
ಕಲಬುರಗಿ ಅ. 11 : ನಗರದ ಅಡ್ವೊಕೇಟ್ಸ್ ಕಾಲೋನಿಯಲ್ಲಿರುವ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ
ನವರಾತ್ರಿ ಹಾಗೂ ದಸರಾ ಹಬ್ಬದ ಅಂಗವಾಗಿ ಶ್ರೀ ದಾನಮ್ಮ ದೇವಿಯ ಮಹಾಪುರಾಣ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಇಂದಿನಿಂದ ( ಅಕ್ಟೋಬರ್ 11) ಅ. 20 ರವರೆಗೆ ಜರುಗಲಿದ್ದು, ಪುರಾಣ ಕಾರ್ಯಕ್ರಮವನ್ನು ನರೋಣಾ ಹಾಗೂ ಗೋಳಾ (ಬಿ) ಹೊಸಮಠದ ಪೂಜ್ಯ ಚನ್ನಮಲ್ಲ ಸ್ವಾಮಿಗಳು ನಡೆಸಿಕೊಡಲಿದ್ದಾರೆ. ಪ್ರತಿದಿನ ಸಂಜೆ 6.30 ಕ್ಕೆ ಕಾರ್ಯಕ್ರಮಗಳು ಶುರುವಾಗಲಿವೆ.
ಇಂದು ಸಂಜೆ ಪೂಜ್ಯ ಚಂದ್ರಗುಂಡ ಶಿವಾಚಾರ್ಯರ ಸಾನಿಧ್ಯದಲ್ಲಿ, ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರತಿ ದಿನ ಪುರಾಣದ ನಂತರ ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದ್ದು, ನಗರದ ಸಾಧಕ ಉದ್ಯಮಿಗಳು, ಹಿರಿಯ ವಕೀಲರು ಹಾಗೂ 50 ವರ್ಷ ಸೇವೆ ಸಲ್ಲಿಸಿದ ವೈದ್ಯರನ್ನು ಅಲ್ಲದೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಉದಾರವಾಗಿ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಗುತ್ತದೆ. ಮನರಂಜನೆ ಕಾರ್ಯಕ್ರಮಗಳು ಇರುತ್ತವೆ. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕೂಡ ಇರಲಿದೆ.
ಕಲಬುರಗಿಯ ಸದ್ಭಕ್ತರು, ಶರಣ-ಶರಣೆಯರು ಈ ಜ್ಞಾನ ದಾಸೋಹದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸ್ವಾಮೀಜಿಯವರ ಪ್ರವಚನವನ್ನು ಆಲಿಸಿ ದಾನಮ್ಮ ದೇವಿಯ ಮತ್ತು ಮಹಾಲಕ್ಷ್ಮೀ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಜೇವರ್ಗಿ, ಕಾರ್ಯದರ್ಶಿ ಆರ್.ಜೆ ಭೂಸಾರೆ ಹಾಗೂ ಸದಸ್ಯರು ವಿನಂತಿಸಿದ್ದಾರೆ.























