
ಬೆಂಗಳೂರು, ನ.̇೧೮- ಬೆಂಗಳೂರು ಟೆಕ್ ಸಮಿಟ್ (BTS) 2026ರ ವಿಶ್ವವಿದ್ಯಾಲಯ ಪಾಲುದಾರ ಸಂಸ್ಥೆಯಾಗಿರುವ ಅಲಯನ್ಸ್ ವಿಶ್ವವಿದ್ಯಾಲಯವು, ಸಮಿಟ್ನಲ್ಲಿ ತನ್ನ ಅತ್ಯಾಧುನಿಕ ತಂತ್ರಜ್ಞಾನ ಆವಿಷ್ಕಾರಗಳು, ಬಹುಶಿಸ್ತೀಯ ಸಂಶೋಧನೆ ಮತ್ತು ವಿದ್ಯಾರ್ಥಿ ಉದ್ಯಮಶೀಲತಾ ಸಾಧನೆಗಳನ್ನು ಪ್ರದರ್ಶಿಸುತ್ತಿದೆ. ನವೆಂಬರ್ 17ರಿಂದ 19ರವರೆಗೆ ಬೆಂಗಳೂರಿನ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ನಡೆಯುತ್ತಿರುವ ಈ ಸಮಿಟ್ನಲ್ಲಿ ವಿಶ್ವವಿದ್ಯಾಲಯವು ಮೂರು ದಿನಗಳ ಕಾಲ ಭಾಗವಹಿಸುತ್ತಿದ್ದು, ತನ್ನ ವಿವಿಧ ಶ್ರೇಷ್ಠತಾ ಕೇಂದ್ರಗಳು (Centres of Excellence), AU-QUASAR, ಮೇಕರ್ಸ್ಪೇಸ್, ಸಂಶೋಧಕರು ಹಾಗೂ ವಿದ್ಯಾರ್ಥಿ ಸ್ಟಾರ್ಟ್ಅಪ್ಗಳ ಮೂಲಕ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ರೊಬೊಟಿಕ್ಸ್, ಆರೋಗ್ಯ ತಂತ್ರಜ್ಞಾನ, ವಿಮಾನಯಾನ, ಫಿನ್ಟೆಕ್, ಸೈಬರ್ ಭದ್ರತೆ, ಇಮರ್ಸಿವ್ ತಂತ್ರಜ್ಞಾನ ಸೇರಿದಂತೆ ವಿವಿಧ ಉದಯೋನ್ಮುಖ ಕ್ಷೇತ್ರಗಳಲ್ಲಿನ ಆವಿಷ್ಕಾರಗಳನ್ನು ಅನಾವರಣಗೊಳಿಸುತ್ತಿದೆ.
ಸಮಿಟ್ಗೆ ಭೇಟಿ ನೀಡುವವರು ಹಾಲ್ 3ರಲ್ಲಿರುವ H3A047 ಮತ್ತು H3A007 ಸ್ಟಾಲ್ಗಳಲ್ಲಿ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ತಂತ್ರಜ್ಞಾನ ಆವಿಷ್ಕಾರಗಳನ್ನು ವೀಕ್ಷಿಸಬಹುದಾಗಿದೆ. ಇದರೊಂದಿಗೆ ಹಾಲ್ 3 ಮತ್ತು 4ರಲ್ಲಿ ವಿಶ್ವವಿದ್ಯಾಲಯದ ಒಂಬತ್ತು ವಿದ್ಯಾರ್ಥಿ ಸ್ಟಾರ್ಟ್ಅಪ್ಗಳು ತಮ್ಮ ಉತ್ಪನ್ನಗಳು ಮತ್ತು ನವೀನ ಪರಿಹಾರಗಳನ್ನು ಪ್ರದರ್ಶಿಸುತ್ತಿವೆ.
ಸಂಶೋಧನೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಅನಾವರಣ
ಇಮರ್ಸಿವ್ ತಂತ್ರಜ್ಞಾನಗಳ ಶ್ರೇಷ್ಠತಾ ಕೇಂದ್ರ (Centre of Excellence in Immersive Technologies – AR/VR) ವತಿಯಿಂದ ವಯೋವೃದ್ಧರಿಗಾಗಿ ರೂಪಿಸಿರುವ ReMotion ಎಂಬ AR ಆಧಾರಿತ ವ್ಯಾಯಾಮ ಅಪ್ಲಿಕೇಶನ್, ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸುವ ಬುದ್ಧಿವಂತ ಸೇವೆಗಳ ಸಿಮ್ಯುಲೇಷನ್ ಆಗಿರುವ Responsive Intelligent Emergency Services ಹಾಗೂ AR ತಂತ್ರಜ್ಞಾನ ಆಧಾರಿತ ನ್ಯಾವಿಗೇಷನ್ ಅಪ್ಲಿಕೇಶನ್ Alliance Atlas ಅನ್ನು ಪ್ರದರ್ಶಿಸಲಾಗುತ್ತಿದೆ. ಇದರೊಂದಿಗೆ ವಿಮಾನ ಎಂಜಿನ್ಗಳು, ಲ್ಯಾಂಡಿಂಗ್ ಗೇರ್ ಮತ್ತು ಕಾಕ್ಪಿಟ್ ಕಾರ್ಯಾಚರಣೆಗಳನ್ನು ಒಳಗೊಂಡ VR ಆಧಾರಿತ ವಿಮಾನಯಾನ ತರಬೇತಿ ಮಾಡ್ಯೂಲ್ಗಳನ್ನು ಪ್ರದರ್ಶಿಸುವ ಮೂಲಕ ಅನುಭವಾಧಾರಿತ ಕಲಿಕೆಗೆ ಹೊಸ ಅವಕಾಶಗಳನ್ನು ಪರಿಚಯಿಸಲಾಗುತ್ತಿದೆ.
ರೊಬೊಟಿಕ್ಸ್ ಮತ್ತು ಆಟೊಮೇಷನ್ ಶ್ರೇಷ್ಠತಾ ಕೇಂದ್ರ (Centre of Excellence in Robotics and Automation) ವತಿಯಿಂದ ISRO Robotics Challenge (IROC) 2026ರ ಭಾಗವಾಗಿ ಅಭಿವೃದ್ಧಿಪಡಿಸಲಾದ GPS ಸಂಪರ್ಕವಿಲ್ಲದ ಪರಿಸ್ಥಿತಿಯಲ್ಲಿಯೂ ಕಾರ್ಯನಿರ್ವಹಿಸಬಲ್ಲ ಸ್ವಾಯತ್ತ ಡ್ರೋನ್ ಮತ್ತು ಅದರ ಡಾಕಿಂಗ್ ಸ್ಟೇಷನ್ ಅನ್ನು ಪ್ರದರ್ಶಿಸಲಾಗುತ್ತಿದೆ. ಇದರೊಂದಿಗೆ ದೂರನಿಯಂತ್ರಿತ ರೋಬೋಟಿಕ್ ಕೈಗಳು, Embodied AI ಹಾಗೂ Vision-Language Models ತಂತ್ರಜ್ಞಾನದ ಮೂಲಕ ನೈಜ ಸಮಯದಲ್ಲಿ ಮಾನವ ಮತ್ತು ರೋಬೋಟ್ ನಡುವಿನ ಸಂವಹನದ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುತ್ತಿದೆ.
ಅಲಯನ್ಸ್ ವಿಶ್ವವಿದ್ಯಾಲಯದ ಕ್ವಾಂಟಮ್ AI ಸ್ಕೂಲ್ (AU-QUASAR) ತನ್ನ ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು AI & ML ಕ್ಷೇತ್ರಗಳಲ್ಲಿನ B.Tech. ಹಾಗೂ M.Tech. ಪದವಿ ಕಾರ್ಯಕ್ರಮಗಳನ್ನು ಪರಿಚಯಿಸುತ್ತಿದೆ. NVIDIA DGX H200, ಅತ್ಯಾಧುನಿಕ AI ಪ್ರಯೋಗಾಲಯಗಳು, ಮೇಕರ್ಸ್ಪೇಸ್ಗಳು ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಸೌಲಭ್ಯಗಳನ್ನು ಒಳಗೊಂಡ ಸುಧಾರಿತ ಮೂಲಸೌಕರ್ಯವನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಹಣಕಾಸು ಹೂಡಿಕೆ ಬಂಡವಾಳದ ಅತ್ಯುತ್ತಮ ನಿರ್ವಹಣೆ (Financial Portfolio Optimisation), Post-Quantum Cryptography ಹಾಗೂ ಸಂಕೀರ್ಣ ಗಣಕಯಂತ್ರ ಸಮಸ್ಯೆಗಳಿಗೆ ಕ್ವಾಂಟಮ್ ಅಲ್ಗಾರಿದಮ್ಗಳ ಅನ್ವಯಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪರಿಚಯಿಸಲಾಗುತ್ತಿದೆ.
ಅಲಯನ್ಸ್ ವಿಶ್ವವಿದ್ಯಾಲಯದ ಮೇಕರ್ಸ್ಪೇಸ್ (Makerspace) ವತಿಯಿಂದ ಜೈವಿಕ ಅನುಕರಣ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಸೊಳ್ಳೆ ಸೆರೆಹಿಡಿಯುವ ಸಾಧನ (Bio-Mimicry-Based Smart Mosquito Trapper), Katha Mitra, SMART ECCENTKNEE, H₂S ಸೆನ್ಸಿಂಗ್ ಸ್ಮಾರ್ಟ್ ವಾಚ್, ಸ್ಮಾರ್ಟ್ ಮಿಸ್ಟ್ ಫ್ಯಾನ್ ಹಾಗೂ ಮುಟ್ಟಿನ ಸಮಯದ ಹೊಟ್ಟೆನೋವಿಗೆ ಪರಿಹಾರ ಒದಗಿಸುವ NIRVANA ಸಾಧನ ಸೇರಿದಂತೆ ಹಲವು ನವೀನ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ.
ಇದರ ಜೊತೆಗೆ, HS Vinod, Mohd Kashif ಮತ್ತು Dr. Dhriti Majumder ಅವರು ಅಭಿವೃದ್ಧಿಪಡಿಸಿರುವ ಸೋರಿಯಾಸಿಸ್ (Psoriasis) ರೋಗವನ್ನು ಪತ್ತೆಹಚ್ಚಲು ಸಹಕಾರಿಯಾಗುವ, ದೇಹಕ್ಕೆ ಯಾವುದೇ ಹಾನಿ ಮಾಡದ ಪೋರ್ಟಬಲ್ ಪಾಯಿಂಟ್-ಆಫ್-ಕೇರ್ ಪರೀಕ್ಷಾ ವ್ಯವಸ್ಥೆಯೂ ಪ್ರಮುಖ ಆಕರ್ಷಣೆಯಾಗಿದೆ.
ಕಂಪ್ಯೂಟರ್ ವಿಷನ್ ಶ್ರೇಷ್ಠತಾ ಕೇಂದ್ರ (Centre of Excellence in Computer Vision), Neurosynaptic Communications Pvt. Ltd. ಸಹಯೋಗದೊಂದಿಗೆ IoT ಆಧಾರಿತ ದೂರಸ್ಥ ವೈದ್ಯಕೀಯ ರೋಗನಿರ್ಣಯ ಪರಿಹಾರವಾದ ReMeDi ಅನ್ನು ಪ್ರದರ್ಶಿಸುತ್ತಿದೆ. ಇದೇ ವೇಳೆ, ಸೈಬರ್ ಭದ್ರತಾ ಶ್ರೇಷ್ಠತಾ ಕೇಂದ್ರ (Centre of Excellence in Cyber Security) ವತಿಯಿಂದ ಕ್ರಿಪ್ಟೋಕರೆನ್ಸಿ ವಾಲೆಟ್ಗಳನ್ನು ಪತ್ತೆಹಚ್ಚಲು ಮತ್ತು ಡಿಜಿಟಲ್ ಹಣದ ವಹಿವಾಟುಗಳನ್ನು ವಿಶ್ಲೇಷಿಸಲು ವಿನ್ಯಾಸಗೊಳಿಸಲಾದ ಬ್ಲಾಕ್ಚೈನ್ ಫೊರೆನ್ಸಿಕ್ಸ್ ವೇದಿಕೆ Exchequer ಅನ್ನು ಪರಿಚಯಿಸಲಾಗುತ್ತಿದೆ.
ವಿದ್ಯಾರ್ಥಿ ಸ್ಟಾರ್ಟ್ಅಪ್ಗಳ ಮೂಲಕ ಉದ್ಯಮಶೀಲ ಆವಿಷ್ಕಾರಗಳ ಅನಾವರಣ
ಅಲಯನ್ಸ್ ವಿಶ್ವವಿದ್ಯಾಲಯದ ಉದ್ಯಮಶೀಲತಾ ಪರಿಸರ ವ್ಯವಸ್ಥೆಯಡಿ ರೂಪುಗೊಂಡಿರುವ ಒಂಬತ್ತು ಉದಯೋನ್ಮುಖ ವಿದ್ಯಾರ್ಥಿ ಸ್ಟಾರ್ಟ್ಅಪ್ಗಳು ಕೃತಕ ಬುದ್ಧಿಮತ್ತೆ, ಏರೋಸ್ಪೇಸ್, ಸ್ಮಾರ್ಟ್ ಮೊಬಿಲಿಟಿ, ಗ್ರಾಹಕ ಉತ್ಪನ್ನಗಳು ಮತ್ತು ಅನುಭವಾಧಾರಿತ ಕಲಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ತಮ್ಮ ನವೀನ ಪರಿಹಾರಗಳನ್ನು ಪ್ರದರ್ಶಿಸುತ್ತಿವೆ.
ಹಾಲ್ 4ರಲ್ಲಿ ಭಾಗವಹಿಸುತ್ತಿರುವ ಸ್ಟಾರ್ಟ್ಅಪ್ಗಳಲ್ಲಿ AI ಆಧಾರಿತ ನೇಮಕಾತಿ ಪರಿಹಾರಗಳನ್ನು ಪರಿಚಯಿಸುತ್ತಿರುವ HireXT Intelligence Pvt. Ltd., ತಂತ್ರಜ್ಞಾನ ಆಧಾರಿತ ಆಹಾರ ಸೇವೆಗಳನ್ನು ಒದಗಿಸುವ Crav, ಅನುಭವಾಧಾರಿತ ಕಲಿಕೆಗೆ ಒತ್ತು ನೀಡುವ Progressive Learning Adventures & You LLP, ಹಣ್ಣುಗಳ ಸತ್ವ ಮಿಶ್ರಿತ ಪಾನೀಯಗಳನ್ನು ಪರಿಚಯಿಸುತ್ತಿರುವ FUSED, ಸ್ಮಾರ್ಟ್ ಸಾರಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿರುವ BusMitra, ಮಾನವ–ಆನೆ ಸಂಘರ್ಷವನ್ನು ಕಡಿಮೆ ಮಾಡಲು AI ತಂತ್ರಜ್ಞಾನ ಬಳಸುತ್ತಿರುವ ELIAS, IoT ಆಧಾರಿತ ಸುಗಂಧ ದ್ರವ್ಯ ವಿತರಣಾ ವ್ಯವಸ್ಥೆಯನ್ನು ಪರಿಚಯಿಸುತ್ತಿರುವ SprayNSlay ಹಾಗೂ ಏರೋಸ್ಪೇಸ್ ಮತ್ತು CubeSat ಕಲಿಕಾ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಿರುವ Celeris Aerospace ಪ್ರಮುಖವಾಗಿವೆ.
ಹಾಲ್ 3ರಲ್ಲಿ Fluxella ಸಂಸ್ಥೆಯು ಸ್ವಯಂಚಾಲಿತ ಕ್ಯಾಂಪಸ್ ಮುದ್ರಣ ಸೇವೆಗಳ (Automated Campus Printing Solutions) ಪರಿಹಾರಗಳನ್ನು ಪ್ರದರ್ಶಿಸುತ್ತಿದೆ.
ವಿಶ್ವವಿದ್ಯಾಲಯದ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್ (TBI), ಉದ್ಯಮಶೀಲತಾ ಘಟಕ (E-Cell) ಮತ್ತು ಸಾಂಸ್ಥಿಕ ನಾವೀನ್ಯತಾ ಉಪಕ್ರಮಗಳ ಬೆಂಬಲದೊಂದಿಗೆ ಈ ಸ್ಟಾರ್ಟ್ಅಪ್ಗಳು ಉದ್ಯಮ ವಲಯದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹಾಗೂ ಹೂಡಿಕೆದಾರರು, ತಂತ್ರಜ್ಞಾನ ತಜ್ಞರು ಮತ್ತು ಸಂಭಾವ್ಯ ಸಹಯೋಗಿಗಳೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ಅವಕಾಶವನ್ನು ಪಡೆದುಕೊಳ್ಳುತ್ತಿವೆ.
ನಾವೀನ್ಯತೆ ಮತ್ತು ಉದ್ಯಮ ಸಹಯೋಗಕ್ಕೆ ಮತ್ತಷ್ಟು ಬಲ
ಬೆಂಗಳೂರು ಟೆಕ್ ಸಮಿಟ್ 2026ರಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಭಾಗವಹಿಸುವಿಕೆಯು ಶೈಕ್ಷಣಿಕ ಸಂಶೋಧನೆ ಮತ್ತು ಉದ್ಯಮಶೀಲತಾ ಆಲೋಚನೆಗಳನ್ನು ಪ್ರಾಯೋಗಿಕ ಹಾಗೂ ಸಮಾಜಮುಖಿ ಪರಿಹಾರಗಳಾಗಿ ಪರಿವರ್ತಿಸುವ ವಿಶ್ವವಿದ್ಯಾಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳು, ಬೋಧಕ ವರ್ಗ, ಸಂಶೋಧಕರು ಮತ್ತು ಉದ್ಯಮ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ನಾವೀನ್ಯತೆ, ಬಹುಶಿಸ್ತೀಯ ಸಹಯೋಗ ಮತ್ತು ನೈಜ ಜಗತ್ತಿನ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸುವ ನಿಟ್ಟಿನಲ್ಲಿ ಅಲಯನ್ಸ್ ವಿಶ್ವವಿದ್ಯಾಲಯ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.





















