
ಬೀದರ, ಅ.11 : ಬೀದರಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಂದಿದ್ದ, ಪ್ರಕರಣದ ಸಾಕ್ಷಿದಾರರ ಸಾಕ್ಷ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ.ಕೋಮಲ ಅವರು ಆರೋಪಿತನಾದ ಮಹಾರಾಷ್ಟ್ರದ ಭಿಡ್ ಜಿಲ್ಲೆಯ ಟೋಕೆವಾಡಿ ಗ್ರಾಮದ ಮಾರುತಿ ಮದುಕಾರ ಡೊಂಗ್ರೆ ಎಂಬಾತನು ತಪ್ಪಿತಸ್ಥ ಎಂದು ತೀರ್ಪು ನೀಡಿ ಆರೋಪಿತನಿಗೆ ಕಲಂ.06 ಪೆÇೀಕ್ಸ್ ಕಾಯ್ದೆ ಅಡಿ. ಅಪರಾಧಕ್ಕೆ 20 ವರ್ಷಗಳ ಕಠಿಣಕಾರಾಗೃಹ ಶಿಕ್ಷೆ ಹಾಗೂ ರೂ 30 ಸಾವಿರ ರೂ
ದಂಡ, ದಂಡ ಕೊಡಲು ತಪ್ಪಿದ್ದಲ್ಲಿ 30 ದಿವಸಗಳ ಸಾದಾಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಬೀದರ ವಿಶೇಷ ಪೆÇೀಕ್ಸೊ ಸರ್ಕಾರಿ ಅಭಿಯೋಜಕರಾದ ಸಂತೋಷಕುಮಾರ ಟಿ.ಸಿದ್ದೇಶ್ವರ ಅವರು ವಾದ ಮಂಡಿಸಿದ್ದಾರೆ.
2023ರ ಜನವರಿ 30 ರಂದು ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಅಪ್ರಾಪ್ತ
ಬಾಲಕಿ ಶೆಡ್ಡಿನಲ್ಲಿ ಒಬ್ಬಳೆ ಮಲಗಿಕೊಂಡಿದ್ದಾಗ ಆರೋಪಿತನು ಶೆಡನಲ್ಲಿ ಬಂದು ಬಾಲಕಿಗೆ ನನಗೆ ಪ್ರೀತಿ ಮಾಡು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಅಂದಾಗ ಬಾಲಕಿ ನಾನು ಇನ್ನು ಚಿಕ್ಕವಳಿದ್ದು ನಾನು ನಿನಗೆ ಪ್ರೀತಿ ಮಾಡುವುದಿಲ್ಲ ಮತ್ತು ನಾನು ಶಾಲೆ ಕಲಿಯಬೇಕು ಅಂತ ಹೇಳಿರುತ್ತಾಳೆ.ಆದರೂ ಆತ ಒತ್ತಾಯದಿಂದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಮತ್ತೆ ಒಂದೆರಡು ದಿವಸ ಬಿಟ್ಟು ಮತ್ತೆ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಆರೋಪಿತನು ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಅಪ್ರಾಪ್ತೆ ಗರ್ಭವತಿ ಆದ ಬಗ್ಗೆ, ಆರೋಪಿತನು ಅಪರಾಧ ಮಾಡಿದ ಬಗ್ಗೆ ದೃಢಪಟ್ಟಿದ್ದರಿಂದ ಆರೋಪಿತನ ವಿರುದ್ಧ ಕಲಂ: 366,376(2),(ಎನ್), ಐ.ಪಿ.ಸಿ. ಹಾಗೂ ಕಲಂ.04,06 ಪೆÇೀಕ್ಸ್ ಕಾಯ್ದೆ ಅಡಿಯಲ್ಲಿ ಈ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ ಎಂದು ವಿಶೇಷ ಪೆÇೀಕ್ಸೊ ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























