
ಬೀದರ:ಜೂ.೨:ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಾಸಾಗಿರುವ ಅಭ್ಯರ್ಥಿಗಳಿಂದ ೨೦೨೬-೨೭ ನೇ ಸಾಲಿನ ವಿವಿಧ ಡಿಪ್ಲೋಮಾ ಕೋರ್ಸುಗಳಲ್ಲಿ ಖಾಲಿ ಇರುವ ಸೀಟುಗಳಿಗಾಗಿ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ೦೬-೦೬-೨೦೨೬ ರಂದು ಸಂಜೆ ೧:೦೦ ವರಗೆ ವಿಸ್ತರಿಸಲಾಗಿದೆ. ಹಾಗೂ ದಿನಾಂಕ: ೦೮-೦೬-೨೦೨೬ ರಂದು ಸೀಟುಗಳ ಆಯ್ಕೆ ಮಾಡಿಕೊಂಡು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಪ್ರವೇಶ ಶುಲ್ಕ ಭರಿಸಿ ಪ್ರವೇಶ ಪಡೆಯಬೇಕೆಂದು ಸರ್ಕಾರಿ ಪಾಲಿಟೆಕ್ನಿಕ್ ಬೀದರ ಪ್ರಾಚಾರ್ಯರು ತಿಳಿಸಿದ್ದಾರೆ.ಅರ್ಹ ಅಭ್ಯರ್ಥಿಗಳು ಸರ್ಕಾರಿ ಪಾಲಿಟೆಕ್ನಿಕ್, ಮೈಲೂರು ಬೀದರ ಇಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ವರ್ಗಾವಣೆ / ಬೊನಾಫೈಡ್ ಪ್ರಮಾಣಪತ್ರ, ೧ ರಿಂದ ೧೦ ತರಗತಿವರೆಗೆ ಓದಿರುವ ವ್ಯಾಸಂಗ ಪ್ರಮಾಣ ಪತ್ರ ಃ.ಇ.ಔ. ದೃಢೀಕರಣ, ಕನ್ನಡ ಮಾಧ್ಯಮ ಪ್ರಮಾಣ ಪತ್ರ ಃ.ಇ.ಔ. ದೃಢೀಕರಣ, ಗ್ರಾಮೀಣ ಪ್ರಮಾಣ ಪತ್ರ ಃ.ಇ.ಔ. ದೃಢೀಕರಣ, ೩೭೧(ಜೆ) ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ ಹಾಗೂ ೨ ಭಾವಚಿತ್ರಗಳನ್ನು ಸಲ್ಲಿಸತಕ್ಕದ್ದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






























