Home ಜಿಲ್ಲೆ ಕಲಬುರಗಿ ಶ್ರಾವಣ ಬಂತು ನಾಡಿಗೆ

ಶ್ರಾವಣ ಬಂತು ನಾಡಿಗೆ

ಇಂದು ಗ್ರೀಷ್ಮ ಋತುವಿನ ಆಷಾಢ ಮುಗಿದು ಶ್ರಾವಣ ಪ್ರಾರಂಭವಾಗುವದು ಶ್ರವಣಾ ನಕ್ಷತ್ರದ ಹುಣ್ಣಿಮೆಯ ಯೋಗವಿರುವದರಿಂದ ಶ್ರಾವಣ ಎಂಬ ಶಬ್ದ ಬಂದಿದೆ.
ಕೆಲವರು ಶ್ರಾವಣ ಸೋಮವಾರ ಶಿವನ ವಾರವಿರುವದರಿಂದ ಶಿವನನ್ನು ರುದ್ರಾಭಿಷೇಕದಿಂದ ಸಂತೋಷಗೊಳಿಸುತ್ತಾರೆ, ಮಂಗಳವಾರ ಮಂಗಳ ಗೌರಿ ಪೂಜೆ, ಶುಕ್ರವಾರ ವರಮಹಾಲಕ್ಷ್ಮೀ ಪೂಜಿಸುತ್ತಾರೆ .
ಕೆಲವು ಹಿರಿಯರು ತಿಂಗಳ ಪಯರ್ಂತ ಒಂದೇ ಹೊತ್ತು ಊಟ,ಅಥವಾ ಉಪವಾಸ ಮಾಡುವ ಮೂಲಕ ಇದನ್ನು ಪಾಲಿಸುವದು ವಿಶೇಷ.ಗ್ರಾಮೀಣ ಪ್ರದೇಶದಲ್ಲಿ ರೈತರು ತಿಂಗಳ ಪಯರ್ಂತ ಮಠ ಮಂದಿರಗಳಲ್ಲಿ ಪುರಾಣ ಪ್ರವಚನ ಭಜನೆ, ಶಿವ ಸಪ್ತಾಹ ಮಾಡುವ ಮೂಲಕ ಶಿವನನ್ನು ನೆನೆಯುವರು.ಶ್ರಾವಣ ಮಾಸದ ತಿಂಗಳ ಪರ್ಯಂತ ಶುಭ ಕಾರ್ಯಗಳಿಗೆ ಒಳ್ಳೆಯ ದಿನಗಳು.
ಹಬ್ಬವೆಂದರೆ ಬರೀ ರಜೆಯಲ್ಲ ಬದುಕಿನ ಬಾಹ್ಯ ಮತ್ತು ಅಂತರಂಗದ ಸಮನ್ವಯ ಸಾಧಿಸುವ ಪ್ರಯತ್ನದ ಆಚಾರವಿದು. ಅಧುನಿಕ ಭರಾಟೆಯಲ್ಲಿ ಕೊಚ್ಚಿ ಹೋಗುತ್ತಿರುವ ಇಂದಿನ ಕುಟುಂಬಗಳಿಗೆ ಭಾವನಾತ್ಮಕ ನೆಲೆ ಒದಗಿಸುವಲ್ಲಿ ಹಬ್ಬಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ.ಪ್ರತಿ ದೇಶ ಜನಾಂಗ ಸಂಸ್ಕøತಿ ತಾನು ನಂಬುವ ಭಾವನೆಗಳನ್ನು ನೆನೆಯುವ ಆಚರಣೆಯೇ ಹಬ್ಬವಾಗಿದೆ. ತಳಿರು ತೋರಣದೊಂದಿಗೆ ಪ್ರಾರಂಭವಾದ ಹಬ್ಬ ಹೂರಣದ ಊಟದೊಂದಿಗೆ ಕೊನೆಯಾಗುವದು. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುವ ನಾಣ್ನುಡಿಯುಂಟು.”ಆದರೂ ವರ್ಷಕ್ಕೊಮ್ಮೆ ಮನೆಯ ಹೆಣ್ಣು ಮಕ್ಕಳನ್ನುಕರೆದು ಸತ್ಕರಿಸಿ ಉಡಿ ತುಂಬುವ ಅಥವಾ ತವರಿನವರೇ ಹೆಣ್ಣು ಮಕ್ಕಳ ಮನೆಗೆ ಭೇಟಿ ಕೊಟ್ಟು “ಕೊಬ್ಬರಿ ಕುಪ್ಪುಸÀ ಸಲ್ಲಿಸುವ ಸಂಪ್ರದಾಯವಿದೆ
ಸಂಬಂಧಗಳು ಅರ್ಥಪೂರ್ಣವಾಗಿಯೂ ಗಟ್ಟಿಯಾಗಿಯೂ ಆಗುವಲ್ಲಿ ಹಬ್ಬಗಳ ದೇಣಿಗೆ ಇದೆ. ಮನುಷ್ಯ ಜೀವ ಎಂಬುದು ಭಾವನೆಗಳ ಮೊತ್ತ ಈ ಭಾವನೆಗಳ ಉದಾತ್ತೀಕರಣವೇ ಇಡೀ ಬದುಕಿನ ಪ್ರಯತ್ನ, ಗುರಿ ಕಾಮನೆಗಳನ್ನು ವಿಪರೀತ ಹತ್ತಿಕ್ಕದೇ ಅದೇ ಸಮಯದಲ್ಲಿ ಸಂಪೂರ್ಣ ಶರಣಾಗದೇ ಬದುಕನ್ನು ಎತ್ತರಿಸಿಕೊಳ್ಳುವ ಪ್ರತಿಯೊಂದು ಸಮಾಜವೂ ಕಂಡು ಕೊಂಡ ಸಂಸ್ಕೃತಿಕ ಮಾರ್ಗವೇ ಹಬ್ಬ.
ಹಬ್ಬದ ಸಂದರ್ಭದಲ್ಲಿ ತಾವು ಆನಂದಿಸುವ ಜೊತೆಗೆ ಹಂಚಿಕೊಳ್ಳುವ ಧಾನ, ಧರ್ಮ ಮಾಡುವ, ನಿಡುವ ಪ್ರಕ್ರಿಯೆಗೆ ಪ್ರಮುಖ ಸ್ಥಾನವಿದೆ.ವಸ್ತುಗಳ ವಿನಿಮಯ ಅಲ್ಲ ಇಲ್ಲಿ ಭಾವನೆಗಳಿಗೂ ಅವಕಾಶ. ಹಬ್ಬಗಳ ಹೆಬ್ಬಾಗಿಲು ಸಾಲು ಸಾಲು ಹಬ್ಬಗಳ “ಪರ್ವ” ಮುಂದಿದೆ ಹಬ್ಬಗಳನ್ನು ಆಚರಿಸೋಣ ಸ್ವಾಗತಿಸೋಣ
-ಗುರು.ಕೆ.ಪಟ್ಟಣಶೆಟ್ಟಿ