Home ಜಿಲ್ಲೆ ಬೆಂಗಳೂರು ಹೆಚ್ಚುವರಿ ಸಹಾಯಕ ಮತದಾರ ನೊಂದಣಾಧಿಕಾರಿಗಳ ನೇಮಕ

ಹೆಚ್ಚುವರಿ ಸಹಾಯಕ ಮತದಾರ ನೊಂದಣಾಧಿಕಾರಿಗಳ ನೇಮಕ

ಮಾಲೂರು ಸೆ೦9: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಮತದಾರ ಪಟ್ಟಿಯಿಂದ ಹೊರಗುಳಿದ ಮತದಾರರನ್ನು ಮತ್ತೆ ಮತದಾರ ಪಟ್ಟಿಗೆ ಸೇರ್ಪಡೆಗೊಳಿಸಲು ನಗರ ಸೇರಿದಂತೆ ಗ್ರಾ.ಪಂ.ಗಳಲ್ಲಿ ೨೦ ಮಂದಿ ಹೆಚ್ಚುವರಿ ಸಹಾಯಕ ಮತದಾರ ನೊಂದಣಾಧಿಕಾರಿಗಳನ್ನು ನಿಯೋಜಿಸಲಾಗಿದ್ದು ಹೆಚ್ಚುವರಿ ಸಹಾಯಕ ಮತದಾರ ನೊಂದಣಾದಿಕಾರಿಗಳು ನಿಗಧಿ ಪಡಿಸಿದ ದಿನಾಂಕ ಹಾಗೂ ಸಮಯಕ್ಕೆ ತೆರಳಿ ಸಮರ್ಪಕ ದಾಖಲೆಗಳನ್ನು ನೀಡಿ ಮತದಾರ ಪಟ್ಟಿಯಲ್ಲಿ ನಿಮ್ಮ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳುವಂತೆ ತಹಶಿಲ್ದಾರ್ ಎಂ.ವಿ.ರೂಪ ಹೇಳಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮತದಾರ ಪಟ್ಟಿಯಿಂದ ಹೊರಗುಳಿದ ಮತದಾರರಿಗೆ ದಿನಾಂಕ ಸಮಯ ನಿಗದಿಪಡಿಸಿ ನೋಟಿಸ್ ಜಾರಿ ಮಾಡಿದ್ದು ಮತದಾರ ಪಟ್ಟಿಯಿಂದ ಹೊರಗುಳಿದ ಮತದಾರರು ನೋಡಲ್ ಅಧಿಕಾರಿಗಳ ಮುಂದೆ ಹಾಜರಾಗಿ ಚುನಾವಣಾ ಆಯೋಗ ಕೇಳಿರುವ ಗುರುತಿನ ದಾಖಲೆಗಳನ್ನು ನೀಡಿ ಮತದಾರ ಪಟ್ಟಿಯನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದರು. ನಗರದಲ್ಲಿ ನಗರಸಭಾ ಸಭಾಂಗಣದಲ್ಲಿ, ತೋಟಗಾರಿಕೆ ಇಲಾಖೆ ಕಚೇರಿ, ರೇಷ್ಮೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆಗಳಲ್ಲಿ ಚುನಾವಣಾ ಆಯೋಗ ನಿಯೋಜನೆ ಮಾಡಿರುವ ಅಧಿಕಾರಿಗಳು, ೨೮ ಗ್ರಾ.ಪಂ. ಕೇಂದ್ರಗಳಲ್ಲಿಯೂ ಸಹ ಹೆಚ್ಚುವರಿ ಸಹಾಯಕ ಮತದಾರ ನೊಂದಣಾದಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.


ಹೆಚ್ಚುವರಿ ಸಹಾಯಕ ಮತದಾರ ನೊಂದಣಾಧಿಕಾರಿ ನಗರ ಸಭೆ ಪೌರಾಯುಕ್ತ ಎಂ.ಎಸ್.ಮಹದೇವ ಅವರು ಮತಗಟ್ಟೆ ಸಂಖ್ಯೆ ೬೨, ೬೩, ೬೪, ೬೫, ೬೬, ರಲ್ಲಿ ಮತದಾರ ಪಟ್ಟಿಯಿಂದ ಹೊರಗುಳಿದ ಮತದಾರರಿಗೆ ದಿನಾಂಕ ಸಮಯ ನಿಗದಿಪಡಿಸಿ ಪ್ರತಿದಿನ ೧೫೦ ಮಂದಿ ನೋಟಿಸ್ ಜಾರಿ ಮಾಡಿ ಅವರನ್ನು ವಿಚಾರಣೆ ಮಾಡಿ ಚುನಾವಣಾ ಆಯೋಗ ಕೇಳಿರುವ ದಾಖಲೆಗಳನ್ನು ಪಡೆದು ಸ್ಕ್ಯಾನ್ ಮಾಡಿ ಮತದಾರ ಪಟ್ಟಿಗೆ ಸೇರ್ಪಡೆ ಮಾಡುವ ಕೆಲಸ ಮಾಡುತ್ತಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ನಗರದಲ್ಲಿ ನಡೆಯುತ್ತಿದ್ದು, ಮೊದಲನೇ ಹಂತ ಪೂರ್ಣಗೊಂಡು ಎರಡನೇ ಹಂತದಲ್ಲಿ ಮತದಾರ ಪಟ್ಟಿಯಿಂದ ಹೊರಗುಳಿದವರಿಗೆ ನೋಟಿಸ್ ಜಾರಿ ಮಾಡಿ ನಾವು ನಿಗದಿಪಡಿಸಿದ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಹಾಜರಾಗಿ ಚುನಾವಣಾ ಆಯೋಗ ಕೇಳಿರುವ ಸಮರ್ಪಕ ದಾಖಲೆಗಳನ್ನು ನೀಡಿ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು, ಜನ್ಮದಿನಾಂಕ, ತಂದೆಯ ಹೆಸರು, ಹೆಸರಿನ ಕಾಗುಣಿತ, ವಂಶಾವಳಿ ಬಗ್ಗೆ ದಾಖಲೆಗಳನ್ನು ನೀಡಿ ತಿದ್ದಿಪಡಿ ಮಾಡಿಕೊಳ್ಳಬಹುದಾಗಿದೆ. ನಿಗದಿ ಪಡಿಸಿದ ದಿನಾಂಕ ಹಾಗೂ ಸಮಯಕ್ಕೆ ಹಾಜರಾಗದಿದ್ದಲ್ಲಿ ಮತ್ತೊಂದು ದಿನಾಂಕ ನೀಡಿ ನೋಟಿಸ್ ಜಾರಿ ಮಾಡಿ ಮತ್ತೆ ಹೊರಗುಳಿದ ಮತದಾರರನ್ನು ಮತದಾರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ಕಲ್ಪಿಸಲಾಗಿದೆ ಎಂದರು.