Home ಜಿಲ್ಲೆ ಕಲಬುರಗಿ ಸಂಗೀತದಿಂದ ಮನಸ್ಸಿಗೆ ನೆಮ್ಮದಿ

ಸಂಗೀತದಿಂದ ಮನಸ್ಸಿಗೆ ನೆಮ್ಮದಿ

ಕಲಬುರಗಿ,ಸೆ.9-ಈ ಭಾಗದ ಕಲಾವಿದರ ಹಾಗೂ ಸಂಗೀತಾಭಿಮಾನಿಗಳ ಹಿತದೃಷ್ಟಿಯಿಂದ ಸಂಗೀತ ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಇವತ್ತಿನ ದಿನಗಳಲ್ಲಿ ಸಂಗೀತದ ಕಡೆಗೆ ಜನರ ಒಲವು ಕಡಿಮೆಯಾಗಿದೆ. ಆದರೆ ಸಂಗೀತದಲ್ಲಿರುವ ಶಕ್ತಿ ಮತ್ತೆ ಯಾವುದರಲ್ಲಿ ಇರುವುದಿಲ್ಲ. ಅದಕ್ಕೆ ಸಂಗೀತ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವೆಂದು ಮಹೇಶ್ವರ ಶಾಸ್ತ್ರೀ ಕರೆ ನೀಡಿದರು.
ಅವರು ಕಲಬುರ್ಗಿ ನಗರದ ಪ್ರಶಾಂತ ನಗರ ಎ 12 ಜೋತಿಲಿರ್ಂಗ ದೇವಸ್ಥಾನದಲ್ಲಿ ಭಾಗ್ಯಜ್ಯೋತಿ ಜನಪದ ಸಂಗೀತ ಸಂಸ್ಥೆ ಹಮ್ಮಿಕೊಂಡ ಗೀತ ಗಾಯನ ಸಂಗೀತ ಸಂಭ್ರಮ ಸಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೇದಿಕೆ ಮೇಲೆ ಸಿದ್ಧಾನಂದ ಮಹಾಶಿವಯೋಗಿಗಳು, ಬಸಯ್ಯಸ್ವಾಮಿ ಕೂಡದೂರ, ಮಲ್ಲಯ್ಯ ಸ್ವಾಮಿ, ಶಿವಾನಂದ ಮಠಪತಿ, ಶಿವರಾಯ ಮುಲಗೆ, ಕೇಥರನಾಥ ಮಹಗಾಂವ, ವಿಶ್ವನಾಥವಾಗಣಗೇರಿ. ಅಲ್ಲದೆ ಅನೇಕ ಕಲಾವಿದರಿಂದ ಸುಗಮ ಸಂಗೀತ, ಭಕ್ತಿಗೀತೆ ಹಾಗೂ ಜನಪದ ಗೀತೆಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಸಂಗೀತಾಸಕ್ತರು, ಕಲಾವಿದರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾಗ್ಯ ಜ್ಯೋತಿ ಜನಪದ ಸಂಗೀತ ಸಂಸ್ಥೆ ಅಧ್ಯಕ್ಷರಾದ ನಿರ್ಮಲಾ ಎ ಕೋಣೆ ಉಪಸ್ಥಿತರಿದ್ದರು.