Home Lead News ಸಚಿವರಿಗೆ ಖಾತೆ ಹಂಚಿಕೆ

ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು, ಆ. ೧೨- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.


ಈ ಹಿಂದೆ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಇಬ್ಬರ ಖಾತೆ ಬದಲಾಗಿದ್ದು, ೨ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ೧೯ ಸಚಿವರಲ್ಲಿ ೧೩ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಉಳಿದ ಆರು ಮಂದಿಗೆ ಸಂಜೆಯೊಳಗೆ ಖಾತೆ ಹಂಚಿಕೆ ಪೂರ್ಣ ಮಾಡಿ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸುವರು.


೨ನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿದ್ದವರ ಪೈಕಿ ಹಲವರು ಪ್ರಬಲ ಖಾತೆಗಳಿಗೆ ಪಟ್ಟು ಹಿಡಿದಿರುವುದರಿಂದ ಆರು ಮಂದಿಯ ಖಾತೆ ಹಂಚಿಗೆ ತಡವಾಗಿದ್ದು, ಎಲ್ಲರ ಜತೆ ಮಾತನಾಡಿ ಎಲ್ಲರನ್ನೂ ಸಮಾಧಾನಪಡಿಸಿ ಇಂದು ಸಂಜೆಯೊಳಗೆ ಎಲ್ಲ ಸಚಿವರ ಖಾತೆ ಹಂಚಿಕೆ ಪಟ್ಟಿಯನ್ನು ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಕಳುಹಿಸುವರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನ ಸಂದರ್ಭದಲ್ಲೇ ಸಚಿವರಾಗಿದ್ದ ಹಿರಿಯ ಸಚಿವ ಕೆ.ಹೆಚ್. ಮುನಿಯಪ್ಪ ಅವರಿಂದ ಆಹಾರ ಖಾತೆಯನ್ನು ಹಿಂಪಡೆದು ಅವರಿಗೆ ಸಮಾಜ ಕಲ್ಯಾಣ ಖಾತೆಯನ್ನು ಹೊಸದಾಗಿ ನೀಡಲಾಗಿದೆ. ಹಾಗೆಯೇ ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಖಾತೆಯನ್ನು ಬದಲಾವಣೆ ಮಾಡಿ ಇವರಿಗೆ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ನೀಡಲಾಗಿದೆ. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ೧೯ ಮಂದಿ ಪೈಕಿ ೧೩ ಮಂದಿಗೆ ಮಾತ್ರ ಈಗ ಖಾತೆ ಹಂಚಿಕೆ ಮಾಡಲಾಗಿದೆ. ಇನ್ನೂ ಆರು ಮಂದಿಗೆ ಖಾತೆ ಹಂಚಿಕೆ ಆಗಿಲ್ಲ. ಸಂಜೆಯೊಳಗೆ ಇದು ಪೂರ್ಣವಾಗಲಿದೆ.


ಸಚಿವರಿಗೆ ಖಾತೆ ಹಂಚಿಕೆ ಸಂಬಂಧ ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವರಿಷ್ಠರೊಡನೆ ಖಾತೆ ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಖಾತೆ ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದ ವರಿಷ್ಠರು ಖಾತೆ ಹಂಚಿಕೆ ಪಟ್ಟಿಯನ್ನು ಕಳುಹಿಸುವುದಾಗಿ ಹೇಳಿದ್ದರು. ಅದರಂತೆ ಸೋಮವಾರ ವರಿಷ್ಟರ ಜತೆ ಮಾತನಾಡಿ ಬೆಂಗಳೂರಿಗೆ ವಾಪಸ್ಸಾಗಿದ್ದ ಮುಖ್ಯಮಂತ್ರಿಗಳು, ವರಿಷ್ಠರಿಂದ ಖಾತೆ ಹಂಚಿಕೆ ಪಟ್ಟಿಗೆ ಕಾದು ಕುಳಿತಿದ್ದ ಇಂದು ಬೆಳಗ್ಗೆ ಮುಖ್ಯಮಂತ್ರಿ ಕಚೇರಿಗೆ ಖಾತೆ ಹಂಚಿಕೆ ಪಟ್ಟಿ ಬಂದಿದ್ದು,
ಈಗ ಖಾತೆ ಹಂಚಿಕೆಯಾಗಿರುವ ಸಚಿವರ ಪಟ್ಟಿ ಈ ರೀತಿ ಇದೆ.


ಚಲುವರಾಯಸ್ವಾಮಿ-ಕೃಷಿ,
ರಿಜ್ವಾನ್ ಹರ್ಷದ್-ಆಹಾರ
ಕೆ.ಹೆಚ್. ಮುನಿಯಪ್ಪ-ಸಮಾಜ ಕಲ್ಯಾಣ
ಸಂತೋಷ್ ಲಾಡ್- ಕಾರ್ಮಿಕ
ಬಸಂತಪ್ಪ- ಮೀನುಗಾರಿಕೆ

ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಬಸವರಾಜರಾಯರೆಡ್ಡಿ- ಉನ್ನತ ಶಿಕ್ಷಣ
ಜಮೀರ್ ಅಹಮದ್ ಖಾನ್-ವಸತಿ
ಲಕ್ಷ್ಮಣಸವದಿ-ಸಹಕಾರ
ಅಜೇಯ್ ಸಿಂಗ್-ಅರಣ್ಯ
ಎಸ್.ಎಸ್. ಮಲ್ಲಿಕಾರ್ಜುನ-ಗಣಿ ಮತ್ತು ಭೂವಿಜ್ಞಾನ
ಬಾಲಕೃಷ್ಣ -ಸಣ್ಣ ನೀರಾವರಿ
ಪುಟ್ಟರಂಗಶೆಟ್ಟಿ- ಪಶು ಸಂಗೋಪನೆ
ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ರುದ್ರಪ್ಪ ಲಮಾಣಿ, ನರೇಂದ್ರಸ್ವಾಮಿ, ವಿಜಯಾನಂದ ಕಾಶಂಪುರ್, ಬಿ. ನಾಗೇಂದ್ರ, ಶಿವರಾಜ್ ತಂಗಡಗಿ, ರಘುಮೂರ್ತಿ, ಶಿವಲಿಂಗೇಗೌಡ ಇವರಿಗೆ ಇನ್ನೂ ಖಾತೆ ಹಂಚಿಕೆ ಮಾಡಲಾಗಿಲ್ಲ.