Home ಜಿಲ್ಲೆ ಕಲಬುರಗಿ ಕಾಯಕವನ್ನು ಅನುಭಾವದೆತ್ತರಕ್ಕೆ ತಂದ ಬಸವ

ಕಾಯಕವನ್ನು ಅನುಭಾವದೆತ್ತರಕ್ಕೆ ತಂದ ಬಸವ

ಕಲಬುರಗಿ: ಕವಿ ಚಾಮರಸನಂತೆ ಆಧುನಿಕ ಕಾಲದ ಕವಿಗಳೂ ಬಸವಣ್ಣ ಹಾಗೂ ಅವರು ಕಟ್ಟಿದ ಸರ್ವ ಸಮಾನತೆಯ ಕಲ್ಯಾಣ ಸಾಮ್ರಾಜ್ಯದಬಗ್ಗೆ ಕಾವ್ಯ ಬರೆದಿದ್ದು, ಕವಿ ಸಿದ್ದಯ್ಯ ಪುರಾಣಿಕರು ಬಸವನ ಬೆಳಕೆ ಎಲ್ಲಾಡಿ ಬಂದೆ ಎಂಬ ಕವಿತೆಯಲ್ಲಿ ಅವರ ಭೂಮವ್ಯಕ್ತಿತ್ವದ ಅಗಾಧತೆಯನ್ನು ಕೊಂಡಾಡಿದ್ದಾರೆ. ಮೇಲಾಗಿ ಬಸವಣ್ಣನನ್ನು ಬಿಟ್ಟರೆ ಲಿಂಗಾಯತಕೆ ಉಳಿಗಾಲವಿಲ್ಲ ಎಂದು ಹೇಳಿದ್ದಾರೆ.
ಬಸವನ ಬೆಳಕು ಭವಿಯಲಿ ಬೆಳಗಿತು. ಜಗದ ಕತ್ತಲೆ ಕಳೆಯಿತು ಎನ್ನುವಂತೆ ಅವರ ಹುಟ್ಟು, ನಾಮಕರಣ ಪ್ರಸಂಗದಲ್ಲಿನಡೆಯಿತೆನ್ನಲಾದ ಘಟನೆಗಳೆ ಸಾಕ್ಷಿಯಾಗಿವೆ. ಒಟ್ಟಂದದಲ್ಲಿ ಹೇಳುವುದಾದರೆ ಬಟ್ಟೆಗೆಟ್ಟವರಿಗೆ ದೊಂದಿ ದಿಕ್ಕಾಗಿ ಭುವಿಗೆ ಬಂದರುಎಂಬುದನ್ನು ನಾಮಕರಣ ಸಮಾರಂಭ ಜರುಗಿದ ಕುರಿತು ಚಾಮರಸ ಕವಿ ಹೇಳುತ್ತಾನೆ.
ಅಗುವಾತಗೆ ನಾಮಕರಣಾದಿಯಾದ ಸಮಸ್ತ ವಿಭವ ವಿನೋದವಾತಗೆ ವೇದಶಾಸ್ತ್ರ ಪುರಾಣಾಗಮ ಆದಿಯಾಗಿಹ
ಕರ್ಮಕಳೆಗಳು ಭೇದಿಸಿದಮ್ಮಿಂಗೆ ಕೇಳೆಯೊ ಬವರಾಜಂಗೆ
ಇಂಗಳೇಶ್ವರದಿಂದ ಬಾಗೇವಾಡಿಗೆ ತವರಿನ ತೊಟ್ಟಿಲು ಹೊತ್ತು ಮಾದಲಾಂಬಿಕೆ ಬರುತ್ತಾಳೆ. ಅಲ್ಲಿಯೇ ಮಗು ವೇದಾಗಮಶಾಸ್ತ್ರಕಲಿಯುತ್ತದೆ. ಶೂದ್ರ ವ್ಯಕ್ತಿಯ ಮಗ ಆಕಳ ಕರುವಿನ ಹಿಂದೆ ಓಡುತ್ತ ಬಿದ್ದಾಗ ಮೇಲಕ್ಕೆತ್ತಿದ ಬಸವಣ್ಣನ ಕ್ರಮ ಕಂಡುಚಾಂಡಾಲರನ್ನು ಹಿಡಿದೆತ್ತಿ ಬಸವಣ್ಣ ಕುಲಗೆಡಿಸಿದ ಎಂದು ಊರೆಲ್ಲ ಗುಲ್ಲೇಳುತ್ತದೆ.
-ಪೂಜ್ಯ ಮಹಾಂತಸ್ವಾಮಿಗಳು, ಮುದ್ಗಲ್.