ಕಲಬುರಗಿ: ಕೆಕೆಆರ್‍ಡಿಬಿ ವತಿಯಿಂದ 371 ( ಜೆ) ಅಡಿ, ಅನುದಾನ ರಹಿತ ಶಾಲೆಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಂದು ಕಲ್ಯಾಣ ಕರ್ನಾಟಕ ವಿಭಾಗೀಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟದಿಂದ ಕೆಕೆಆರ್‍ಡಿಬಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಲಾಯಿತು.ಭಾಲ್ಕಿ ಶ್ರೀಗಳು,ಸುನೀಲಕುಮಾರ ಹುಡಗಿ,ರೇವಣಸಿದ್ದಪ್ಪ ಜಲಾದೆ,ರಾಜೇಂದ್ರ, ಗುರುನಾಥರೆಡ್ಡಿ ಚಿಂತಾಕಿ,ಗುರುನಾಥ ದೇಶಮುಖ,ಜಯವಂತ ಉಜನಿಕರ್,ನಾರಾಯಣ ರಾಂಪುರೆ,ಸುಭಾಷ ಹುಲಸೂರೆ,ಹಣಮಂತಪ್ಪ ಹುಲೆಪ್ಪನವರ ಸೇರಿದಂತೆ ಹಲವರು ಪಾಲ್ಗೊಂಡರು.