Home ಜಿಲ್ಲೆ ಕಲಬುರಗಿ ಡಾ. ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್‍ರಿಗೆ ಅಲ್-ಅಮೀನ್ ಆಲ್ ಇಂಡಿಯಾ ಕಮ್ಯೂನಿಟಿ ಲೀಡರ್‍ಶಿಪ್...

ಡಾ. ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್‍ರಿಗೆ ಅಲ್-ಅಮೀನ್ ಆಲ್ ಇಂಡಿಯಾ ಕಮ್ಯೂನಿಟಿ ಲೀಡರ್‍ಶಿಪ್ ಅವಾರ್ಡ್ ಪ್ರದಾನ

ಕಲಬುರಗಿ: ಬೆಂಗಳೂರಿನಲ್ಲಿ ನಡೆದ ಅಲ್-ಅಮೀನ್ ಎಜುಕೇಷನಲ್ ಸೊಸೈಟಿಯ ಸಂಸ್ಥಾಪಕರ ದಿನಾಚರಣೆ 2026ರ ಅಂಗವಾಗಿ ಈ ವರ್ಷದ ಅಲ್-ಅಮೀನ್ ಆಲ್ ಇಂಡಿಯಾ ಕಮ್ಯೂನಿಟಿ ಲೀಡರ್‍ಶಿಪ ಪ್ರಶಸ್ತಿಯನ್ನು ದರ್ಗಾ ಹಜರತ್ ಖಾಜಾ ಬಂದಾ ನವಾಜ್ (ರ.ಅ.) ಅವರ ಸಜ್ಜಾದಾ ನಶೀನ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರು, ಖಾಜಾ ಬಂದಾ ನವಾಜ್ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಖಾಜಾ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಹಜರತ್ ಹಾಫಿಜ್ ಡಾ. ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ ಅವರಿಗೆ ಪ್ರದಾನ ಮಾಡಲಾಯಿತು.
ಅಲ್-ಅಮೀನ್ ಎಜುಕೇಷನಲ್ ಸೊಸೈಟಿಯು ಪ್ರತಿ ವರ್ಷ ತನ್ನ ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಣ, ಸಮುದಾಯ ಅಭಿವೃದ್ಧಿ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ಗಣ್ಯರನ್ನು ಗುರುತಿಸಿ ಅಲ್-ಅಮೀನ್ ಆಲ್ ಇಂಡಿಯಾ ಕಮ್ಯೂನಿಟಿ ಲೀಡರ್‍ಶಿಪ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಲ್-ಅಮೀನ್ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಹಲವು ಗಣ್ಯ ಅತಿಥಿಗಳು ಭಾಗವಹಿಸಿದ್ದರು.
ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ಹಜರತ್ ಹಾಫಿಜ್ ಡಾ. ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಳನ್ನು ಗಣ್ಯರು ಪ್ರಶಂಸಿಸಿದರು. ಜೊತೆಗೆ ಸಮುದಾಯದ ಅಭಿವೃದ್ಧಿಗಾಗಿ ಅವರು ನಿರಂತರವಾಗಿ ಮಾಡುತ್ತಿರುವ ಸೇವೆಯನ್ನು ಸ್ಮರಿಸಲಾಯಿತು.