
ವಿಜಯಪುರ, ಆ.31:
ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಪೆÇಲೀಸರು ರೌಡಿ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಿ, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ಪೆÇಲೀಸ್ ಠಾಣೆ ಹಾಗೂ ವೃತ್ತ ಮಟ್ಟದಲ್ಲಿ ‘ರೌಡಿ ನಿಗ್ರಹ ದಳ’ (ಂಟಿಣi ಖoತಿಜಥಿ Squಚಿಜ) ರಚಿಸಲಾಗಿದ್ದು, ರೌಡಿಶೀಟರ್ಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ.
ಇದರ ಭಾಗವಾಗಿ ಆ.30ರಂದು ಬೆಳಗ್ಗೆ 4ರಿಂದ 8 ಗಂಟೆಯವರೆಗೆ ಜಿಲ್ಲೆಯ 25 ಕಾನೂನು ಸುವ್ಯವಸ್ಥೆ ಪೆÇಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಕ್ರಿಯ ರೌಡಿಶೀಟರ್ಗಳ ಮನೆಗಳಿಗೆ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ರೌಡಿಶೀಟರ್ಗಳ ಪ್ರಸ್ತುತ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಲಾಯಿತು.
ಒಟ್ಟು 482 ರೌಡಿಶೀಟರ್ಗಳ ಮನೆಗಳನ್ನು ಪರಿಶೀಲಿಸಲಾಗಿದ್ದು, ದಾಖಲೆಗಳಿಲ್ಲದೆ ಅಥವಾ ಸಮರ್ಪಕ ವಿವರಣೆ ನೀಡಲಾಗದ ರೀತಿಯಲ್ಲಿ ಬಳಸುತ್ತಿದ್ದ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು, ಸಂಬಂಧಪಡದ ವ್ಯಕ್ತಿಗಳ ಆಸ್ತಿ ದಾಖಲೆಗಳು, ಚೆಕ್ಬುಕ್ ಸೇರಿದಂತೆ ಇತರ ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ ಬಾಕಿ ಇರುವ ಓಃWಗಳು, ಬಾಂಡ್ ಉಲ್ಲಂಘನೆ ಹಾಗೂ ಆಸ್ತಿ ಮುಟ್ಟುಗೋಲು/ವಶಪಡಿಸಿಕೊಳ್ಳುವಿಕೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.
ತಪಾಸಣೆ ವೇಳೆ ಪತ್ತೆಯಾದ ಅನಧಿಕೃತ ವಸ್ತುಗಳು ಹಾಗೂ ಸೂಕ್ತ ದಾಖಲೆಗಳಿಲ್ಲದ ವಾಹನಗಳ ಕುರಿತು ನಿಯಮಾನುಸಾರ ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೆÇಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.































