
ಕಲಬುರಗಿ,ಅ.18-ಮಲೇಷ್ಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಶಹಾಬಾದ್ನ ಮೂವರು ಭಾರತೀಯರು ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ ಎಂದು ಸಮಾಜ ಸೇವಕ ಡಾ.ಫಾರುಕ್ ಮಣ್ಣೂರ ತಿಳಿಸಿದಾರೆ.
ಕಲಬುರಗಿ ನಗರದ ಡಾ.ಫಾರುಕ್ ಮಣ್ಣೂರ ಅವರ ಗೃಹ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಹಾಬಾದ್ನ ಮೊಹಮ್ಮದ್ ನೂರುದ್ದೀನ್, ಮೊಹಮ್ಮದ್ ಸಿರಾಜುದ್ದೀನ್ ಹಾಗೂ ಯೂಸುಫ್ ಖಾನ್ ಅವರನ್ನು ಒಬ್ಬ ದಲ್ಲಾಳಿ ಮಲೇಷ್ಯಾದಲ್ಲಿ ಕಾನೂನಿನ ಪ್ರಕಾರ ದಾಖಲೆ ಸಿದ್ದಪಡಿಸಿ ಒಳ್ಳೆಯ ಸಂಬಳ ಇರುವ ಉದ್ಯೋಗ ಕೋಡಿಸಿವುದಾಗಿ ನಂಬಿಸಿ ಅವರಿಗೆ ಅನಾಧಿಕೃತವಾಗಿ ರಾತ್ರಿವೇಳೆ ಥೈಲ್ಯಾಂಡ ನಿಂದ ಮಲೇಷ್ಯಾಕ್ಕೆ ಹಡಗಿನ ಲೇಗೆಜ್ ಬಾಕ್ಸನಲ್ಲಿ ಮಲಗಿಸಿ ಮಲೆಷ್ಯಾಗೆ ಕರೆದೋಯಿದೀದ್ದಾರೆ.ನಂತರ ಅಲ್ಲೇಗೆ ಹೊಂದ ನಂತರ ಮೂರು ಜನರೀಗೆ ಮಲೆಷ್ಯಾದಲ್ಲಿ ಅನಾಧಿಕೃತ ಪ್ರವೇಶ ಪಡೆದಿರುವ ಬಗ್ಗೆ ಅಧಿಕೃತವಾದ ನಂತರ ಆ ವ್ಯಕ್ತಿಗಳು ಅವರ ಕುಂಟುಂಬಸ್ಥರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು ಜೋತೆಗೆ ಅಲ್ಲಿನ ಅಧಿಕಾರೀಗಳು ಕೂಡ ಕೇಲವೆ ದಿನಗಳಲ್ಲಿ ಬಂಧಿಸು ವಶಕ್ಕೆ ಪದೆದರು ನಂತರ ಅದು ಕೂಡ ಕುಟುಂಬಸ್ಥರಿಗೆ ಮಾಹಿತಿ ನೀಡಿದರು. ನಂತರ ಶಹಬಾದನ ಅವರ ಕುಂಟುಂಬಸ್ಥರು ನನಗೇ ಬಂದು ಭೇಟಿಯಾದ ನಂತರ ಸಂಕಷ್ಟಕ್ಕೆ ಸಿಲುಕಿರುವ ವಿಷಯ ತಿಳಿದ ಡಾ. ಫಾರೂಕ್ ಮಣೂರ ಅವರು, ಮೂವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಲಬುರಗಿ ಜಿಲ್ಲಾ ಪೆÇಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದರು.
ಇದರೊಂದಿಗೆ ಮಲೇಷ್ಯಾದ ಭಾರತೀಯ ರಾಯಭಾರ ಕಚೇರಿ, ಕರ್ನಾಟಕ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜ್ಯದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಸಲ್ಲಿಸಿ ನೆರವು ಕೋರಲಾಗಿತ್ತು. ಅಲ್ಲದೆ, ದುಬೈ, ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಸಂಪರ್ಕಗಳ ಮೂಲಕವೂ ಮೂವರನ್ನು ತವರಿಗೆ ಕರೆತರಲು ಪ್ರಯತ್ನ ನಡೆಸಲಾಗಿತ್ತು. ಮಲೇಷ್ಯಾದಲ್ಲಿದ್ದ ಪರಿಚಯಸ್ಥರು ಕೂಡ ಈ ಸಂದರ್ಭದಲ್ಲಿ ಸಹಕಾರ ನೀಡಿದ್ದು, ಮೂವರು ಭಾರತೀಯರು ಸುರಕ್ಷಿತವಾಗಿ ತವರಿಗೆ ಮರಳುವ ಪ್ರಕ್ರಿಯೆಯಲ್ಲಿ ನೆರವಾಗಿದ್ದಾರೆ ಎಂದು ತಿಳಿಸಿದರು.
ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ತಮ್ಮವರ ಸುರಕ್ಷಿತ ವಾಪಸಾತಿಗಾಗಿ ಕಾಯುತ್ತಿದ್ದ ಕುಟುಂಬಸ್ಥರಿಗೆ ಈ ಬೆಳವಣಿಗೆ ಸಂತಸ ತಂದಿದೆ. ಮೂವರು ಸುರಕ್ಷಿತವಾಗಿ ಮರಳಿರುವುದರಿಂದ ಕುಟುಂಬಗಳಲ್ಲಿ ನೆಮ್ಮದಿ ಮೂಡಿದೆ.
ಸುದ್ದಿಗೋಷ್ಠಿಯಲ್ಲಿ ಅನ್ವರ ಶಕೀಲ್. ಜಹೀರ. ಅಲಿಂ ಇನಾಮದಾರ.ನಿಜಾಂ .ನಿಸಾರ.ಹಭೀಬ.ಜಹೀರ ಪಟೆಗಾಂವ.ಸಾಖಿಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
……………
ಮಲ್ಲೇಶಿಯಾದಲ್ಲಿ ಭಾರತೀಯರನ್ನು ಮೋಸದಿಂದ ಅಲ್ಲಿಗೆ ಕರೆದುಕೊಂಡು ಹೋಗಿ ಅನೇಕ ಭಾರತೀಯರು ಇನ್ನು ಸಿಲುಕಿದಾರೆ ಅವರ ನೇರವಿಗೆ ಹೋಗಬೇಕು ಜತೆಗೆ ಈ ಕಾರ್ಯಕ್ಕೆ ಸಹಕರಿಸಿದ ಪೆÇಲೀಸ್ ಅಧಿಕಾರಿಗಳು, ಭಾರತೀಯ ರಾಯಭಾರ ಕಚೇರಿ, ಕರ್ನಾಟಕ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು, ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಮಲೇಷ್ಯಾದಲ್ಲಿ ನೆರವಾದ ಎಲ್ಲ ಪರಿಚಯಸ್ಥರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ಡಾ.ಫಾರೂಕ್ ಮಣೂರ























