Home ಸುದ್ದಿ ರಾಷ್ಟ್ರೀಯ ರಾಮಾಯಣ: ಕೈಕೇಯಿ, ಮಂಥರೆ ಪಾತ್ರ ಅನಾವರಣ

ರಾಮಾಯಣ: ಕೈಕೇಯಿ, ಮಂಥರೆ ಪಾತ್ರ ಅನಾವರಣ

ಮುಂಬೈ,ಅ.10-ಬಾಲಿವುಡ್‍ನ ಪ್ರತಿಭಾವಂತ ನಿರ್ದೇಶಕ ನಿತೇಶ್ ತಿವಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅತ್ಯಂತ ನಿರೀಕ್ಷಿತ ಚಲನಚಿತ್ರ ‘ರಾಮಾಯಣ’ದ ಕುರಿತಾದ ಹೊಸ ಅಪ್‍ಡೇಟ್ ಹೊರಬಿದ್ದಿದೆ. ಈ ಬಹುಕೋಟಿ ವೆಚ್ಚದ ಸಿನಿಮಾದಿಂದ ಪ್ರಮುಖ ಪಾತ್ರಗಳಾದ ರಾಣಿ ಕೈಕೇಯಿ ಮತ್ತು ಮಂಥರೆಯ ಪಾತ್ರಗಳ ಅಧಿಕೃತ ಪೆÇೀಸ್ಟರ್‍ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ.


ನಟಿ ಲಾರಾ ದತ್ತಾ ಅವರು ರಾಣಿ ಕೈಕೇಯಿ ಪಾತ್ರದಲ್ಲಿ ಹಾಗೂ ನಟಿ ಶೀಬಾ ಚಡ್ಡಾ ಅವರು ಮಂಥರೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಪೆÇೀಸ್ಟರ್‍ಗಳು ಬಿಡುಗಡೆಯಾದ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹಾಗೂ ಸಂಚಲನ ಸೃಷ್ಟಿಸಿವೆ.
ರಾಮಾಯಣ ಕಥೆಯಲ್ಲಿ ಅತಿ ನಿರ್ಣಾಯಕ ತಿರುವುಗಳನ್ನು ತರುವ ಈ ಎರಡು ಪಾತ್ರಗಳ ಲುಕ್ ಅನ್ನು ನಿರ್ಮಾಪಕರು ಬಹಳ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ರಾಣಿ ಕೈಕೇಯಿಯಾಗಿ ಲಾರಾ ದತ್ತಾ ಅವರು ರಾಜಮನೆತನದ ವಸ್ತ್ರ ಹಾಗೂ ಆಭರಣಗಳಲ್ಲಿ ಭವ್ಯವಾಗಿ ಕಾಣಿಸಿಕೊಂಡರೆ, ಶೀಬಾ ಚಡ್ಡಾ ಅವರು ಕೈಯಲ್ಲಿ ಕೋಲು ಹಿಡಿದು ಕುಟಿಲ ಬುದ್ಧಿಯ ಮಂಥರೆಯ ಪಾತ್ರಕ್ಕೆ ನ್ಯಾಯ ಒದಗಿಸುವಂತೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಕಥೆಯ ಗತಿಯನ್ನೇ ಬದಲಿಸುವ ತಂದೆಯ ಪ್ರೀತಿಯ ವಂಚನೆ ಮತ್ತು ಎರಡು ವರಗಳ ಹಿನ್ನೆಲೆಯನ್ನು ಈ ಪೆÇೀಸ್ಟರ್‍ಗಳು ಬಿಂಬಿಸುತ್ತವೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೆÇೀಕಸ್ ಸ್ಟುಡಿಯೋಸ್, ಡಿಎನ್‍ಇಜಿ ಹಾಗೂ ನಟ ಯಶ್ ಅವರ ಮಾನ್ಸ್‍ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ಮಹಾತ್ವಾಕಾಂಕ್ಷೆಯ ಸಿನಿಮಾವು ನಿರ್ಮಾಣವಾಗುತ್ತಿದೆ. ಈ ಎರಡು ಭಾಗಗಳ ಸಿನಿಮಾದ ಮೊದಲ ಹಂತವು 2026ರ ದೀಪಾವಳಿಯಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ.


ಇದರ ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದ್ದು, ರಣಬೀರ್ ಕಪೂರ್ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವ ಈ ಬ್ರಹ್ಮಾಂಡ ಕಥೆಯ ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಗರಿಗೆದರಿದೆ.