
ಹುಬ್ಬಳ್ಳಿ,ಆ೩೧: ಯುವಕರಲ್ಲಿ ಐಕ್ಯತೆ, ಏಕತೆ ಹಾಗೂ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಚಿಸಲಾದ ಕನ್ನಡ ಜಾಗೃತಿ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಅಧ್ಯಕ್ಷರಾಗಿ ಶುಭಂ ಗಡೇಪ್ಪ, ಉಪಾಧ್ಯಕ್ಷರಾಗಿ ವಿನೋದ್ ಬೋಜಗಾರ, ಸದಸ್ಯರಾಗಿ ಅಭಿಷೇಕ, ಮನೋಜ್, ರಾಕೇಶ್, ಆಕಾಶ, ಸಾಗರ, ಸಂತೋಷ, ಯಮನೂರಿ ಹಾಗೂ ವಿನೋದ್ ಅವರು ಪದಾಧಿಕಾರ ಸ್ವೀಕರಿಸಿದರು.































