
ಔರಾದ್ : ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸದೃಢರಾಗಿ ಕಾರ್ಯವಹಿಸಿ ಪಕ್ಷವನ್ನು ಬಲಿಷ್ಠಗೊಳ್ಳಿಸಿ ಎಂದು ಎಐಸಿಸಿ ವೀಕ್ಷಕರಾದ ರಾಜೇಶ ಲಿಲೋಥಿಯಾ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಶನಿವಾರ ಪಟ್ಟಣದ ಸಾಯಿಬಾಬಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಸಂಘಟನೆ ಸೃಜನ ಆಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಅವರು ಪಕ್ಷಕ್ಕಾಗಿ ದುಡಿದ ಸಮರ್ಥ ಕಾರ್ಯಕರ್ತರನ್ನು ಪಕ್ಷ ಬಳಸಿಕೊಳ್ಳಲಿದೆ. ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯಕ್ಕು ಮನ್ನಣೆ ಸಿಗುತ್ತದೆ, ಹಾಗಾಗಿ ಸಂಘಟನಾ ಸೃಜನ ಅಭಿಯಾನದ ಮೂಲಕ ಕಾರ್ಯಕರ್ತರ ಅಭಿಪ್ರಾಯಗಳನ್ನು ಆಧರಿಸಿ ಸಮರ್ಥ ವ್ಯಕ್ತಿಗೆ ಜಿಲ್ಲಾ ಕಾಂಗ್ರೆಸ್ ಸಾರಥ್ಯ ನೀಡಲಾಗುವದು. ಮುಂದೆ ಚುನಾವಣೆಗಳು ಬರಲಿದ್ದು ಪಕ್ಷವನ್ನು ಕೆಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಸರ್ವರು ಸದೃಢರಾಗಿ ಕಾರ್ಯವಹಿಸಿ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರಿಗೆ ರಾಜೇಶ್ ಲಿಲೋಥಿಯಾ ಕರೆ ನೀಡಿದ್ದರು.
ಈ ವೇಳೆ ಸ್ಥಳಿಯ ಕಾರ್ಯಕರ್ತರು ಅನೇಕ ವಿಚಾರಗಳನ್ನು ಹಂಚಿಕೊAಡು ನಮ್ಮ ಔರಾದ್ ತಾಲ್ಲೂಕಿನಲ್ಲಿ ಅನೇಕರು ಹಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದವರಿದ್ದಾರೆ. ಇಲ್ಲಿಯವರೆಗೆ ತಾಲ್ಲೂಕಿನ ಕಾರ್ಯಕರ್ತರಿಗೆ ಜಿಲ್ಲಾ ಅಧ್ಯಕ್ಷರ ಅವಕಾಶ ಲಭಿಸಿರುವದಿಲ್ಲ. ಹೀಗಾಗಿ ಬೀದರ್ ಜಿಲ್ಲಾ ಕಾಂಗ್ರೆಸ್ ಸಾರಥ್ಯ ವಹಿಸಲು ಔರಾದ್ ತಾಲ್ಲೂಕಿನ ಸಮರ್ಥ ಕಾರ್ಯಕರ್ತರಿಗೆ ಮನ್ನಣೆ ನೀಡಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ಹಲವು ಮುಖಂಡರು ಈ ಸಂಧರ್ಭದಲ್ಲಿ ಹಂಚಿಕೊAಡರು. ಇದೇ ಸಂಧರ್ಭದಲ್ಲಿ ಕಾರ್ಯಕರ್ತರ ಅನೇಕ ವಾದ ವಿವಾದಗಳು ನಡೆದು ಕ್ಷಣಾರ್ಥದಲ್ಲಿಯೇ ಶಮನಗೊಂಡವು. ಈ ವೇದಿಕೆಯ ಮೇಲೆ ಕಾಣಿಸಿಕೊಂಡ ನಾಯಕರು ಕಾರ್ಯಕರ್ತರ ಕೈಗೆ ಸಿಗುವದಿಲ್ಲ ವರ್ಷಕೊಮ್ಮೆ ಬರುವವರು ನಮ್ಮ ನಾಯಕರಲ್ಲ. ಮುಂದೆ ಇಂಥವರನ್ನು ವೇದಿಕೆ ಹಂಚಿಕೊಳ್ಳದಿರುವAತೆ ಕಾರ್ಯಕರ್ತರು ಆವೇಶದಿಂದ ತಮ್ಮ ಆಕ್ರೋಷವನ್ನು ಹೋರಹಾಕಿದ ಘಟನೆ ನಡೆದಿದೆ. ಇದೇ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಹಲವಾರು ತಾಲ್ಲೂಕಿನ ಕಾರ್ಯಕರ್ತರು ತಾವು ಆಕಾಕ್ಷಿUಳು ಎಂದು ಸಭೆಗೆ ಪರಿಚಯಿಸಿಕೊಟ್ಟರು.
ಈ ಸಂಧರ್ಭದಲ್ಲಿ ಭೀಮಸೇನರಾವ ಶಿಂಧೆ, ಅರವಿಂದ ಅರಳಿ, ಮೀನಾಕ್ಷಿ ಸಂಗ್ರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವ್ಹಾಣ, ದತ್ತು ಮೂಲಗೆ, ಬಸವರಾಜ ನಿಟ್ಟುರೆ, ರಾಮಣ್ಣಾ ವಡೆಯಾರ್, ಬಾಬು ತಾರೆ, ಚರಣಸಿಂಗ್ ರಾಠೋಡ್, ರಾ. ಫಯಜಲಿ, ಶಿವಮೂರ್ತಿ, ವಿಶ್ವನಾಥ ದಿನೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.






























