
ಕಲಬುರಗಿ : ಕಲಬುರಗಿಯ ಯುವ ಗಾಯಕಿ ಶ್ರೀಮತಿ ಸವಿತಾ ವಿ. ಸ್ಥಾವರಮಠ ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ವತಿಯಿಂದ ಶನಿವಾರ ನಡೆದ 2026ನೇ ಸಾಲಿನ ಸ್ವಾತಂತ್ರ್ಯೋತ್ಸವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೊಣನಕುಂಟೆ ಕ್ರಾಸ್‍ನಲ್ಲಿ ಇರುವ ಶ್ರೀನಿಧಿ ಶ್ರೀನಿವಾಸ ದೇವಸ್ಥಾನ ಆವರಣದಲ್ಲಿ ದೇಶಭಕ್ತಿ ಗೀತೆ ಸಂಗೀತ ಗಾಯನವನ್ನು ಸುಶ್ರಾವ್ಯವಾಗಿ ಹಾಡಿದರು.
ನದಿಗಳ ಗಿರಿವನಗಳ ತಾಯೆ ಭಾರತಮಾತೆಯ ಎನ್ನುವ ಗೀತೆಯನ್ನು ರಾಗ ಮಧುಕೌಂಸ ರಾಗದಲ್ಲಿ ಹಾಡಿ, ನಂತರ ಭವ್ಯ ಭೂಮಿ ಭರತ ಭೂಮಿ ರಾಗ ಅಹಿರಬೈರವ ಹಾಡಿದರು. ಕೊನೆಯಲ್ಲಿ ಕುವೆಂಪು ಅವರ ರಚಿತ ಭರತ ಭೂಮಿ ನನ್ನ ತಾಯಿ ಎನ್ನುವ ರಾಗ ಕೀರವಾಣಿಯಲ್ಲಿ ಹಾಡಿ ಜನಮನ ಸೂರೆಗೋಳಿಸಿದರು. ಇವರಿಗೆ ವಾದ್ಯ ಸಹಕಾರ ಆಕಾಶವಾಣಿ ಹಾಗೂ ದೂರದರ್ಶನ ಬಿ-ಹೈ ಶ್ರೇಣಿ ಕಲಾವಿದರಾದ ಶ್ರೀಮತಿ ಪವಿತ್ರಾ ವಿಶ್ವನಾಥ ರಾಜನಾಳ ಬೀದರ ಮತ್ತು ವೀರಭದ್ರಯ್ಯ ಸ್ಥಾವರಮಠ ಭೂಸನೂರ ಸಾಥ ನೀಡಿದರು.































