Home ಜಿಲ್ಲೆ ಕಲಬುರಗಿ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಿ : ಡಾ ಅಶಫಾಕ ಅಹ್ಮದ

ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಿ : ಡಾ ಅಶಫಾಕ ಅಹ್ಮದ

ಕಲಬುರಗಿ, ಇಂಡಕ್ಷನ್ ಕಾರ್ಯಕ್ರಮವು ಹೊಸ ಪ್ರಯಾಣದ ಆರಂಭವಾಗಿದ್ದು, ಒಳ್ಳೆಯ ಮತ್ತು ಉಪಯುಕ್ತ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಯಶಸ್ಸೇ ಪೆÇೀಷಕರ ಯಶಸ್ಸು. ಪ್ರಶ್ನೆಗಳನ್ನು ಕೇಳಿ. ನಿಮ್ಮ ಶಿಕ್ಷಕರೊಂದಿಗೆ ಸಂವಹನ ನಡೆಸಿ ಎಂದು ಸಮ ಉಪಕುಲಪತಿ ಹಾಗೂ ವಿಜ್ಞಾನ ನಿಕಾಯದ ಡೀನ ಪೆÇ್ರ ಅಶಫಾಕ ಅಹ್ಮದ ಹೇಳಿದರು.
ಅವರು ಮಂಗಳವಾರ ವಿಜ್ಞಾನ ನಿಕಾಯದ ಬಿ ಎಸ್ಸಿ ವಿದ್ಯಾರ್ಥಿಗಳ ಇಂಡಕ್ಸನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಡಿಮೆ ವ್ಯಾಕುಲತೆ ಹೆಚ್ಚು ಕಲಿಕೆ. ಏಕಾಗ್ರತೆ ಮತ್ತು ಸಾಮಥ್ರ್ಯವು ಅತ್ಯಂತ ಪ್ರಭಾವಶಾಲಿಯಾಗಿದೆ. ಅಂಕಗಳು ಮಾತ್ರವಲ್ಲ. ಗುರಿಯನ್ನು ಸಾಧಿಸಿ. ನಮ್ಮ ಕೆಬಿಎನ ವಿವಿ ಉತ್ತಮ ವಾತಾವರಣವನ್ನು ಒದಗಿಸಲಿದೆ. ಇದೇ ಕ್ಯಾಂಪಸ್‍ನಲ್ಲಿ ಎಂಎಸ್ಸಿ ಮತ್ತು ಪಿಎಚ್‍ಡಿ ಪದವಿಗಳನ್ನು ಕೂಡ ವ್ಯಾಸಂಗ ಮಾಡಬಹುದು. ಈ ಬಹುಶಿಸ್ತೀಯ ವಿಶ್ವವಿದ್ಯಾಲಯವು ಸಂಶೋಧನೆಗೆ ಹೆಚ್ಚಿನ ಅವಕಾಶವನ್ನು ಹೊಂದಿದೆ ಎಂದು ಹೇಳಿದರು.
ವಾಣಿಜ್ಯ ಡೀನ ಪೆÇ್ರ ಶ್ರೀನಿವಾಸ ಇವರು ತಮ್ಮ ಅನುಭವಗಳನ್ನು ಹಂಚಿ ಕೊಂಡು ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೆರೇಪಿಸಿದರು. ಅಲ್ಲದೇ ಸಂವಹನದ ಮಹತ್ವ ತಿಳಿ ಹೇಳಿದರು. ಎಡುಕೇಶನ ಡೀನ್ ಪೆÇ್ರ ಇಕ್ಬಾಲ್ ಮಟ್ಟು ಕಠಿಣ ಪರಿಶ್ರಮ ಯಶಸ್ಸಿನ ಉತ್ತುಂಗಕ್ಕೆ ಕರೆದೋಯ್ಯುತ್ತದೆ ಎಂದರು.
ಇಂಜಿನಿಯರ ಡೀನ ಪೆÇ್ರ ಸುಭಾಸ ಕಮಲ ಅವರು ಮೊಬೈಲನ ಮಿತ ಬಳಕೆ ಬಗ್ಗೆ ತಿಳಿ ಹೇಳಿದರು.
ಉದ್ಘಾಟನೆಯ ಕಾರ್ಯಕ್ರಮದ ಪ್ರಾರಂಭದಲ್ಲಿ ಅಂಜುಮ್ ಪ್ರಾರ್ಥಿಸಿದರು. ಗಣಿತ ವಿಭಾಗದ ಉಪನ್ಯಾಸಕಿ ನಾಹೇದಂಜುಮ ಸ್ವಾಗತಿಸಿದರು. ಸ್ಯೆದಾ ಹಾಜರಾ ಫಾತಿಮಾ ಮತ್ತು ಉಜ್ಮಾ ಶೈಖ್ ನಿರೂಪಿಸುದರೆ ಸಸ್ಯಶಾಸ್ತ್ರದ ಮುಖ್ಯಸ್ಥೆ ಡಾ ರೋಮನಾ ವಂದಿಸಿದರು.
ಒಂದು ದಿನದ ಈ ಕಾರ್ಯಕ್ರಮದಲ್ಲಿ ಸಿಬಿಎಸಸಿ ಒಳಗೊಂಡಂತೆ ಅನೇಕ ವಿಷಯಗಳನ್ನು ನೂತನ ವಿದ್ಯಾರ್ಥಿಗಳಿಗೆ ಪರಿಚಯಿಸಿಲಾಯಿತು. ಅವರಣದ ಮುಖ್ಯ ಆಡಳಿತ ವಿಭಾಗಕ್ಕೆ ಭೇಟಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಿಕಾಯದ ಎಲ್ಲ ವಿಭಾಗದ ಉಪನ್ಯಸಕರು ಹಾಜರಿದ್ದರು.