ಯಾಲಯದ ಉಪನ್ಯಾಸಕ ಅರುಣ ಜೋಳದಕೂಡ್ಲಗಿ ಮಾತನಾಡಿ, ಅಣ್ಣಾ ಭಾವು ಸಾಠೆ ಅವರ ಸಾಹಿತ್ಯವು ಶೋಷಿತ ಸಮುದಾಯದ ಧ್ವನಿಯಾಗಿದ್ದು, ಅವರ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದೆ,ಅವರ ಸಾಹಿತ್ಯ ಮಾರಾಠಿ ಭಾಷೆಯಲ್ಲಿದ್ದು ಕನ್ನಡಕ್ಕೆ ಭಾಷಾಂತರ ಮಾಡಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಸರಕಾರ ಮಾಡಬೇಕಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಾಮಕನೂರ್,ಸಾಹಿತಗಳಾದ ಆರ್ ಕೆ ಹುಡಗಿ ,ನಿವೃತ್ತ ನ್ಯಾಯಾಧೀಶರಾದ ಜಿ ಕೆ ಗೋಖಲೆ , ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್ ,ನ್ಯಾಯವಾದಿ ಬಸಣ್ಣಾ ಸಿಂಗೆ ಮಾಜಿ ಮೇಯರ್ ಅಬ್ಸಹಾಳ್ ಮಲ್ಲಪ್ಪ ವೇದಿಕೆ ಮೇಲಿದ್ದರು .
ಕಾರ್ಯಕ್ರಮದಲ್ಲಿ ಮೌಲಾಮುಲ್ಲಾ ಸ್ವಾಗತಿಸಿದರು. ಎ. ಬಿ. ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು. ದತ್ತಾತ್ರೇಯ ಇಕ್ಕಳಕಿ ವಂದನಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಈಶ್ವರ್ ಕಟ್ಟಿಮನಿ ,ಹಣಮಂತರಾವ್ ದೊಡ್ಡಮನಿ ,ಯಶವಂತ್ ಶಿಂದೆ ,ಬಾಲಾಜಿ ಕಾಂಬಳೆ ,ಮಲ್ಲೇಶ್ ಹೊನಗುಂಟಿಕರ್ ,ಮಲ್ಲಿಕಾರ್ಜುನ್ ಭಾವಿಕಟ್ಟಿ ,ದಿನೇಶ್ ಅವರಾ ದ್ ,ಚಂದ್ರಕಾಂತ್ ನಾಟೇಕರ್ ,ಮಲ್ಲಿಕಾರ್ಜುನ್ ಭಾವಿಕಟ್ಟಿ ,ಸಾಜಿದ್ ಅಹ್ಮದ್ ,ಜಗದೇವಿ ಹೆಗಡೆ,ಶರಣು ಪಗಲಾಪುರ್ ಸೇರಿದಂತೆ ಅನೇಕ ಸಮಾಜಮುಖಂಡರು, ಹೋರಾಟಗಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಅಣ್ಣಾ ಭಾವು ಸಾರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅವರ ಸಾಹಿತ್ಯ, ಸಾಮಾಜಿಕ ಸೇವೆ ಹಾಗೂ ಸಮಾನತೆಯ ಸಂದೇಶವನ್ನು ಜನರಿಗೆ ತಲುಪಿಸುವ ಸಂಕಲ್ಪದೊಂದಿಗೆ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.