Home ಜಿಲ್ಲೆ ಕಲಬುರಗಿ ಮಹಿಳೆಯರ ಬಿಡುಗಡೆ ಶಿಕ್ಷಣದಿಂದ ಮಾತ್ರ ಸಾಧ್ಯ : ಡಾ.ಮೀನಾಕ್ಷಿ ಬಾಳಿ

ಮಹಿಳೆಯರ ಬಿಡುಗಡೆ ಶಿಕ್ಷಣದಿಂದ ಮಾತ್ರ ಸಾಧ್ಯ : ಡಾ.ಮೀನಾಕ್ಷಿ ಬಾಳಿ

ಜೇವರ್ಗಿ,ಅ.18-ವಿದ್ಯಾರ್ಥಿಗಳು ಅಂಕಗಳ ಗಳಿಕೆಯ ಜೊತೆಗೆ ಜೀವನ ಮೌಲ್ಯಹಾಗೂ ಜ್ಞಾನ ಗಳಿಕೆಗೆ ಹೆಚ್ಚಿನ ಒತ್ತು ಕೊಡಬೇಕು. ದೇವರು ಕೈ ಬಿಟ್ಟರೂ ಜ್ಞಾನವೆಂದೂ ಕೈ ಬಿಡುವುದಿಲ್ಲ. ಮಹಿಳೆಯರ ಬಿಡುಗಡೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026- 27 ನೇ ಶೈಕ್ಷಣಿಕ ಸಾಲಿನ ಕಾಲೇಜಿನ ವಿವಿಧ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಇನ್ನೋರ್ವ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ನರಸಪ್ಪ ಟಿ ರಂಗೋಲಿ ಮಾತನಾಡಿ, ಬಡತನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಂದೂ ಅಡ್ಡಿಯಾಗಬಾರದು. ದೈಹಿಕ ಅಂಗವಿಕಲತೆ ಇದ್ದರೆ ಪರವಾಗಿಲ್ಲ, ಆದರೆ ಮಾನಸಿಕ ಅಂಗವಿಕಲತೆ ಇರಬಾರದು ಎಂದು ಮಾರ್ಮಿಕವಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರಾದ ಪೆÇ್ರ. ಶಾಂತಾ ಅಸ್ಟಿಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪದವಿ ಮುಖ್ಯವಲ್ಲ. ಬದುಕಿನಲ್ಲಿ ಮೌಲ್ಯಗಳು ಮುಖ್ಯ. ಕಾಟಾಚಾರಕ್ಕೆ ಓದದೇ, ಭವಿಷ್ಯದ ಜೀವನ ರೂಪಿಸಿಕೊಳ್ಳಲು ನಿಷ್ಠೆಯಿಂದ ಅಧ್ಯಯನ ಮಾಡಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಖಾಜಾವಲಿ ಈಚನಾಳ ಅವರ ಸಂಪಾದಕತ್ವದ ವಾರ್ಷಿಕ ಸ್ಮರಣ ಸಂಚಿಕೆ ‘ಭೀಮೆಯ ಸಿರಿ’ಯನ್ನು ಬಿಡುಗಡೆ. ಮಾಡಲಾಯಿತು.
ಕಾರ್ಯಕ್ರಮ ದಲ್ಲಿ ವೇದಿಕೆಯ ಮೇಲೆ ಐಕ್ಯೂಏಸಿ ಸಂಯೋಜಕ ಡಾ.ಸಂದೀಪ ತಿವಾರಿ, ಸಿಬ್ಬಂದಿ ಕಾರ್ಯದರ್ಶಿ ಡಾ.ಸಂತೋಷಕುಮಾರ, ಹಿರಿಯ ಪ್ರಾಧ್ಯಾಪಕರಾದ ಪೆÇ್ರ. ರಾಬಿಯಾ ಬೇಗಂ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗಣ್ಣ ಕಿಲಾರಿ, ಡಾ. ಬಿ ಆರ್ ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾ ಕೂಟದ ಸಂಚಾಲಕ ಡಾ. ಅಶೋಕ ಹೋಳ್ಕರ್, ರೆಡ್ಕ್ರಾಸ್ ಸಂಚಾಲಕ ರಾದ ಡಾ. ಖುತೇಜಾ ನಸ್ರಿನ್, ಉದ್ಯೋಗ ಕೋಶದ ಸಂಚಾಲಕ ರಾದ ಡಾ. ಶಿಲ್ಪಾ, ಎನ್ನೆಸ್ಸೆಸ್ ಘಟಕಗಳ ಅಧಿಕಾರಿಗಳಾದ ಡಾ. ಎನ್. ಜಿ. ಶ್ರೀಧರ್, ಅಪರ್ಣಾ ಕಡಬಗಾಂವ್, ಐಕ್ಯೂಏಸಿ ಸಹ ಸಂಯೋಜಕರಾದ ಡಾ. ರವೀಂದ್ರ, ಗ್ರಂಥಪಾಲಕ ತಿಪ್ಪಣ್ಣ ವಗ್ದಾಳ, ಡಾ. ಖಾಜಾವಲಿ ಈಚನಾಳ, ಭೀಮಣ್ಣ ಬೆಡ್ಕಪಳ್ಳಿ, ಡಾ. ಶಿವಕುಮಾರ್ ಭರಣಿ, ಡಾ ಉತ್ತಮ ಬಾಳು ವಾಲೆ, ಮೋಹನ್ ಬೆ?ಲಪತ್ತಾರ್, ಡಾ. ಹೊನ್ನೂರಸ್ವಾಮಿ, ವಿಕಾಸ್ ರಾಠೋಡ್, ರೂಪಾ ಕುಲಕರ್ಣಿ, ಡಾ. ವಿಟಿ ಮಂಜುಳಾ, ಡಾ ನಾಗನಗೌಡ ಪಾಟೀಲ್ ಪತ್ರಾಂಕಿತ ಅಧಿಕಾರಿ ಫುಲಾಬಾಯಿ ಜಲ್ದೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕುಮಾರಿ ತೇಜಶ್ವಿನಿ ಪ್ರಾರ್ಥಿಸಿದರು.
ಸಾಂಸ್ಕøತಿಕ ಸಮಿತಿ ಸಂಚಾಲಕ ಡಾ. ಶರಣಪ್ಪ ಗುಂಡಗುರ್ತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ದರು. ಡಾ. ರವೀಂದ್ರ ಬಿರಾದಾರ ನಿರೂಪಿಸಿ ದರು. ರಾಸೇಯೋ ಅಧಿಕಾರಿ ಕುಪೇಂದ್ರ ರಾಠೋಡ ವಂದಿಸಿದರು.
………….
ವಿಶೇಷ ಸತ್ಕಾರ
ಗುಲಬರ್ಗಾ ವಿವಿಯಿಂದ ಪಿಎಚ್. ಡಿ ಪಡೆದ ಡಾ. ರೂಪಾ ಕುಲಕರ್ಣಿ ಮತ್ತು ವಿಜಯನಗರದ ಶ್ರೀಕೃಷ್ಣದೇವರಾಯ ವಿವಿಯಿಂದ ಪಿಎಚ್.ಡಿ ಡಾ. ಹೊನ್ನೂರಸ್ವಾಮಿ ಅವರಿಗೆ, ಕಲಬುರಗಿ ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ. ಶರಣಪ್ಪ ಗುಂಡಗುರ್ತಿ ಅವರಿಗೆ ಮತ್ತು ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆಯ ಸಂಪಾದಕರಾದ ಡಾ. ಖಾಜಾವಲಿ ಈಚನಾಳ ಅವರಿಗೆ ಕಾಲೇಜಿನ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.