Home ಜಿಲ್ಲೆ ಬೆಂಗಳೂರು ಶಿಸ್ತು,ಮಾನವೀಯ ಮೌಲ್ಯ ಬೆಳೆಸಿಕೊಳ್ಳುವುದು ವಿದ್ಯಾರ್ಥಿ ಕರ್ತವ್ಯ

ಶಿಸ್ತು,ಮಾನವೀಯ ಮೌಲ್ಯ ಬೆಳೆಸಿಕೊಳ್ಳುವುದು ವಿದ್ಯಾರ್ಥಿ ಕರ್ತವ್ಯ

ಕನಕಪುರ. ಅ.೯- ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ ಎಂದು ಶಿವಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಅನ್ನದಾನನಾಥೇಶ್ವರ ಸ್ವಾಮಿಗಳು ಹೇಳಿದ್ದಾರೆ.


ತಾಲೂಕಿನ ಉಯ್ಯಂಬಳ್ಳಿ ಹೋಬಳಿಗೆ ಸೇರಿದ ಯಡಮಾರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೦೫-೦೬ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ನೇಹ ಸಂಗಮ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.


ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ. ಶಿಕ್ಷಕರು ನೀಡುವ ಜ್ಞಾನ ಹಾಗೂ ಮಾರ್ಗದರ್ಶನವನ್ನು ಗೌರವದಿಂದ ಸ್ವೀಕರಿಸಿ ಜೀವನದಲ್ಲಿ ಅಳವಡಿಸಿ oಟಿಟಥಿ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.


ಶಿಕ್ಷಕರಾದ ಗಂಗಾಧರ್ ಹಾಗೂ ರಾಘವೇಂದ್ರ ಸ್ವಾಮಿ, ರಮೇಶ್ ಹೊಸಮುನಿ ಮಾತನಾಡಿ, ವಿದ್ಯಾಭ್ಯಾಸ ಮುಗಿಸಿ ಹಲವಾರು ವರ್ಷಗಳ ನಂತರವೂ ತಮ್ಮ ಶಾಲೆ ಹಾಗೂ ಶಿಕ್ಷಕರನ್ನು ಮರೆಯದೆ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಗುರುಗಳನ್ನು ಗೌರವಿಸುತ್ತಿರುವುದು ಶ್ಲಾಘನೀಯವಾದ ವಿಚಾರವಾಗಿದೆ. ಇಂತಹ ಕಾರ್ಯಕ್ರಮಗಳು ಹಳೆಯ ನೆನಪುಗಳನ್ನು ಮೆಲುಕು ಹಾಕುವುದರೊಂದಿಗೆ ಗುರು ಶಿಷ್ಯರ ನಡುವೆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೆಲಿಸುತ್ತದೆ ಎಂದು ಹೇಳಿದರು.


ವಿದ್ಯಾರ್ಥಿಗಳಾದ ಮಲ್ಲೇಶ್‌ಶಿವಪ್ಪ, ಎನ್. ಕಾಂತರಾಜು, ನಿಂಗರಾಜು ಮರೀಗೌಡ ಮಾತನಾಡಿ, ನಮ್ಮ ಶಿಕ್ಷಕರು ಪಾಠ ಬೋಧಿಸುವುದರ ಜೊತೆಗೆ, ಜೀವನದ ಮೌಲ್ಯಗಳನ್ನು ಸಹ ತಿಳಿಸಿಕೊಡುತ್ತಿದ್ದರು. ಜೊತೆಗೆ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳನ್ನು ಆಲಿಸಿ ನಮ್ಮಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಡಿದರ ಫಲವಾಗಿ ನಾವು ಉತ್ತಮ ನಾಗರಿಕರಾಗಲು ಪ್ರೇರಣೆಯಾಗಿದ್ದರು. ಹಾಗಾಗಿ ಇಂದು ಸಮಾಜದ ಹಲವು ಕ್ಷೇತ್ರಗಳಲ್ಲಿ ನಾವು ಉತ್ತಮ ಪ್ರಜೆಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಕಾರ್ಯಕ್ರಮಕ್ಕೆ ಎಲ್ಲರನ್ನು ಶಿವಪ್ರಸಾದ್ ಸ್ವಾಗತಿಸಿದರು. ಪ್ರಾರ್ಥನೆಯನ್ನು ವಿದ್ಯಾರ್ಥಿನಿಯರಾದ ಕೆಂಪಮ್ಮ, ಗೀತಾ, ನಾಗರತ್ನ ಸುಚಿತ್ರ, ನಿಂಗರಾಜಮ್ಮ, ಸಾಂಭವಿ, ಕಾವ್ಯ ಶೃತಿ, ಇಂದ್ರಮ್ಮ, ಬೇಬಿ, ರಮ್ಯ ಗೀತಾ, ಶಿಲ್ಪ, ಸಹನಾ ನಡೆಸಿಕೊಟ್ಟರು. ನಿರೂಪಣೆಯನ್ನು ನಗೆಮಳೆರಾಜ ಚಂದ್ರರಾಜ್ ನಡೆಸಿಕೊಟ್ಟರು.


ವಿದ್ಯಾರ್ಥಿಗಳಾದ ಆರ್. ಸುನಿಲ್, ಆರ್. ಶಿವಪ್ರಸಾದ್, ಶಿವು, ಸಿದ್ದು, ಕುಮಾರ್, ಎ. ಗಿರೀಶ್, ಗಂಗಾಧರ್, ಚಿರಂಜೀವಿ, ಸುನೀಲ್ ಎ, ವೇಣುಗೋಪಾಲ್, ವಿಜಯ್ ಕುಮಾರ್, ವಿಶ್ವ ಅಭಿಷೇಕ್, ಸಂಜೀವ್‌ಕುಮಾರ್ ಮಂಜೇಶ್, ವೀರೇಶ್, ಮುನೇಶ್, ಹಾಗೂ ವಿದ್ಯಾರ್ಥಿನಿಯರಾದ ಸೌಮ್ಯ, ಶಾಲಿನಿ, ಪ್ರೀತಿ, ರವರುಗಳು ಉಸ್ತುವಾರಿ ವಹಿಸಿ ಯಶಸ್ವಿಗೊಳಿಸಿದರು.


ಇದೇ ವೇದಿಕೆಯಲ್ಲಿ ಶಿಕ್ಷಕರಾದ ಗಂಗಾಧರ್, ರಮೇಶ್, ರಾಘವೇಂದ್ರಸ್ವಾಮಿ, ನಾಗರಾಜು, ರವಿ, ಕಮಲೇಗೌಡ, ಎ. ಬಿ. ಗಡ್ಡೆಡದ ಪ್ರಕಾಶ್, ಚಂದ್ರಶೇಖರ್ ಕೃಷ್ಣಮೂರ್ತಿ, ತಿಮ್ಮಪ್ಪ, ಅಂಜನಪ್ಪ, ಗುರುಪಾದ, ಶಶಿಕುಮಾರ್, ಶಿವರಾಜು, ಸಿದ್ದರಾಜೇಗೌಡ, ನಾಗರತ್ನ ಸುಧಾ, ಪಾರ್ವತಮ್ಮ, ಹೆಲನ್‌ಮೇರಿ, ರಮ್ಯಾ, ಪರಿಮಳ, ಕೀರ್ತಿನಿ, ಭವ್ಯ, ರಾಜಪ್ಪನವರನ್ನು ಸನ್ಮಾನಿಸಲಾಯಿತು.