
ಬೀದರ:ಜೂ.೧: ಅಹಿಲ್ಯಬಾಯಿ ಹೊಳ್ಕರ್ ಜಯಂತಿ ಆಚರಣೆ ಜಯಂತ್ಯೋತ್ಸವನ್ನು ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯ ಬೀದರನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಹಿಲ್ಯಬಾಯಿ ಹೊಳ್ಕರ್‌ವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು. ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಶ್ರೀ ಸೋಮನಾಥ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಘಟಕದ ಅಧ್ಯಕ್ಷ ಶಶಿಧರ ಹೊಸಳ್ಳಿ,ಬಾಬುರಾವ ಕಾರುಬಾರಿ, ವೀರು ದಿಗ್ವಾಲ್, ಗೋಪಾಲ ಕಕಡಾಲ್ ಶ್ರೀಮತಿ ಶಂಕುತಲಾ ಬೆಲ್ದಾಳೆ, ಉಲ್ಲಾಸಿನಿ ಮುದಾಳೆ , ಜಿಲ್ಲಾ ಮಾಧ್ಯಮ ಘಟಕದ ಸಂಚಾಲಕರಾದ ಶ್ರೀನಿವಾಸ ಚೌದರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






























