Home ಜಿಲ್ಲೆ ತುಮಕೂರು ವೈಸಿರಿ: ಎಐ ಸಿರಿ ಮೂಲಕ ಡಿಜಿಟಲ್ ಜ್ಞಾನಕ್ಕೆ ಹೊಸ ಹೆಜ್ಜೆ

ವೈಸಿರಿ: ಎಐ ಸಿರಿ ಮೂಲಕ ಡಿಜಿಟಲ್ ಜ್ಞಾನಕ್ಕೆ ಹೊಸ ಹೆಜ್ಜೆ

ತುಮಕೂರು, ಅ. ೧೭- ವೈಸಿರಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಟೆಕ್ನಾಲಜಿ ವತಿಯಿಂದ “AI Siri ? Smart Ideas for a Better, Inclusive World’’ ಎಂಬ ವಿನೂತನ ಡಿಜಿಟಲ್ ಉಪಕ್ರಮದ ಗ್ರ್ಯಾಂಡ್ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ೧೦೦ಕ್ಕೂ ಅಧಿಕ ಆಂಡ್ರಾಯ್ಡ್ ಆಪ್‌ಗಳು ಹಾಗೂ ೭೫ಕ್ಕೂ ಅಧಿಕ ಜ್ಞಾನ ಮತ್ತು ಜಾಗೃತಿ ಪೋಸ್ಟರ್‌ಗಳನ್ನು ಪರಿಚಯಿಸಲಾಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಎನ್. ಬಿ. ಪ್ರದೀಪ್ ಕುಮಾರ್,ಇಂದಿನ ತಂತ್ರಜ್ಞಾನವು ಕೇವಲ ಮನರಂಜನೆಗೆ ಸೀಮಿತವಾಗದೆ ಜ್ಞಾನ, ಶಿಕ್ಷಣ, ಉದ್ಯೋಗ, ವ್ಯವಹಾರ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪರಿಣಾಮಕಾರಿ ಸಾಧನವಾಗಬೇಕು ಎಂದರು.


AI, Siri, Chatgpt, Claude, Git hub,Flutter,Anti-gravity Tools ಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉದ್ಯೋಗಸ್ಥರು, ಮಹಿಳೆಯರು, ಹಿರಿಯ ನಾಗರಿಕರು, ಚಾಲಕರು, ವಿಶೇಷ ಅಗತ್ಯವುಳ್ಳ ವ್ಯಕ್ತಿಗಳು ಹಾಗೂ ಸಣ್ಣ ಉದ್ಯಮಿಗಳಿಗೆ ಸಹಾಯಕವಾಗುವಂತಹ ಡಿಜಿಟಲ್ ಆಪ್‌ಗಳನ್ನು ರೂಪಿಸಲಾಗಿದೆ. ಇದರ ಜತೆಗೆ ಕೃತಕ ಬುದ್ಧಿಮತ್ತೆ, ಡಿಜಿಟಲ್ ಮಾರ್ಕೆಟಿಂಗ್, ಹಣಕಾಸು ಸಾಕ್ಷರತೆ, ಆರೋಗ್ಯ ಮತ್ತು ಕ್ಷೇಮ, ಉದ್ಯಮಶೀಲತೆ, ವ್ಯವಹಾರ ಅಭಿವೃದ್ಧಿ, ವೃತ್ತಿ ಅಭಿವೃದ್ಧಿ ಹಾಗೂ ಸಾಮಾಜಿಕ ಜಾಗೃತಿ ಮುಂತಾದ ವಿಷಯಗಳ ಕುರಿತು ಜ್ಞಾನಪೂರ್ಣ ತಂತ್ರಜ್ಞಾನವು ಪ್ರತಿಯೊಬ್ಬರಿಗೂ ತಲುಪಬೇಕು, ವಿದ್ಯಾರ್ಥಿಗಳು ಮತ್ತು ಯುವಜನರು ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಸಣ್ಣ ಆಪ್‌ಗಳು ದೊಡ್ಡ ಬದಲಾವಣೆಗಳನ್ನು ತರಬಲ್ಲವು ಎಂದು ಅವರು ಅಭಿಪ್ರಾಯಪಟ್ಟರು.


ಜ್ಞಾನಕ್ಕಾಗಿ ತಂತ್ರಜ್ಞಾನ, ಪ್ರಗತಿಗಾಗಿ ನವೀನತೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಎಲ್ಲರನ್ನೂ ಒಳಗೊಂಡ ಡಿಜಿಟಲ್ ವ್ಯವಸ್ಥೆ” ನಿರ್ಮಿಸುವುದು ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಬೇಕು ಎಂದು ತಿಳಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.


ಇದೇ ಸಂದರ್ಭದಲ್ಲಿ ತಂತ್ರಜ್ಞಾನ ಪ್ರದರ್ಶನ, ಆಪ್‌ಗಳ ಪರಿಚಯ, ಜ್ಞಾನಪೂರ್ಣ ಪೋಸ್ಟರ್‌ಗಳ ಅನಾವರಣ, ತಜ್ಞರ ಮಾತುಕತೆ ಹಾಗೂ ನವೀನ ಆಲೋಚನೆಗಳ ಹಂಚಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು.


ಕಾರ್ಯಕ್ರಮದಲ್ಲಿ ವೈಸಿರಿ ಕಾಲೇಜಿನ ಪ್ರಾಂಶುಪಾಲರಾದ ಹುಮೇರ ಪರ್ವೀನ್, ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.