
ಕಲಬುರಗಿ: ನಗರದ ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಕಾಲೇಜು ಹಾಗೂ ಬೆಂಗಳೂರಿನ ‘ನೀತಿ’ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪಿ.ಯು. ವಿದ್ಯಾರ್ಥಿಗಳಿಗಾಗಿ “ಕೃತಕ ಬುದ್ಧಿಮತ್ತೆ (ಎಐ) – ಸಮಸ್ಯೆ ಪರಿಹರಿಸುವ ಸವಾಲುಗಳು” ಎಂಬ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪೆÇ್ರ. ಚನ್ನರೆಡ್ಡಿ ಪಾಟೀಲರು, ಎಐ ತಂತ್ರಜ್ಞಾನ ಮಾನವನ ಬುದ್ದಿಮತ್ತೆಯ ವಿಕಾಸಕ್ಕೆ ಹೊರತು ವಿಕಾರಕ್ಕಲ್ಲಾ, ವಿದ್ಯಾರ್ಥಿಗಳು ಜೀವನದುದ್ದಕ್ಕೂ ಓದುವದು ಮತ್ತು ಬರೆಯುವದನ್ನು ಯಾವತ್ತೂ ಬಿಡಬಾರದು. ಇದು ಮೌಲ್ಯಗಳನ್ನು ಕಲಿಸುವದು ಎಂದರು. ತಂತ್ರಜ್ಞಾನವನ್ನು ಅವಶ್ಯಕತೆಗನುಗುಣವಾಗಿ ಉಪಯೋಗಿಸಬೇಕೇ ಹೊರತು ಅದರ ಗುಲಾಮರಾಗಬಾರದು ಮತ್ತು ಅದರ ದುರುಪಯೋಗ ವಾಗಬಾರದು ಎಂದರು.
ಮುಂದುವರೆದು ಮಾತನಾಡುತ್ತ, ಇಂದಿನ ಆಧುನಿಕ ಯುಗದಲ್ಲಿ ಸಮಯಕ್ಕೆ ತಕ್ಕಂತೆ ಜ್ಞಾನವನ್ನು ಅಪ್‍ಡೇಟ್ ಮಾಡಿಕೊಂಡಾಗ ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆಯಲು ಸಾಧ್ಯ. 'ಆರ್ಟಿಫಿಶಿಯಲ್ ಇಂಟೆಲಿಜೆನ್ಸ್' (ಎ.ಐ) ಅಂತಹ ಹೊಸ ವಿಷಯಗಳಲ್ಲಿ ವಿದ್ಯಾರ್ಥಿಗಳು ಪ್ರಾವೀಣ್ಯಯತೆಯನ್ನು ಪಡೆಯುವ ಮೂಲಕ ಅದರ ನೆರವಿನಿಂದ ಭವಿಷ್ಯದಲ್ಲಿ ಬರುವ ಸವಾಲುಗಳನ್ನು ಎದುರಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡ ಬಹುದೆಂದರು. ಐಐಟಿ ಧಾರವಾಡದ ಸಹಯೋಗದೊಂದಿಗೆ ಆಯ್ದ ಸರಕಾರಿ ಶಾಲೆಗಳಲ್ಲಿ ಶಾಲಾ ಹಂತದಿಂದಲೇ ಎಐ ಶಿಕ್ಷಣ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ನಮ್ಮ ಶಾಲೆಯಲ್ಲಿಯೂ ಐಐಟಿ ಮುಂಬೈ ಪದವೀಧರ ಅಭಿμÉೀಕ್ ಪಾಟೀಲರ ಹಾಗು ಎಐ ಆಧಾರಿತ 'ನೀತಿ ಸ್ಟಾರ್ಟಅಪ್' ಕಂಪನಿ ಮೂಲಕ ಸ್ವಂತ ಉದ್ಯೋಗ ಪ್ರಾರಂಭಿಸಿದ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಎಐ ತರಬೇತಿ ಇಂದಿನಿಂದ ಪ್ರಾರಂಭಸಿದ್ದು ಸಂತೋಷ ಎಂದರು.
"ನೀತಿ" ಸಂಸ್ಥೆಯ ಮುಖ್ಯಸ್ಥ ಹಾಗು ಸರ್ವಜ್ಞ ಕಾಲೇಜಿನ ಹಳೆಯ ವಿದ್ಯಾರ್ಥಿ ಸಾಯಿಸಮರ್ಥ ಮತ್ತು ಗೆಳೆಯರು ಕಾರ್ಯಾಗಾರದಲ್ಲಿ ಎಐ ಉಪಕರಣಗಳನ್ನು ಬಳಸುವುದು, ಕೃತಕ ಬುದ್ಧಿಮತ್ತೆ ಉಪಕರಣಗಳಿಗೆ ಸರಿಯಾದ ಸೂಚನೆಗಳನ್ನು ನೀಡಿ ನಮಗೆ ಬೇಕಾದ ನಿಖರ ಮಾಹಿತಿಯನ್ನು ಪಡೆಯುವ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾದ ಪ್ರಾಯೋಗಿಕ ತರಬೇತಿಯನ್ನು ನೀಡಿದರು.
ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಬಸವರಾಜ್ ತಾಡಪಳ್ಳಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಕುಲಕರ್ಣಿ ಹಾಗೂ ಪ್ರಭುಗೌಡ ಸಿದ್ಧಾರೆಡ್ಡಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.































