Home ಜಿಲ್ಲೆ ಗುರು ಗುರುವಾಗಿ, ಶಿಷ್ಯ ಶಿಷ್ಯನಾಗಿಯೇ ಇರಬೇಕು: ಮುರುಘೇಶ

ಗುರು ಗುರುವಾಗಿ, ಶಿಷ್ಯ ಶಿಷ್ಯನಾಗಿಯೇ ಇರಬೇಕು: ಮುರುಘೇಶ

ತಾಳಿಕೋಟೆ:ಜು.೩೦: ಗುರುವಿನ ಗುಲಾಮನಾಗಿರುವ ತನಕ ದೊರೆಯದಣ್ಣ ಮುಕುತಿ ಎಂಬAತೆ ಗುವಾದವನು ಗುರುವಿನ ಸ್ಥಾನಮಾನದಂತೆ ಶಿಷ್ಯ ಆದವನಿಗೆ ಬೋಧಿಸುವಂತಿರಬೇಕು ಶಿಷ್ಯನಾದವರು ಗುರುಬೋಧನೆಯನ್ನು ಅನುಸರಿಸುತ್ತಾ ಸಾಗಿದರೆ ಮೋಕ್ಷದ ಮಾರ್ಗವೆಂಬುದು ದೊರೆಯಲಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಉಸ್ತುವರಿಯಾದ ವೇ|| ಮುರುಘೇಶ ವಿರಕ್ತಮಠ ಅವರು ನುಡಿದರು.
ಬುಧವಾರರಂದು ಸ್ಥಳೀಯ ನಿಜಗುಣ ಶಿವಯೋಗಿಗಳ ಆನಂದಾಶ್ರಮದಲ್ಲಿ ಶಾಸ್ತç ಸಮೀತಿಯವರ ವತಿಯಿಂದ ಏರ್ಪಡಿಸಲಾದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು ಶ್ರೀ ಖಾಸ್ಗತ ಶಿವಯೋಗಿಗಳು ಗುರುಗಳಾದ ಹುಬ್ಬಳ್ಳಿಯ ಸಿದ್ದಾರೂಢ ಶ್ರೀಗಳಿಂದ ಜ್ಞಾನಸಂಪತ್ತೆAಬುದನ್ನು ಪಡೆದುಕೊಂಡರು ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಭಕ್ತರ ಅಪೇಕ್ಷೆಯಂತೆ ಆಗಮಿಸಿ ಜನೋದ್ದಾರ ಹಾಗೂ ಭಕ್ತೋಧ್ದಾರಗೈದರಲ್ಲದೇ ಅವರಲ್ಲಿರತಕ್ಕಂತಹ ಗುರುಭಕ್ತಿ ದೇವನ ಒಲುಮೆಗೆ ಪಾತ್ರವಾಗಿತ್ತೆಂದರು. ಶ್ರೀಮಠದ ಶಿವಬಸವ ದೇವರು ಹಾಗೂ ತುಮಕೂರಿನ ಶ್ರೀ ಸಿದ್ದಗಂಗಾಶ್ರೀಗಳು ಈ ಹಿಂದೆ ಖಾಶಿಯಲ್ಲಿ ಶಿಕ್ಷಣ ಪಡೆದು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದರ ಕುರಿತು ಶ್ರೀ ಮಠದ ಭಕ್ತರ ಸಂಖ್ಯೆ ಇಂದಿನ ದಿನಮಾನದಲ್ಲಿ ಹೆಚ್ಚುತ್ತಿರುವ ಹಾಗೂ ವಿರಕ್ತಶ್ರೀಗಳ ಹಾಗೂ ಸಿದ್ದಲಿಂಗದೇವರ ಪ್ರಭಾವ ಹೆಚ್ಚುತ್ತಿರುವ ಕುರಿತು ಶಾಸ್ತç ಭಕ್ತರ ಮುಂದೆ ವಿವರಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಉಪನ್ಯಾಸಕರಾದ ಪರಶುರಾಮ ಚೌಕೇರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಆದ್ಯಾತ್ಮದ ಗುರುವಾಗಿದ್ದ ವ್ಯಾಸ ಮಹಾಋಷಿಗಳನ್ನು ನೆನಪಿಸುವಂತಹ ದಿನವೇ ಗುರುಪೂರ್ಣಿಮೆಯಾಗಿದೆ ಗುರುವಿನ ಕೃಪಾಬಿತ್ತಿಯೆಂಬುದು ಎಲ್ಲರ ಮೇಲೆ ಹರಿಯಬೇಕೆಂಬುದೇ ಕಾರ್ಯಕ್ರಮದ ಉದ್ದೇಶವಾಗಿದೆ ಪರತತ್ವ ವಿದ್ಯೆಯನ್ನು ಹೇಳುವಂತಹ ಗುರು ಮದನೆನ್ನುವದು ಇರಬಾರದು ಅದಕ್ಕೆ ವರಪುಣ್ಯಮಯವೆಂದು ಕರೆದಿದ್ದಾರೆ ವರಪಾಪಮಯವಾದಂತಹ ಕಾರ್ಯ ಮಾಡಬಾರದೆಂದರು. ತಾಳಿಕೋಟೆ ಖಾಸ್ಗತ ಮಠದ ಸಿದ್ದಲಿಂಗದೇವರು ವರಪುಣ್ಯಮಯ ಶರೀರದವರಾಗಿದ್ದು ಯಾವ ಅಪೇಕ್ಷೆಯಿಲ್ಲದೇ ಶ್ರೀ ಸಿದ್ದೇಶ್ವರ ಶ್ರೀಗಳಂತೆ ಮುನ್ನಡೆದಿದ್ದಾರೆಂದು ಯಡಿಯೂರ ಬಸವಲಿಂಗಶ್ರೀಗಳು ಬರೆದಂತಹ ತತ್ವ ಪದಗಳನ್ನು ಹಾಡಿ ಅರ್ಥೈಯಿಸಿದರಲ್ಲದೇ ಸಜ್ಜಲಗುಡ್ಡ ಶರಣಮ್ಮತಾಯಿಯ ಕೆಲವು ಪವಾಡಗಳನ್ನು ಹೇಳಿ ಸಮಾಜದಲ್ಲಿ ಹುಟ್ಟಿ ಜಗತ್ತನ್ನೇ ಬೆಳಗುವಂತೆ ಶರಣಮ್ಮನವರು ಮಾಡಿದ್ದಾರೆಂದ ಅವರು ಶರಣಮ್ಮನವರು ದಿನಕ್ಕೆ ೧೬ ಸಾವಿರಕ್ಕೂ ಹೆಚ್ಚು ಶಿವಮಂತ್ರವನ್ನು ಪಠಿಸುತ್ತಿದ್ದರು ಅವರಿಗೆ ದೇವರ ಒಲುಮೆಯಾಗಿತ್ತು ಅವರು ಅಂದದ್ದೇ ದೇವಭಾಷೆಯಾಗಿ ಪರಿಣಮಿಸುತ್ತಿತ್ತೆಂದರು.
ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಅಧ್ಯಕ್ಷರಾದ ಎಸ್.ಎಂ. ಬೇನಾಳಮಠ ಅವರು ಮಾತನಾಡಿ ಗುರುವಿಗೆ ಕೊಟ್ಟಂತಹ ಮಾತನ್ನು ಪಾಲಿಸಿದಂತಹ ಭಕ್ತರ ಕುರಿತು ಶಿವಲಿಂಗ ಶ್ರೀಗಳ ಕುರಿತು ತಿಳಿಹೇಳುತ್ತಾ ಗುರುಶಕ್ತಿಯೆಂಬುದು ದೊಡ್ಡದಾಗಿರುತ್ತದೆ ಗುರು ಮೋಕ್ಷವನ್ನು ಕೊಡುತ್ತಾನೆ ಭಕ್ತಿ ಜ್ಞಾನ ಶಕ್ತಿ ಪಡೆಯಬೇಕಾದರೆ ಮೋಕ್ಷದ ದಾರಿಗೆ ಹೋಗಬೇಕಾದರೆ ಶಾಸ್ತç ಪ್ರವಚನವನ್ನು ಆಲಿಸಿ ಪಾಲಿಸಬೇಕಾಗುತ್ತದೆ ಎಂದರು.
ಶಾಸ್ತç ಪ್ರವಚನದ ಶ್ರೀಮತಿ ಶಕುಂತಲಾ ಹಿರೇಮಠ, ಶ್ರೀಮತಿ ಉಮಾ ಘಿವಾರಿ, ಹೇಮಾ ದುರ್ಗದಮಠ, ಶ್ರೀಮತಿ ಡಾ. ಅರಮನಿ ಅಕ್ಕನವರು, ಶ್ರೀಮತಿ ಕ್ವಾಟಿ ಅವರು ಮಾತನಾಡಿದರು.
ಸಾನಿಧ್ಯವಹಿಸಿದ ಕೋರವಾರ ಚೌಕೀಮಠದ ಶ್ರೀಗಳು ಆಶೀರ್ವಚನವಿತ್ತರು.
ಶ್ರೀಮತಿ ಲೋಕರೆ, ಕ್ವಾಟಿ ಸಂಗೀತ ಸೇವೆ ಸಲ್ಲಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪರಗಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲಗೊAಡಿತು.