
ಕಲಬುರಗಿ:ಕಲಬುರಗಿ ನಗರ ನೂತನ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ ಆರ್ ಜೈನ್‌ರನ್ನು ಸರ್ಕಾರ ನೇಮಿಸಿ ಇಂದು ಆದೇಶ ಹೊರಡಿಸಿದೆ.
ಈ ಹಿಂದೆ ಡಾ.ಶರಣಪ್ಪ ಎಸ್. ಡಿ. ಅವರು ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿದ್ದರು. ಡಾ.ಶರಣಪ್ಪರನ್ನು ಕಲಬುರಗಿಯಿಂದ ರೈಲ್ವೆ ವಿಭಾಗದ ಡಿಐಜಿಯಾಗಿ ವರ್ಗಾಯಿಸಲಾಗಿದೆ.
ಕುಲದೀಪ್ ಕುಮಾರ್ ಆರ್. ಜೈನ್ ಅವರು ಕಲಬುರಗಿ ನಗರದ ಡಿಐಜಿ ಮತ್ತು ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಜೈನ್ ಅವರು ಬೆಂಗಳೂರ ಜಂಟಿ ಆಯುಕ್ತರು (ಆಡಳಿತ) ಹುದ್ದೆಯಲ್ಲಿದ್ದರು.೨೦೧೧ ರ ಬ್ಯಾಚ್ ನ ಅಧಿಕಾರಿಯಾಗಿರುವ ಜೈನ್ ಅವರು ಕಲಬುರಗಿ ನಗರದ ಪೊಲೀಸ ಆಯುಕ್ತರಾಗಿ ನೇಮಕವಾಗಿದ್ದಾರೆ.



















