Home ಜಿಲ್ಲೆ ಬೆಂಗಳೂರು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಶಿಶ್ ಚಲನಚಿತ್ರೋತ್ಸವ

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಶಿಶ್ ಚಲನಚಿತ್ರೋತ್ಸವ

ಬೆಂಗಳೂರು, ನ.೧೮- ದಕ್ಷಿಣ ಏಷ್ಯಾದ ಅತಿದೊಡ್ಡ LGBTQ+ ಚಲನಚಿತ್ರೋತ್ಸವವಾದ ಕಾಶಿಶ್ ಪ್ರೈಡ್ ಫಿಲ್ಮ್ ಫೆಸ್ಟಿವಲ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಯಾಗುತ್ತಿದೆ. ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ (NGMA) ಸಹಯೋಗದಲ್ಲಿ ನವೆಂಬರ್ ೨೦ರಿಂದ ೨೨ರವರೆಗೆ ನಡೆಯಲಿರುವ ಕಾಶಿಶ್ x ಬೆಂಗಳೂರು ೨೦೨೬ ಚಿತ್ರೋತ್ಸವದಲ್ಲಿ ೧೫ ದೇಶಗಳ ೪೪ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಚಿತ್ರೋತ್ಸವದ ಅಂಗವಾಗಿ ನವೆಂಬರ್ ೧೭ರಂದು ಬೆಂಗಳೂರಿನ ಮ್ಯೂಸಿಯಂ ಆಫ್ ಆರ್ಟ್ ಆ?ಯಂಡ್ ಫೋಟೋಗ್ರಫಿ (MAP)ನಲ್ಲಿ ಮಧ್ಯಾಹ್ನ ೩ರಿಂದ ಸಂಜೆ ೫ರವರೆಗೆ ಪೂರ್ವಭಾವಿ ಕರ್ಟನ್ ರೈಸರ್ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರ ನಿರ್ದೇಶಕರು, ಕಲಾವಿದರು, ಸಾಂಸ್ಕೃತಿಕ ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.