
ಕಲಬುರಗಿ,ಅ.11: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ಯಶಸ್ವಿಯಾಗಿ ನಾಲ್ವರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಮಹಾಪ್ರಬಂಧ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವ್ಯವಹಾರ ಅಧ್ಯಯನ ನಿಕಾಯದ, ಅರ್ಥಶಾಸ್ತ್ರ ಅಧ್ಯಯನ ಮತ್ತು ಯೋಜನೆ ವಿಭಾಗ, ಇಂಜಿನೀಯರಿಂಗ್ ನಿಕಾಯದ, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇಂಜಿನೀಯರಿಂಗ್ ವಿಭಾಗÀ, ಮಾಧ್ಯಮ ಅಧ್ಯಯನ ನಿಕಾಯದ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ರಸಾಯನ ವಿಜ್ಞಾನ ನಿಕಾಯದ, ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿಪದವಿಯನ್ನು ಪ್ರದಾನ ಮಾಡಿ ಘೋಷಿಸಿದೆ.
ರವಿ ಕುಮಾರ್ ಅವರು, ವ್ಯವಹಾರ ಅಧ್ಯಯನ ನಿಕಾಯದ, ಅರ್ಥಶಾಸ್ತ್ರ ಅಧ್ಯಯನ ಮತ್ತು ಯೋಜನೆ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದು ಎಕಾನಾಮಿಕ್ಸ್ ಆಫ್ ಪ್ರಡೋಕ್ಷನ್ ಆಂಡ್ ಮಾರ್ಕೇಂಟಿಗ್ ಆಫ್ ರಾಬಿ ಮೈಜ್ ಇನ್ ಬಿಹಾರ : ಎ ಕೇಸ್ ಸ್ಟಡಿ ಆಫ್ ಕತಿಹಾರ ಆಂಡ್ ಖಗಾರಿಯಾ ಡಿಸ್ಟಿಕ್ಟ್ಸ್ ಎಂಬ ವಿಷಯದ ಮೇಲೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರು ಅರ್ಥಶಾಸ್ತ್ರ ಅಧ್ಯಯನ ಮತ್ತು ಯೋಜನೆ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಪುಷ್ಪಾ. ಎಂ. ಸವದತ್ತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಕೈಗೊಂಡಿದ್ದರು
ಅಶ್ವಿನಿ ಕುಮಾರ ಗಾದಿಗೆ ಅವರು ಇಂಜಿನೀಯರಿಂಗ್ ನಿಕಾಯದ, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇಂಜಿನೀಯರಿಂಗ್ ವಿಭಾಗÀದ ಸಂಶೋಧನಾ ವಿದ್ಯಾರ್ಥಿಯಾಗಿದ್ದು, “ಡಿಸೈನ್ ಆಫ್ ಮಲ್ಟಿಟೆಕ್ನಾಲಜಿಸ್ ರೇಡಿಯೋ ಪ್ರೇಕ್ವೆನ್ಸಿ ಪವರ್ ಅಂಪ್ಲಿಪೈರ್ಸ್ ಫಾರ್ 5ಜಿ ಸಬ್ 6 ಜಿಹೆಚ್ಜೆಡ್ ಅಪ್ಲಿಕೇಷನ್ಸ್” ಎಂಬ ವಿಷಯದ ಮೇಲೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಕಮ್ಯುನಿಕೇಷನ್ ಇಂಜಿನೀಯರಿಂಗ್ ವಿಭಾಗÀದ ಪ್ರಾಧ್ಯಾಪಕರಾದ ಪ್ರೊ.ಪರಮೇಶಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಕೈಗೊಂಡಿದ್ದರು.
ಚಂಡಿವಾಲಾ ಆಯುಷ್ ಪವನ್ ಅವರು ಮಾಧ್ಯಮ ಅಧ್ಯಯನ ನಿಕಾಯದ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದು “ಸ್ಪೆಷ್ಯಾಲಿಟಿ ಆಫ್ ಕಮ್ಯುನಿಕೇಟಿಂಗ್ ಯುಥ್ ಐಡೆಂಟಿಸ್ ಇನ್ ಹಿಂದಿ ವೆಬ್ ಸಿರೀಸ್ : ಪೊಲರೈಟಿಸ್ ಆಫ್ ಇಂಡ್ಯೂವಿಜುಲಿಟಿ ಆಂಡ್ ಕಲೆಕ್ಟೀವ್ ಸೋಸಿಯಲ್ ಸ್ಟ್ರಕ್ಚರ್” ಎಂಬ ವಿಷಯದ ಮೇಲೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದÀ ಸಹ ಪ್ರಾಧ್ಯಾಪಕರಾದ ಡಾ.ಓಯನಮ್ ಬೆಡಜಿತ್ ಮೈತೈ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಕೈಗೊಂಡಿದ್ದರು.
ಮಧುಸ್ಮಿತಾ ಹಾತಿಮುರೈ ಅವರು ರಸಾಯನ ವಿಜ್ಞಾನ ನಿಕಾಯದ, ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದು “ಇನ್ಪ್ಲುಯೆನ್ಸ್ ಆಫ್ ಡೀಪ್ ಯುಟೆಕ್ಟಿಕ್ ಸಾಲ್ವೆಂಟ್ಸ್ (ಡಿಇಎಸ್ಸ್) ಆನ್ ಲಿಂಗೋಸೆಲ್ಯೂಲೋಟಿಕ್ ಏಂಜೆಮ್ಸ್ ಆಕ್ಟಿವಿಟಿ ಆಂಡ್ ಟಾಕ್ಸಿಸಿಟಿ ಅಸೇಸ್ಮೆಂಟ್ ಆಫ್ ಡಿಇಎಸ್ಎಸ್” ಎಂಬ ವಿಷಯದ ರಸಾಯನ ಶಾಸ್ತ್ರ ವಿಭಾಗದÀ ಸಹಾಯಕ ಪ್ರಾಧ್ಯಾಪಕರಾದ ಡಾ.ಅಶೋಕ್ ಪಬ್ಬತ್ತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಕೈಗೊಂಡಿದ್ದರು.
ವಿ.ವಿ.ಯ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಪಿ.ಹೆಚ್.ಡಿ ಪದವಿ ಪಡೆದ ನಾಲ್ವರು ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಅವರ ಮಾರ್ಗದರ್ಶಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಮುಂದಿನ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದಲ್ಲಿ ಇನ್ನಷ್ಟು ಯಶಸ್ಸು ದೊರೆಯಲೆಂದು ಈ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.























