Home ಜಿಲ್ಲೆ ಕಲಬುರಗಿ ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಗೆ ಆಗ್ರಹ ಕನ್ನಡ ನಾಡು ರಕ್ಷಣಾ ಪಡೆ ಬೆಂಬಲ

ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಗೆ ಆಗ್ರಹ ಕನ್ನಡ ನಾಡು ರಕ್ಷಣಾ ಪಡೆ ಬೆಂಬಲ

ಕಲಬುರಗಿ: ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಹಾಗೂ ರೈತರ ಹಿತದೃಷ್ಟಿಯಿಂದ ವಿವಿಧ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ (ಎಂಎಸ್‍ಪಿ) ಘೋಷಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ಹೋರಾಟದಲ್ಲಿ ಕನ್ನಡ ನಾಡು ರಕ್ಷಣಾ ಪಡೆ ಜಿಲ್ಲಾಧ್ಯಕ್ಷ ವಿನೋದ್ ಪಾಟೀಲ್ ನೇತೃತ್ವದಲ್ಲಿ ನಗರದ ರಾಮಮಂದಿರ ವೃತ್ತದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ಕನ್ನಡ ನಾಡು ರಕ್ಷಣಾ ಪಡೆ ರಾಜ್ಯ ಉಪಾಧ್ಯಕ್ಷ ಗಜಾನಂದ ದೇಶಪಾಂಡೆ ಅವರು ಮಾತನಾಡಿ ಸಕ್ಕರೆ ಕೆ.ಜಿ.ಗೆ 60, ಒಂದು ಟನ್ ಕಬ್ಬಿಗೆ 5,500, ತೊಗರಿ ಕ್ವಿಂಟಲ್‍ಗೆ 15,000, ಭತ್ತದ ಕ್ವಿಂಟಲ್‍ಗೆ 5,000, ಹತ್ತಿ ಕ್ವಿಂಟಲ್‍ಗೆ 15,000 ಹಾಗೂ ಮೆಣಸಿನಕಾಯಿ ಕ್ವಿಂಟಲ್‍ಗೆ 30,000 ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇತರ ಕೃಷಿ ಉತ್ಪನ್ನಗಳಿಗೂ ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸುಗಳ ಪ್ರಕಾರ ಬೆಲೆ ನಿಗದಿಪಡಿಸಬೇಕು. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಲಬುರಗಿ ಜಿಲ್ಲೆಯಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರೈತರ ಹಿತ ಕಾಪಾಡಲು ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ದೇಶಪಾಂಡೆ ಅವರು ಹೇಳಿದರು.
ಈ ಪ್ರತಿಭಟನೆಯಲ್ಲಿ ಪವನ್ ಸಾವಲಗಿ, ಗುರು ಕೊರಳ್ಳಿ, ನೀಲಕಂಠ, ಮಲ್ಲಿಕಾರ್ಜುನ್, ಅವಂಟಿ, ಶರಣು ಉಪಸ್ಥಿತರಿದ್ದರು.