
ಕಲಬುರ್ಗಿ :ನಗರದ ರಾಜಾಪುರ ಪ್ರಶಾಂತ ನಗರ ದಲ್ಲಿರುವ ಅಮರಕಲಾ ಸ್ಟುಡಿಯೋದಲ್ಲಿ ಅಮರಕಲಾ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸಂಘದ ಶ್ರಾವಣ ಮಾಸದ ಸಂಗೀತ ಸುಧೆ ಮತ್ತು ಭಕ್ತಿ ಸಂಪದ ಕಾಯ9ಕ್ರಮದ ಉದ್ಘಾಟನೆಯನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಅಥ9ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥರಾದ ವಾಸುದೇವ ಸೇಡಂ ಉದ್ಘಾಟಿಸಿ ಮಾತನಾಡುತ್ತ ಇಂದಿನ ದಿನಗಳಲ್ಲಿ ಇಂತಹ ಭಕ್ತಿ ಸಂಪದ ಕಾಯ9ಕ್ರಮಗಳ ಅವಶ್ಯಕತೆಯಿದೆ, ಭಕ್ತಿಸಂಗೀತ ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಪರಸ್ಪರ ಸೌಹಾದ9ತೆಯನ್ನು ಹೆಚ್ಚಿಸುತ್ತದೆ ಎಂದು ನುಡಿದರು.ಡಾ. ಶಂಕರಗೌಡ ಪಾಟೀಲ, ಕೆ ಗಿರಿಮಲ್ಲ, ಅಮರಪ್ರಿಯ ಹಿರೇಮಠ, ವೇದಿಕೆಯ ಮೇಲಿದ್ದರು.ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಶ್ರೀ ಸುರೇಶ ಜಾಧವ ಅಧ್ಯಕ್ಷತೆ ವಹಿಸಿದರು.ಸಂಗೀತ ಕಲಾವಿದರಾದ ವಿಜಯಲಕ್ಷ್ಮಿ ಕೆಂಗನಾಳ, ಪರಶುರಾಮ ಗರೂರ, ವಿಕಾಸ್ ಮಠಪತಿ, ಕವಿತಾ ರಾಮಗಿರಿ ಹಿರೇಮಠ ಅವರಿಂದ ಸಂಗೀತ ಸೇವೆ ಸಲ್ಲಿಸಿದರು. ಕುಮಾರಿ ಸಂಜನಾ ಪಲ್ಲೇದ ತಂಡದವರಿಂದ ವಚನ ನೃತ್ಯ ಪ್ರದರ್ಶನ ಮಾಡಿದರು.ವೈಷ್ಣವಿ ಹಿರೇಮಠ, ಮೇಘನಾ ಹಿರೇಮಠ, ಚಂದ್ರಕಲಾ ಶಹಾಬಾದ, ಸರೋಜಾ ಜಾಕರಡ್ಡಿ, ಭಾರತಿ ಧನಶೆಟ್ಟಿ ಪ್ರಾರ್ಥಿಸಿದರು. ಖ್ಯಾತ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ರಸವತ್ತಾಗಿ ಮಾತನಾಡಿದರು. ದಯಾನಂದ ಹಿರೇಮಠ ತಬಲಾ ಸಾಥ್ ನೀಡಿದರು. ಸಾಂಸ್ಕೃತಿಕ ಕಾಯ9ಕ್ರಮದ ಅಧ್ಯಕ್ಷತೆ ಯನ್ನು ನ್ಯಾಯವಾಧಿಗಳಾದ ಶ್ರೀ ಹಣಮಂತರಾಯ ಅಟ್ಟೂರ ವಹಿಸಿದರು. ಚಂದ್ರಕಲಾ ಶಹಾಬಾದ ನಿರೂಪಿಸಿದರು.ಇದೆ ಸಂಧರ್ಭದಲ್ಲಿ ಬಾಲ ಪ್ರತಿಭೆಗಳಿಗೆ ಸನ್ಮಾನಿಸಲಾಯಿತು.































