
ಕೊಲ್ಹಾರ:ಜೂ.2: ಉತ್ತಮ ಪುಸ್ತಕಗಳು ನಿಜವಾಗಿಯೂ ಮಾನವನ ಮಹತ್ವದ ಮಿತ್ರರು. ಮೋಸ ಮಾಡದ, ವಂಚನೆಗಳರಿಯದ ಎಂದೆಂದಿಗೂ ನಮ್ಮನ್ನು ಕೈ ಬಿಡದ ಸಂಗಾತಿಗಳೆಂದರೆ ಉತ್ತಮ ಪುಸ್ತಕಗಳು ಎಂದು ಮಲಗಾಣ ಕಾಲೇಜಿನ ಪ್ರಾಂಶುಪಾಲ ಬಸವರಾಜ ಜಾಲವಾದಿ ಹೇಳಿದರು.
ಸೋಮವಾರ ಸರಕಾರಿ ಪ್ರೌಢಶಾಲೆ ಮಲಗಾಣದಲ್ಲಿ ಏರ್ಪಡಿಸಿದ ಶಿಕ್ಷಕ, ಪೆÇೀಷಕ ಸಭೆ ಹಾಗೂ ಪಠ್ಯಪುಸ್ತಕ ವಿತರಣೆ ಶಾಲಾ ಪ್ರಾರಂಭೋತ್ಸವದ ದಿನದಂದು ಪಠ್ಯಪುಸ್ತಕ ವಿತರಿಸಿ ಮಾತನಾಡುತ್ತಿದ್ದರು.
ಬಯಸಿದಾಗ ತೆರೆದುಕೊಳ್ಳುವ ಬೇಡವೆಂದಾಗ ಮುಚ್ಚಿಕೊಂಡು ಇರುವ ವಿಶೇಷ ಗುಣ ಈ ಪುಸ್ತಕಗಳದ್ದು.ಎಂದೆಂದಿಗೂ ನಮ್ಮೊಂದಿಗೆ ಜೊತೆಯಾಗಿ ಇರ ತಕ್ಕವಗಳು ಪುಸ್ತಕಗಳು. ವಿದ್ಯಾರ್ಥಿಗಳು ಇಂದಿನಿಂದ ಪುಸ್ತಕ ಪ್ರೇಮವನ್ನು ಬೆಳೆಸಿಕೊಂಡು ಇಡೀ ವರ್ಷದುದ್ದಕ್ಕೂ ನಡೆಯುವ ಘಟಕ ಪರೀಕ್ಷೆಗಳಲ್ಲಿ ತಮ್ಮ ಪ್ರತಿಭೆ ಮೆರೆಯಬೇಕು ಎಂದರು.
ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಎಸ.ಎಸ್.ಗರಸಂಗಿ ಮಾತನಾಡಿ ಗ್ರಾಮದವರ ಪ್ರಯತ್ನದಿಂದ ಮಲಗಾಣಕ್ಕೆ ಕಾಲೇಜು ಮಂಜೂರಾಗಿದ್ದು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಕಾಮರ್ಸ್ ವಿಭಾಗಕ್ಕೆ ಸೇರ್ಪಡೆಗೊಳ್ಳುವುದರ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಮಣ್ಣ ನಾವಿ, ಪಠ್ಯಪುಸ್ತಕ ವಿತರಣೆಗಳ ಜೊತೆಗೆ ಇಂದಿನಿಂದಲೇ ಅಧಿಕೃತವಾಗಿ ಬಿಸಿಯೂಟವೂ ಆರಂಭವಾಗಿದ್ದು ವಿದ್ಯಾರ್ಥಿಗಳು ಒಂದೇ ಒಂದು ದಿನ ಗೈರು ಹಾಜರಾಗದೆ ತರಗತಿಗಳಿಗೆ ಹಾಜರಾಗಿ ವರ್ಷದುದ್ದಕ್ಕೂ ನಡೆಯುವ ಪಾಠ ಪ್ರವಚನಗಳಲ್ಲಿ ಅತ್ಯಂತ ಚಟುವಟಿಕೆಯಿಂದ ಇದ್ದು ಪ್ರೌಢಶಾಲೆಯ ಹಾಗೂ ಗ್ರಾಮದ ಹೆಸರು ತರಬೇಕು ಎಂದರು.
ವೇದಿಕೆಯ ಮೇಲೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶೋಕ ನಿಂಗನೂರ, ಲಕ್ಷ್ಮಿ ವಿಠಲ ಮಾದರ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ ಚನ್ನಪ್ಪ ಕೋರಿ , ಶಿವು ಕಾಗಲ್ ,ಗೋಪಾಲ ನಿಂಗನೂರ, ಜಿ.ಎಸ್ ಗಣಿಯವರ, ಎಸ್.ಡಿ ಓಂಕಾರೆಪ್ಪಗೋಳ, ಜಿ.ಸಿ ವಸ್ತ್ರದ, ಎಸ್ ಎಂ ಕರ್ನಾಳ, ಬಸವರಾಜ ಬಿರಾದಾರ, ಎ.ಕೆ ಜಕಾತಿ, ಡಿ.ಎಸ್ ಪರಮಾಜ, ಉಮೇಶ್ ಜಿ, ಎಸ್ ಬಿ ಕುಂಬಾರ, ಎಸ್ ಬಿ ಐನಾಪುರ, ಜೆ.ಆರ್ ಮಠಪತಿ ಹಾಜರಿದ್ದರು.






























