
ನಗರದ ಜಯನಗರ ಶಾಲಿನಿ ಮೈದಾನದಲ್ಲಿ ನಡೆದ ಅಶ್ವಮೇಧ ಚಾಲಕ ಸೇನೆಯ ಮಾಸಿಕ ಸಭೆಯಲ್ಲಿ ಪ್ರಯಾಣಿಕರ ಸ್ನೇಹಿ ಮತ್ತು ಸಂಘಟನೆಯಲ್ಲಿ ತೊಡಗಿಕೊಂಡಿರುವ ಐದು ಜನ ಉತ್ತಮ ಆಟೋ ಚಾಲಕರನ್ನು ಗುರುತಿಸಿ ಸೆಪ್ಟೆಂಬರ್ ತಿಂಗಳ ಅತ್ಯುತ್ತಮ ಚಾಲಕರೆಂದು ವಕೀಲರು ಮತ್ತು ಕಾನೂನು ಸಲಹೆಗಾರದ ಅನಿಲ್ ರೆಡ್ಡಿ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸೂರ್ಯ ಭಜರಂಗಿ, ಪ್ರಧಾನ ಕಾರ್ಯದರ್ಶಿ ಶಾಂತೇ ಗೌಡರು, ಉಪಾಧ್ಯಕ್ಷರಾದ ರಾಜೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ರಾಜು, ಖಜಾಂಚಿ ಮುರಳಿ, ದೇವರಾಜ್, ಚೆನ್ನಪ್ಪ, ಮಂಜುನಾಥ್, ಇನ್ನು ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.






























