Home ಜಿಲ್ಲೆ ಭಕ್ತಿ, ಸಂಸ್ಕೃತಿ ಮತ್ತು ಸಾಮರಸ್ಯದ ಸಂಗಮ

ಭಕ್ತಿ, ಸಂಸ್ಕೃತಿ ಮತ್ತು ಸಾಮರಸ್ಯದ ಸಂಗಮ

ಸೈದಾಪುರ:ಜು.೨೮:ದೇವರು ಪ್ರತಿಯೊಂದು ಜೀವಿಯಲ್ಲೂ ನೆಲೆಸಿದ್ದಾನೆ. ಎಲ್ಲರಲ್ಲೂ ದೇವರನ್ನು ಕಾಣುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಿಜವಾದ ಭಕ್ತಿ ಸಾಧ್ಯ. ಜಾತಿ, ಮತ, ಪಂಥಗಳ ಭೇದವನ್ನು ಮರೆತು ಪರಸ್ಪರ ಪ್ರೀತಿ, ಕರುಣೆ ಮತ್ತು ಸೇವಾ ಮನೋಭಾವದಿಂದ ಬದುಕುವುದೇ ಶ್ರೀ ಜಗನ್ನಾಥನ ಸಂದೇಶವಾಗಿದೆ ಎಂದು ಸೈದಾಪುರ ಇಸ್ಕಾನ್ ಟೆಂಪಲ್ ಅಧ್ಯಕ್ಷ ಸಚಿ ಚೈತನ್ಯ ದಾಸರು ಅಭಿಪ್ರಾಯಪಟ್ಟರು.
ಪಟ್ಟಣದ ಕೃಷ್ಣ ಬಲರಾಮ ಇಸ್ಕಾನ್ ಟೆಂಪಲವತಿಯಿAದ ಹಮ್ಮಿಕೊಂಡಿದ್ದ ಭಗವಾನ್ ಶ್ರೀ ಜಗನ್ನಾಥ ಸ್ವಾಮಿಯ ಪವಿತ್ರ ರಥಯಾತ್ರೆಯು ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ಸೇರಿದ ನೂರಾರು ಭಕ್ತರ ನಡುವೆ ರೈಲ್ವೇ ನಿಲ್ದಾಣದ ಹತ್ತಿರ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ರಥಯಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಸಮಾಜದಲ್ಲಿ ಸಾಮರಸ್ಯ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಹೋತ್ಸವವಾಗಿದೆ. ಪ್ರತಿಯೊಬ್ಬರೂ ಮಾನವ ಸೇವೆಯನ್ನು ಮಾಧವ ಸೇವೆಯೆಂದು ಭಾವಿಸಿ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ-ಹವನ, ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿಯೊAದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊAಡವು. ಬಳಿಕ ಭವ್ಯವಾಗಿ ಅಲಂಕರಿಸಲಾದ ಶ್ರೀ ಜಗನ್ನಾಥ, ಬಲರಾಮ ಹಾಗೂ ಸುಭದ್ರಾ ದೇವಿಯರ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ, ವೇದಘೋಷ, ಭಜನೆ, ಸಂಕೀರ್ತನೆ ಹಾಗೂ ಜೈ ಜಗನ್ನಾಥ ಎಂಬ ಜಯಘೋಷಗಳ ನಡುವೆ ರಥಯಾತ್ರೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥಯಾತ್ರೆಯಲ್ಲಿ ಮಹಿಳೆಯರು, ಯುವಕರು, ಹಿರಿಯರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ರಥದ ಹಗ್ಗವನ್ನು ಎಳೆದು ತಮ್ಮ ಭಕ್ತಿಭಾವವನ್ನು ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ರೈಲ್ವೇ ನಿಲ್ದಾಣದಿಂದ ಜಿ.ಆರ್. ಪಾರ್ಕ್ ವರೆಗೆ ಸ್ವಯಂಸೇವಕರು ಹಾಗೂ ಪೊಲೀಸ್ ಸಿಬ್ಬಂದಿ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.