
ಕಮಲನಗರ: ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಶ್ರೀ ಹರಿನಾಥ ಮಹಾರಾಜರ ಭವ್ಯವಾದ ಸಂಜೀವಿನಿ ಸಮಾಧಿ ಮಂದಿರ ಇದ್ದಾ ಗಿದ್ದು ಸಮಾಧಿ ಅತ್ಯಂತ ಪ್ರಸಿದ್ಧವಾಗಿರುವಂತಹ ಗ್ರಾಮೀಣ ಪ್ರದೇಶದಲ್ಲಿ ಅಧ್ಯಾತ್ಮಿಕ ಕೇಂದ್ರಬಿಂದುವಾಗಿದೆ. ಸರ್ವಧರ್ಮ ಸಮನ್ವಯತೆಯ ಸಂಕೇತವಾಗಿದ್ದು ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದು ಮತ್ತು ಉಲ್ಲಾಸ ಉತ್ಸಾಹದಿಂದ ಜಾತ್ರೆ ನಡೆಯುತ್ತದೆ.ಇದು ಈ ಭಾಗದ ಭಕ್ತರ ಆರಾಧ್ಯ ದೈವವಾಗಿದೆ.
ಇಂದು ಪ್ರತಿ ವರ್ಷದಂತೆ ಇಲ್ಲಿ ಶ್ರೀ ಹರಿನಾಥ ಮಹಾರಾಜರ ಹಾಗೂ ಶ್ರೀ ಕೇಶವನಾಥ ಮಹಾರಾಜ ಗುರು ಶಿಷ್ಯರ ನೆನಪಿನಲ್ಲಿ ವಿಶೇಷವಾಗಿ ಮಂದಿರದಲ್ಲಿ ಅಭಿಷೇಕ ಮಾಡಿ ಪೂಜೆ ನೆರವೇರಿಸಿದರು. ನಂತರದಲ್ಲಿ ಉತ್ಸವ, ಭಜನೆ, ಪುರಾಣ ಪ್ರವಚನ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ಜರುಗಿದವು.
ಈ ಸಂದರ್ಭದಲ್ಲಿ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಇಲ್ಲಿ ನಡೆಯುವ ಆಷಾಢ ಜಾತ್ರೆಗೆ ಆಗಮಿಸುತ್ತಾರೆ.
ಬಂದಿರುವ ಭಕ್ತಾದಿಗಳಿಗೆ ಈ ಹುಣ್ಣಿಮೆಯ ದಿನ ರಾಮ ನೀಲಕಂಠರಾವ ಶಿಂಧೆ ಇವರು ಅನ್ನ ದಾಸವನ್ನು ನೆರವೇರಿಸಿದರು.
ಸವಿತಾ ದಯಾನಂದ ಮಾನೆ (ಚಾಕುರ) ಇವರು ಸಂಜೀವಿನಿ ಸಮಾಧಿಗೆ ಹೂಗಳಿಂದ ಅಲಂಕರಿಸಿದರು.






























