
ಬಸವಕಲ್ಯಾಣ,ಅ.18-ತಾಯಿ ಕೆಲವೇ ಜನರಿಗೆ ಸೀಮಿತರಾಗಿಲ್ಲ ಯಾರು ತನ್ನವರತ್ತ, ಮಠಕ್ಕೆ ಬರುತ್ತಾರೆ, ದರ್ಶನ ಪಡೆಯುತ್ತಾರೆ ಎಲ್ಲರೊಂದಿಗೆ ಬೆರೆತು ತನ್ನ ಮಕ್ಕಳಂತೆ ಕಂಡವರು ಮಹಾದೇವಿ ತಾಯಿಯವರು. ಇವತ್ತಿನ ದಿನ ಮಾನಗಳಲ್ಲಿ ಶರಣೆ ಸ್ವಾಮಿ ಗಳಾಗಿ ಜೀವನ ಸಾಗಿಸುವುದು ಕಷ್ಟದ ನಡುವೆಯೂ ಅನುಷ್ಠಾನದ ಮೂಲಕ ಆತ್ಮಶಕ್ತಿ ವೃದ್ಧಿಸಿ,ಗುರುವಿನ ಒಲುಮೆಗೆ ಪಾತ್ರರಾಗಿ ಭಕ್ತರಿಗೆ ಆಶೀರ್ವಾದ ಮಾಡಿದ ತಾಯಿ ಎಂದು ಬಂಥನಾಳದ ವೃಷಭಲಿಂಗ ಶಿವಯೋಗಿಗಳು ನುಡಿದರು.
ಯಲ್ಲಾಲಿಂಗೇಶ್ವರ ಆನಂದಾಶ್ರಮದಲ್ಲಿ ನಡೆದ ಪೂಜ್ಯ ಮಾತೋಶ್ರೀ ಮಹಾದೇವಿ ತಾಯಿ ಶರಣೆಯವರ ಶಿವಗಣಾರಾಧನೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಬಂಥನಾಳ ಮಠದ ಪರಂಪರೆಯ ಲಚ್ಚ್ಯಾಣ,ಕೃಷ್ಣ, ಮೊದಲಾದ ಕ್ಷೇತ್ರ ಗಳು ರಂಬೆಕೊಂಬೆಗಳು.ತಾಯಿ ಪಂಚಾಮೃತದಲ್ಲಿ ಲೀನರಾಗಿದ್ದಾರೆ.ಅವರ ಶಕ್ತಿ ಭಕ್ತರ ಹೃದಯದಲ್ಲಿ ಸಂಚರಿಸುತ್ತಾರೆ.ತಾಯಿ ಇಲ್ಲವೆಂದು ಮಠಕ್ಕೆ ಬರುವುದು ಬಿಡಬೇಡಿ ಎಲ್ಲರೂ ಸೇರಿ ಮುನ್ನಡೆಸಿಕೊಂಡು ಹೋಗೊಣವೆಂದು ಶುಭ ನುಡಿದರು.
ಪೂಜ್ಯ ಸದಾನಂದ ಅಪ್ಪಗಳು ದೇಹ ಮರೆಯಾಗಬಹುದು ಆತ್ಮ ಬೆಳಗುತ್ತಲೆ ಇರುತ್ತದೆ. ಯಲ್ಲಾಲಿಂಗೇಶ್ವರ ಶಕ್ತಿ ತಾಯಿಯಬರೊಂದಿಗೆ ಬೆಳಗುತ್ತದೆಂದರು.
ರಾಜೇಶ್ವರದ ಪೂಜ್ಯಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು ಈ ಲೋಕದಲ್ಲಿ ಸಂತರ ಶಣರ ಮರಣ ಮಹಾನಮಿ ಆಗಲು ಅವರ ಜಪ,ತಪ,ನಿಷ್ಠೆ ಅವನ್ನು ತಾಯಿಯವರಲ್ಲಿ ಕಂಡಿದ್ದೇವೆಂದರು.
ಭಕ್ತರಿಗೆ ಆಶ್ರಯ, ಶಾಂತಿ,ದಾಸೋಹ, ಶಿಕ್ಷಣ ನೀಡುವ ಮೂಲಕ ಆಗಿನ ಕಾಲದಲ್ಲಿ ಶರಣೆಯಾಗಿ ಮಾಡಿದ ಕೆಲಸ ತಾಯಿಯವರದ್ದು ಪವಾಡ ಎಂದು ಪೂಜ್ಯ ಶ್ರೀ ಅಭಿನವ ಘನಲಿಂಹ ರುದ್ರಮುನಿ ಶಿವಾಚಾರ್ಯರು ಬಣ್ಣಿಸಿದರು.
ಹಿರನಾಗಾಂವದ ಪೂಜ್ಯ ಶ್ರೀ ಜಡೆಯ ಜಯಶಾಂತಲಿಂಗ ಮಹಾಸ್ವಾಮಿಗಳು, ಅಂಬಿಗರ ಚೌಡಯ್ಯ ಗವಿಯ ಪೂಜ್ಯಶ್ರೀ ರತ್ನಕಾಂತ ಶಿವಯೋಗಿಗಳು, ಮಾತೋಶ್ರೀ ಭಾಗ್ಯವಂತಿ ಕೌಡ್ಯಾಳ,ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ,,ನಿವೃತ್ತ ರೆಡ್ಡಿ, ಚಂದ್ರಕಾಂತ ಪಾಟೀಲ, ಪೆÇ್ರ.ಎನ್.ವಿ.ಢೋಲೆ,ಆಕಾಶ ತೆಗನೂರು, ಸಿದ್ದು ಖೂನಿ, ಇತರರಿದ್ದರು.ಮಾಜಿ ವಿಧಾನ ಪರಿಷತ್ ಸದಸ್ಯರಾದ ವೇಳೆ ಜಯಸಿಂಗ್ ಮಾತನಾಡಿ ತಾಯಿಯವರ ಅಗಲಿಕೆ ನಮಗೆ ನೋವು ತಂದಿದೆ.ನನ್ನ ಜೀವನ ಇರುವವರೆಗೂ ಮರೆಯಲಾರೆ ಎಂದರು.ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಗುಂಡುರೆಡ್ಡಿ ಮಾತನಾಡಿ ತಾಯಿ ಅವರ ಕರುಣೆ ನಮಗೆ ಸ್ಫೂರ್ತಿ ಎಂದರು.ಮುಚಳಂಬ ನಿವೃತ್ತ ಶಿಕ್ಷಕ ಕಾಶಪ್ಪ ಹೊಳಕುಂದೆ ಮಾತನಾಡಿ ಅವ್ವನರ ತ್ಯಾಗ,ಅವರ ಅನುಷ್ಠಾನ ಕುರಿತು ಮಾತನಾಡಿದರು.ನಿಯೋಜಿತ ಉತ್ತರಾಧಿಕಾರಿ ಶ್ರೀ ಅಭಿನವ ಯಲ್ಲಾಲಿಂಗೇಶ್ವರ ಪ್ರಭು ಇದ್ದರು.
ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಮಠ ಮತ್ತು ತಾಯಿಯ ವರು ನಡೆದು ಬಂದ ದಾರಿ ವಿವರಿಸಿದರು.ಸಿದ್ರಾಮ ಜಮಾದಾರ ನಿರೂಪಿಸಿದರು, ಗೌಡಪ್ಪ ಪಾಟೀಲ ವಂದಿಸಿದರು.ಕಲ್ಯಾಣ ನಾಡು ಗ್ರಾಮೀಣ ಕಲಾವಿದರ ಸಂಘದಿಂದ ದಿಲೀಪ್ ದೇಸಾಯಿ,ರಾಜಪ್ಪ,ಬಸವರಾಜ ಶಾಸ್ತ್ರಿ, ಸೂರ್ಯಕಾಂತ, ಶರಣಪ್ಪ ಜಮಾದಾರ, ಬಸವರಾಜ ಬರೂಡೆ, ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.























