Home ಜಿಲ್ಲೆ ಕಲಬುರಗಿ ಯಶಸ್ವಿಯಾಗಿ ಜರುಗಿದ ಧಮ್ಮಚಕ್ರ ಪ್ರವರ್ತನ ಕಾರ್ಯಕ್ರಮ

ಯಶಸ್ವಿಯಾಗಿ ಜರುಗಿದ ಧಮ್ಮಚಕ್ರ ಪ್ರವರ್ತನ ಕಾರ್ಯಕ್ರಮ

ಕಲಬುರಗಿ,ಅ.18-ಕರ್ನಾಟಕ ಸಮತಾ ಸೈನಿಕದಳದ ವಿಭಾಗೀಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಂಯುತ ಆಶ್ರಯದಲ್ಲಿ ಈಚೆಗೆ ನಗರದ ಕನ್ನಡ ಭವನದಲ್ಲಿ 70ನೆಯ ಧಮ್ಮ ಪ್ರವರ್ತನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನ್ಯಾಯವಾದಿ ಸಂಘದ ಅಧ್ಯಕ್ಷ ವಿನೋದ್ ಕಾಂಬ್ಳೆ ಉದ್ಘಾಟಿಸಿ, ಧಮ್ಮ ಚಕ್ರದ ಕಾರ್ಯಕ್ರಮದ ಬಗ್ಗೆ ಮಾತಾಡಿದರು. ಮುಖ್ಯ ಭಾಷಣಕಾರರಾಗಿ ಹಿರಿಯ ಸಾಹಿತಿ ಧರ್ಮಣ್ಣ ಧನಿವರು ಡಾ. ಬಾಬಾ ಸಾಬ್ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯೆಜಿಸಿ ಸಮಾನತೆ ಇರುವ ಎಲ್ಲರಿಗೆ ಏಕತೆಯಾಗಿರುವ ಬೌದ್ಧ ಧರ್ಮ ಸ್ವೀಕರಿಸಿದ ಪವಿತ್ರ ದಿನವಾದ ಇಂದು ನಾವೆಲ್ಲರೂ ಅವರ ಮಾರ್ಗದಲ್ಲಿ ನಡೆಯೋಣ ಅನುಕರಣೆಯಿಂದ ನಾವೆಲ್ಲರೂ ಕಂಕಣ ಬದ್ಧವಾಗಿ ಇರಬೇಕೆಂದು ಅವರು ಭಾಷಣದಲ್ಲಿ ವಿವರಿಸಿದ್ದರು. ಮುಖ್ಯ ಅತಿಥಿಗಳಾಗಿ ಅನಿಲ್ ಕುಮಾರ್ ಕಾಂಬಳೆ, ಶ್ರೀನಿವಾಸ್ ನಾಯಕ್, ಶಾಂತವೀರ್ ಶಾಪುರ್ ಧಮ್ಮಚಕ್ರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಸಮತಾ ಪ್ರಶಸ್ತಿಗೆ ಆಯ್ಕೆಯಾದ ಸುನಿಲ್ ಪ್ರತಾಪೂರ, ಸುಭಾಷ್ ಬನಪಟ್ಟಿ, ಐಶ್ವರ್ಯ, ಛಾಯಾಗ್ರಹಕ ಶಿವಶರಣ ಬೆನ್ನೂರ್ ಹಾಗೂ ಧಮ್ಮ ಕೀರ್ತಿ ಇವರಿಗೆ ಸಮತಾ ಪ್ರಶಸ್ತಿ ನೀಡಲಾಯಿತು . ವಿವಿಧ ಕ್ಷೇತ್ರಗಳಲ್ಲಿ ಗಣನೆಯ ಸೇವೆ ಸಲ್ಲಿಸಿದ 25 ಸಾಧಕರಿಗೆ ಸಮತಾ ಪ್ರಶಸ್ತಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಬೆಳಗಾವಿಯ ವಿಭಾಗಿ ಅಧ್ಯಕ್ಷರಾದ ಗಣೇಶ್ ಸಿಂಗಾನವರ, ಬಸವರಾಜ ತಳವಾರ್ ಹಾಗೂ ಬೀದರಿನ ಶಂಕರ್ ಶಿರಂಗೆ, ಕೊಪ್ಪಳಿನ ಅಧ್ಯಕ್ಷರಾದ ಜೈ ಶಂಕರ್, ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ಉದ್ದಾ, ಪತ್ರಕರ್ತ ಅವಿನಾಶ್ ದೊಡ್ಡಮನಿ, ಆರ್‍ಪಿ ಐ ರಾಜ್ಯ ಮುಖಂಡ ದತ್ತಾತ್ರೇ ಸೂರ್ಯವಂಶಿ, ಮಹಿಳಾ ಘಟಕದ ಮುಖಂಡರಾದ ಕಾವೇರಿ ಗೋರಂಪಳ್ಳಿ, ಲಲಿತಾ ಬಿಲ್ಕಲ್, ಇಂದುಮತಿ ಭರತ್ ನೂರ, ಮಲ್ಲಮ್ಮ ಜಗತಿ, ಪದ್ಮಾ ಅಟ್ಟೂರ, ಕತಾಲಪ್ಪ ಕಟ್ಟಿಮನಿ, ಶರಣು ಮುದ್ನಾಳ್, ಶರಣು ಕಡಗಂಚಿ, ಅಮೃತ ರಾವ್ ನಾಯ್ಕೋಡಿ, ಸಿದ್ದಾರ್ಥ ಕಣ್ಮುಸ, ಮಲ್ಲು ನಂದೂರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಾಗತವನ್ನು ಅಪ್ಪಾರಾವವ ಬಾವಿಮನಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಿಲಿಂದ ಕಣ್ಮುಶ್ ನಿರೂಪಣೆಯನ್ನು ಮಾಡಿದರು. ವiಹಾದೇವ ನಾಟಿಕರ ವಂದಿಸಿದರು.