
ಮುಂಬೈ, ಸೆ. ೯- ಬಾಲಿವುಡ್ ನಟಿ ಪ್ರೀತಿ ಜಿಂಟಾ ಸನ್ನಿ ಡಿಯೋಲ್, ಶಬಾನಾ ಅಜ್ಮಿ ಮತ್ತು ಅಲಿ ಫಜಲ್ ಅವರೊಂದಿಗೆ ನಟಿಸಿದ್ದ “ಬಂಟ್ವಾರಾ ೧೯೪೭” (ಅಥವಾ “ಲಾಹೋರ್ ೧೯೪೭”) ಚಿತ್ರದ ವೈಫಲ್ಯದ ಕುರಿತು ಮಾತನಾಡಿದ್ದಾರೆ. ಎಂಟು ವರ್ಷಗಳ ಸುದೀರ್ಘ ವಿರಾಮದ ನಂತರ ಅಮೀರ್ ಖಾನ್ ನಿರ್ಮಾಣದ ಈ ಚಿತ್ರದ ಮೂಲಕ ಬಾಲಿವುಡ್ಗೆ ಮರಳಿದ್ದ ಅವರ ಅಭಿನಯದ ಮೇಲೆ ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆಗಳಿದ್ದವು, ಆದರೆ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲು ಸಾಧ್ಯವಾಗದೆ ತನ್ನ ಬಜೆಟ್ ಅನ್ನು ಸಹ ಮರುಪಡೆಯುವಲ್ಲಿ ವಿಫಲವಾಯಿತು. ಸಾಕ್ನಿಲ್ಕ್ ವರದಿಗಳ ಪ್ರಕಾರ ೧೫೦ ಕೋಟಿ ಬಜೆಟ್ನಲ್ಲಿ ನಿರ್ಮಾಣಗೊಂಡಿದ್ದ ಈ ಚಿತ್ರವು ವಿಶ್ವಾದ್ಯಂತ ಕೇವಲ ೫೪.೨೦ ಕೋಟಿ ಗಳಿಸಲಷ್ಟೇ ಶಕ್ತವಾಯಿತು.
ಮಿಡ್ ಡೇ ಜೊತೆ ಮಾತನಾಡುತ್ತಾ ಪ್ರೀತಿ ಜಿಂಟಾ, ತಮ್ಮ ೧೦೦ ಪ್ರತಿಶತ ಕೊಡುಗೆಯನ್ನು ನೀಡಿದ್ದಾಗಿಯೂ ಮತ್ತು ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವವು ಅತ್ಯದ್ಭುತವಾಗಿದ್ದಾಗಿಯೂ ತಿಳಿಸಿದ್ದಾರೆ. ನಟಿಯಾಗಿ ತಾವು ಯಾವಾಗಲೂ ನಿರೀಕ್ಷೆಗಳನ್ನು ಸರಿದೂಗಿಸಲು ಪ್ರಯತ್ನಿಸುವುದಾಗಿ ಮತ್ತು ಕರ್ಮದಲ್ಲಿ ನಂಬಿಕೆಯಿಟ್ಟಿರುವುದಾಗಿ ಹೇಳಿದ ಅವರು, “ನನ್ನ ಪಾತ್ರವನ್ನು ನಾನು ಶೇ. ೧೦೦೦ ರಷ್ಟು ಶ್ರದ್ಧೆಯಿಂದ ನಿರ್ವಹಿಸಿ ಉಳಿದದ್ದನ್ನು ದೇವರಿಗೆ ಬಿಡುತ್ತೇನೆ, ಏಕೆಂದರೆ ಚಿತ್ರದ ಅಂತಿಮ ಫಲಿತಾಂಶದ ಮೇಲೆ ನಮ್ಮ ನಿಯಂತ್ರಣವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಅವರು ಕುನಾಲ್ ಖೇಮು ನಿರ್ದೇಶಿಸಿ ನಟಿಸುತ್ತಿರುವ “ವೈಬ್ ಎಂಬ ಆಕ್ಷನ್-ಕಾಮಿಡಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದು, ಸ್ಪರ್ಶ್ ಶ್ರೀವಾಸ್ತವ, ಯಶ್ಪಾಲ್ ಶರ್ಮಾ ಹಾಗೂ ದಿನೇಶ್ ಲಾಲ್ ಯಾದವ್ ಒಳಗೊಂಡಿರುವ ಈ ಚಿತ್ರವು ಸೆಪ್ಟೆಂಬರ್ ೧೮ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.























