Home ಮುಖಪುಟ ಸುದ್ದಿ ಮೋದಿ, ಶಾ ರಿಂದ ಸರ್ವಾಧಿಕಾರಿ ಧೋರಣೆ

ಮೋದಿ, ಶಾ ರಿಂದ ಸರ್ವಾಧಿಕಾರಿ ಧೋರಣೆ

ಬೆಂಗಳೂರು, ಅ. ೧೨-“ಬಿಜೆಪಿ ಮತ್ತು ಅಮಿತ್ ಶಾ, ಪ್ರಧಾನಿ ಮೋದಿ ಅವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಚುನಾವಣಾ ಆಯೋಗ ಸಂಪೂರ್ಣ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದೆ. ಸುಪ್ರೀಂಕೋರ್ಟ್ ಕೂಡ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವ ವಿಚಾರದಲ್ಲಿ ತಟಸ್ಥವಾಗಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಆರೋಪಿಸಿದರು.


ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ,ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸಂಸ್ಥೆಗಳ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದರು
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಬಿಜೆಪಿಗೆ ಯಾವುದೇ ಕಾಳಜಿ ಇಲ್ಲ ಎಂದು ಅವರು ಹೇಳಿದರು. “ವೇಳಾಪಟ್ಟಿ ತಯಾರಿಸುವಾಗಲೇ ಎಲ್ಲವನ್ನೂ ಮುಂಚಿತವಾಗಿ ಯೋಚನೆ ಮಾಡಿರುತ್ತಾರೆ. ಆದರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ಮುಖ್ಯವಾಗಿದೆ” ಎಂದರು.

ಸುಪ್ರೀಂಕೋರ್ಟ್ ನಡೆಯ ವಿರುದ್ಧ ಕಾಂಗ್ರೆಸ್ ನಾಯಕರು ಒಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು. “ನಾವು ಸಿಜೆಐಗೆ ಮನವಿ ಸಲ್ಲಿಸಲು ಮುಂದಾಗಿದ್ದೇವೆ. ಕಾಂಗ್ರೆಸ್ ನಾಯಕರೆಲ್ಲರೂ ಒಟ್ಟಾಗಿ ಸುಪ್ರೀಂಕೋರ್ಟ್ಗೆ ಮೆರವಣಿಗೆ ಮಾಡುತ್ತಿದ್ದೇವೆ. ಸುಪ್ರೀಂಕೋರ್ಟ್ ಮುಚ್ಚಳಿಕೆ ಬರೆದುಕೊಟ್ಟು ಅದರ ವಿರುದ್ಧ ನಡೆದುಕೊಂಡಿದೆ” ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಹುಟ್ಟು ಅರಾಜಕತೆಯಿಂದ ಆಗಿದೆ ಎಂದು ಆರೋಪಿಸಿದ ಅವರು, “ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಬಿಜೆಪಿ ಇದೆಎಂದು ದೂರಿದರು