Home ಜಿಲ್ಲೆ ಬೆಂಗಳೂರು ಮುರಳಿ ಸಾವಿನ ಪ್ರಕರಣದಲ್ಲಿ ಸಿಒಡಿ ತನಿಖೆ ಆಗ್ರಹ

ಮುರಳಿ ಸಾವಿನ ಪ್ರಕರಣದಲ್ಲಿ ಸಿಒಡಿ ತನಿಖೆ ಆಗ್ರಹ

ಮಾಲೂರು.ಅ.೯- ತಾಲ್ಲೂಕಿನ ಮಾಸ್ತಿ ಹೋಬಳಿ ದೇವರಹಳ್ಳಿ ಗ್ರಾಮದ ಮುರಳಿ ಸಾವಿನ ಪ್ರಕರಣವನ್ನು ಖಂಡಿಸಿ ಹಲವಾರು ಸಂಘಟನೆಗಳ ಮುಖಂಡರು ಬೃಹತ್ ಪಾದಯಾತ್ರೆ ನಡೆಸಿದರು.


ಪಾದಯಾತ್ರೆ ವೇಳೆ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಕೂಡಲೇ ಬಂಧಿಸಬೇಕೆಂದು, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಓಂಪ್ರಕಾಶ್ ಗೌಡ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.


ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.


ದೇವರಹಳ್ಳಿ ಗ್ರಾಮದಿಂದ ಆರಂಭವಾದ ಪಾದಯಾತ್ರೆಯು ಮಾಸ್ತಿ ಮಾರ್ಗವಾಗಿ ಮಾಲೂರು ತಾಲ್ಲೂಕು ಕಚೇರಿವರೆಗೆ ಸಾಗಿತು. ಈ ಪಾದಯಾತ್ರೆಯಲ್ಲಿ ಹಲವಾರು ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡರು. ಮುರಳಿ ಸಾವಿನ ಪ್ರಕರಣಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.


ಪ್ರತಿಭಟನಾಕಾರರು ಮಾಲೂರು ತಾಲ್ಲೂಕು ಕಚೇರಿ ತಲುಪಿದ ಬಳಿಕ, ತಮ್ಮ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಅಲ್ಲದೆ, ಮುಖಂಡರು ತಹಶೀಲ್ದಾರ್ ಎಂ.ವಿ. ರೂಪಗೆ ಮನವಿ ಸಲ್ಲಿಸಿದರು.


ಕದಸಂಸ ತಾಲ್ಲೂಕು ಸಂಚಾಲಕ ಎಸ್.ಎಂ. ವೆಂಕಟೇಶ್,ಮುರಳಿ ಸಾವಿನ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಬೇಕಾದರೆ ನಿರಕ್ಷಪಾತ ತನಿಖೆ ಅಗತ್ಯವಿದೆ. ಕುಟುಂಬಸ್ಥರಿಗೆ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸುವುದು ಎಂದರು.